ಪ್ರಮುಖ ಸುದ್ದಿ
ಹಿಂದೆ ಬಿಜೆಪಿ ನಾಯಕರ ಮೇಲೆ ದಾಳಿ ನಡೆದಿರುವದು ಕಾಂಗ್ರೆಸ್ ಮಾಡಿಸಿದ್ದಾ.?
ಬೆಂಗಳೂರಃ ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಬಿಜೆಪಿ ನಾಯಕರ ಮನೆ ಮೇಲೆ ಸಾಕಷ್ಟು ಐಟಿ, ಇಡಿ ಮತ್ತು ಸಿಬಿಐ ದಾಳಿ ನಡೆದಿವೆ. ಆಗ ಕಾಂಗ್ರೆಸ್ ನವರು ದಾಳಿ ಮಾಡಿಸಿರುವದಾ.. ಎಂದು ಬಿಜೆಪಿ ನಾಯಕ, ಸಚಿವ ಕೆ.ಎಸ್. ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.
ಮುಂದುವರೆದು ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಐಟಿ, ಸಿಬಿಐ ಮತ್ತು ಇಡಿ ಸಂವಿಧಾನಾತ್ಮಕ ಸಂಸ್ಥೆಗಳಾಗಿದ್ದು, ಅವುಗಳಿಗೆ ಸಂಶಯ ಬಂದಲ್ಲಿ ದಾಳಿ ನಡೆಸುವ ಮೂಲಕ ಪರಿಶೀಲನೆ ನಡೆಸುತ್ತವೆ. ಸಂಸ್ಥೆಗಳು ತಮ್ಮ ಕರ್ತವ್ಯವನ್ನು ತಾವೂ ಮಾಡುತ್ತವೆ. ಸುಮ್ಮೆ ಬಿಜೆಪಿ ಮೇಲೆ ಆರೋಪ ಮಾಡುವದು ಸರಿಯಲ್ಲ. ಈ ಹಿಂದೆ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರವಿದ್ದಾಗ, ದೇಶದಾದ್ಯಂತ ದಾಳಿಗಳು ನಡೆದಿವೆ. ಬಿಜೆಪಿ ನಾಯಕರ ಮೇಲೆ ಸಾಕಷ್ಟು ದಾಳಿ ನಡೆಸಿವೆ.
ಆಗ ಕಾಂಗ್ರೆಸ್ ನವರೇ ದಾಳಿ ಮಾಡಿಸಿದ್ದಾರೆ ಎನ್ನುವದಾದೆ ಆರೋಪ ಮಾಡಬಹುದು ಎನ್ನುವ ಮೂಲಕ ಆರೋಪಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.