ಲಾರಿ ಹಾಯ್ದು ಮೊಸಳೆ ಸಾವು ನಾಗರಿಕರ ಆಕ್ರೋಶ
ಸೇತುವೆ ಮೇಲೆ ಬಂದ ಮೊಸಳೆ ಲಾರಿಗೆ ಬಲಿ
ಯಾದಗಿರಿ : ಜಿಲ್ಲೆಯ ವಡಗೇರಾ ತಾಲೂಕಿನ ಕದರಾಪೂರ ಗ್ರಾಮದ ಕೃಷ್ಣಾ ನದಿಯ ಬ್ರಿಜ್ ಕಂ ಬ್ಯಾರೇಜ್‍ನ ಮೇಲೆ ಭಾನುವಾರ ರಾತ್ರಿ ಮೊಸಳೆ ರಸ್ತೆ ಅಫಘಾತದಲ್ಲಿ ಸಾವನ್ನಪ್ಪಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕೃಷ್ಣಾ ನದಿಯಲ್ಲಿ ಸಾಕಷ್ಟು ಮೊಸಳೆಗಳಿದ್ದು, ಇತ್ತೀಚಿನ ದಿನಗಳಲ್ಲಿ ನದಿಯ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಆಹಾರ ಅರಸಿ ಗ್ರಾಮದ ಗದ್ದೆಗಳು ಹಾಗೂ ರಸ್ತೆಗಳ ಮೇಲೆ ಓಡಾಡುತ್ತಿದ್ದ ಮೊಸಳೆ ಮೇಲೆ ಲಾರಿ ಹಾಯ್ದು ಹೋದ ಪರಿಣಾಮ ಮೊಸಳೆ ಮೃತಪಟ್ಟಿದೆ.
ಈ ಸಮಸ್ಯೆ ಕುರಿತು ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿ ಮೊಸಳೆಗಳನ್ನು ಬೇರೆ ಕಡೆ ಸ್ಥಳಾಂತರ ಮಾಡಿ ಎಂದರೂ ಅವರು ಗಮನ ಹರಿಸುತ್ತಿಲ್ಲ. ಇದರಿಂದ ಮೊಸಳೆಗಳು ಸಾವನ್ನಪ್ಪುತ್ತಿವೆ ಎಂದು ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಪ್ರಧಾನಕಾರ್ಯದರ್ಶಿ ನಿಂಗಣ್ಣ ಜಡಿ ಅಧಿಕಾರಿಗಳ ವಿರುದ್ಧ ಅಸಮಾಧಾನವ್ಯಕ್ತಪಡಿಸಿದ್ದಾರೆ.
ಮೊಸಳೆ ಅಪಘಾತದಲ್ಲಿ ಸತ್ತಿತೇ..?ಅಥವಾ ಅಪಘಾತ ಮಾಡಿದರಾ..?
ಮೊಸಳೆ ಸಾವಿಗೆ ಪ್ರಾಣಿ ದಯಾಪರರ ಶಂಕೆ..?
ಗೂಗಲ್ ಸೇತುವೆಯಲ್ಲಿ ಸಾಕಷ್ಟು ಮೊಸಳೆ ಇರುವುದೇನು ನಿಜ. ಆದರೆ ಇತ್ತೀಚೆಗೆ ನದಿಯಲ್ಲಿ ನೀರಿಲ್ಲದಿದ್ದಾಗ ಅವುಗಳ ಸಮೀಪದ ಗದ್ದೆ, ಜಮೀನುಗಳಿಗೆ ನುಗ್ಗುವುದು ಸಹಜ. ಾದರೆ ಸೇತವೆ ಮೇಲೆ ಬಂದಿದೆ ಎಂಬುದು ನಂಬಲು ಅಸಾಧ್ಯವೆನ್ನುವದು ಪ್ರಾಣಿದಯಾಪರರವಾದವಾಗಿದೆ.
ಅಲ್ಲದೆ ಮೊಸಳೆ ಮೇಲೆ ಲಾರಿ ಹರಿದಿದ್ದರೆ, ರಸ್ತೆಗೆ ಅಡ್ಡಲಾಗಿ ಮೊಸಳೆ ಚಲಿಸುತ್ತಿರಬೇಕು. ಆದರೆ ಈ ಮೊಸಳೆ ರಸ್ತೆ ಬದಿ ಉದ್ದವಾಗಿ ಬಿದ್ದಿದೆ ಎಂದು ಸೂಕ್ಷ್ಮ ವಿಚಾರಿಸಿ ಎಂಬುವ ಕುರಿತು ಅವರು ಗಮನ ಸೆಳೆದಿದ್ದಾರೆ.
ಹೀಗಾಗಿ ಅರಣ್ಯ ಅಧಿಕಾರಿಗಳ ಮೇಲೆ ಗೂಬೆ ಕೂಡಿಸುವ ಕೆಲಸವು ಇಲ್ಲಿ ನಡೆದಿರುವ ಶಂಕೆಯನ್ನು ಹಲವರು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅರಣ್ಯ ಅಧಿಕಾರಿಗಳು ಬೇಜವಬ್ದಾರಿಯೂ ಇಲ್ಲಿದೆ ಇಲ್ಲ ಎನ್ನಲೂ ಸಾಧ್ಯವಿಲ್ಲ. ಹೀಗಾಗಿ ಮೊಸಳೆ ಅಪಘಾತ ಕುರಿತು ಕುಲಕುಂಷವಾಗಿ ತನಿಖೆ ನಡೆಯಲಿ ಎಂಬುದು ಶಹಾಪುರ ತಾಲೂಕಿನ ಪ್ರಾಣಿದಯಾಪರರು ವಿನಯವಾಣಿಗೆ ತಿಳಿಸಿದ್ದಾರೆ.