ಪ್ರಮುಖ ಸುದ್ದಿ
ಯಾದಗಿರಿ : ಕೃಷ್ಣಾ ನದಿ ರಭಸಕ್ಕೆ ಕೊಚ್ಚಿ ಹೋಯಿತು ಸೇತುವೆ!
(ಸಾಂದರ್ಭಿಕ ಚಿತ್ರ)
ಯಾದಗಿರಿ : ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 5.40ಲಕ್ಷ ಕ್ಯೂಸೆಕ್ ನೀರು ಹರಿದು ಬಂದ ಪರಿಣಾಮ ನೀರಿನ ರಭಸಕ್ಕೆ ಸೇತುವೆ ಕೊಚ್ಚಿ ಹೋದ ಘಟನೆ ನೀಲಕಂಠರಾಯನ ಗಡ್ಡಿ ಸಮೀಪ ನಡೆದಿದೆ. ಅಂತೆಯೇ ನೀಲಕಂಠರಾಯನ ಗಡ್ಡಿ ಗ್ರಾಮದ ಸಂಪರ್ಕ ಕಡಿತಗೊಂಡಿದ್ದು ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಸೃಷ್ಠಿ ಆಗಿದೆ. ಇತ್ತೀಚೆಗಷ್ಟೇ ನಿರ್ಮಿಸಲಾಗಿದ್ದ ಸೇತುವೆ ಕೊಚ್ಚಿಹೋಗಿದ್ದು ಕಂಡ ಗ್ರಾಮೀಣ ಜನ ಆತಂಕಕ್ಕೆ ಒಳಗಾಗಿದ್ದು ಈ ಪ್ರವಾಹಕ್ಕೆ ಅದ್ಯಾವಾಗ ಬ್ರೇಕ್ ಬೀಳುತ್ತೋ ಎಂದು ಕಾದು ಕೂಡುವಂತಾಗಿದೆ.