ಕಥೆಯ ಸಾರಾಂಶ ಅರಿಯುವುದು ಅಗತ್ಯ – ಡಾ. ಎಸ್.ಎಸ್.ಗುಬ್ಬಿ
ಶಹಾಪುರ :ಕಥೆಗಳು ಮೌಕಿಕವಾಗಿ ಹೇಳುವುದು ಸುಲಭವಾದರೂ ಬರವಣಿಗೆಯ ಮೂಲಕ ಕತೆಗಳು ಅಭಿವ್ಯಕ್ತಿ ಪಡಿಸುವ ಕಲೆ ಅಷ್ಟೆ ಕಠಿಣವಾದದ್ದು ಆದ್ದರಿಂದ ಓದಿನ ಪ್ರೀತಿ ಬೆಳೆಸುವ ನಿಟ್ಟಿನಲ್ಲಿ ಹೆಚ್ಚು ಕಥಾ ಸಂಕಲವನ್ನು ಹಾಗಾಗ ಓದುವುದರ ಜೊತೆಗೆ ಅದರ ಸಾರಾಂಶ ಅರಿತುಕೆuಟಿಜeಜಿiಟಿeಜಳ್ಳುವ ಅಗತ್ಯತೆ ಇದೆ ಎಂದು ಖ್ಯಾತ ವೈದ್ಯ ಸಾಹಿತಿಗಳಾದ ಡಾ. ಎಸ್. ಎಸ್.ಗುಬ್ಬಿ ಅವರು ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಯುವ ಕಥೆಗಾರ ಆನಂದ್ ಗೊಬ್ಬಿಯವರ ರಚಿಸಿರುವ “ನಿರುದ್ಯೋಗಕ್ಕೆ ಹೆಣವಾದ ಅಪ್ಪ” ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಇನ್ನೋರ್ವ ಅತಿಥಿ ಗಳು ಹಾಗೂ ಯುವ ಕಥೆಗಾರರ ಸಂಗನಗೌಡ ಹಿರೇಗೌಡರ್ ಮಾತನಾಡಿ ಕಥೆಗಳು ಬರೆಯುವಾಗ ಆಯ್ದುಕೆuಟಿಜeಜಿiಟಿeಜಳ್ಳುವ ವಿಷಯ ವಸ್ತು ನಿಷ್ಠ ಪ್ರಮುಖ ವಿಚಾರಧಾರೆಗಳನ್ನು ಮುಂದಿಟ್ಟುಕೊಂಡು ಅದಕ್ಕನುಗುಣವಾಗಿ ಬರವಣಿಗೆ ಮೂಲಕ ಕತೆ ಎಣೆದರೆ ನಿರೀಕ್ಷೆಗೂ ಮೀರಿ ಅಪೇಕ್ಷಿತ ಫಲ ದೊರಕುವುದು ಎಂದು ಸುದೀರ್ಘವಾಗಿ ಕೃತಿಯ ಕುರಿತು ಮಾತನಾಡಿದರು.
ಇಲ್ಲಿ ಆನಂದ್ ಗೊಬ್ಬಿಯವರ ಅನೇಕ ವಿಚಾರಧಾರೆಗಳನ್ನು ಅವರಿಗೆ ತೋಚಿದ ಕಂಡದ್ದೆಲ್ಲವನ್ನೂ ನೋಡಿದ್ದೆಲ್ಲವನ್ನೂ ಹೊಸತನವೆನಿಸುವ ಪ್ರತಿಯೊಂದನ್ನ ಕುತೂಹಲ ಮೂಡಿಸುವ ನಿಟ್ಟಿನಲ್ಲಿ ಈ ಕೃತಿಯ ಪ್ರಮುಖ ಅಂಶಗಳು ಅಡಕವಾಗಿವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಿದ್ದಲಿಂಗಣ್ಣ ಆನೇಗುಂದಿ ಮಾತನಾಡುತ್ತಾ ಕಥೆಗಾರ ನೇರವಾಗಿ ಏನನ್ನೂ ಹೇಳದಿದ್ದರೂ ಓದುಗರಿಗೆ ತಲುಪುವ ರೀತಿಯಲ್ಲಿ ಬಹಳ ಸರಳ ಹಾಗೂ ಅತ್ಯದ್ಭುತವಾಗಿ ಹೇಳಬಯಸುತ್ತಾನೆ ಎಂದರು.
ಈ ಸಮಾರಂಭದ ವೇದಿಕೆಯ ಮೇಲೆ ಹನುಮೇಗೌಡ ಬಿರನಕಲ್ ಮುಖ್ಯ ಅತಿಥಿ ಗಳು ಹಾಗೂ ಸಂಶೋಧಕರಾದ ಡಾ. ಮೋನಪ್ಪ ಶಿರವಾಳ ಯುವ ಸಾಹಿತಿಗಳಾದ ಡಾ.ಗಾಳೆಪ್ಪ ಪೂಜಾರಿ ಶರಣಬಸಪ್ಪ ವಡ್ಡನಕೇರಿ ಯುವ ಮುಖಂಡರಾದ ಮಾಣಿಕರೆಡ್ಡಿ ದರ್ಶನಾಪುರ ಹಾಗೂ ಇತರರು ಉಪಸ್ಥಿತರಿದ್ದರು.
ಶಾಕುಂತಲಾ ಗೊಬ್ಬಿ ಪ್ರಾರ್ಥಿಸಿದರು,ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ದೃಶ್ಯಕಲಾ ವಿಭಾಗದ ಪ್ರಾಧ್ಯಾಪಕರಾದ ಡಾ. ಬಸವರಾಜ ಕಲೆಗಾರ, ಪ್ರಾಸ್ತಾವಿಕ ನುಡಿಗಳಾಡಿದರು ಬಸವರಾಜ ಸಿನ್ನೂರ ನಿರೂಪಿಸಿದರು,ಶರಣು ಕಲ್ಮನಿ, ಸ್ವಾಗತಿಸಿದರು ನಿಂಗಪ್ಪ ಐಕೂರು ವಂದಿಸಿದರು.