ಪ್ರಮುಖ ಸುದ್ದಿ
KSRP ಸೇರಲು ಬಂದ ಯುವಕ ಕವಾಯತು ಮೈದಾನದಲ್ಲೇ ಸಾವು!
ಕಲಬುರ್ಗಿಃ ಕೆಎಸ್ ಆರ್ ಪಿ ಪೇದೆ ಸೆಲೆಕ್ಷನ್ ಗೆ ಬಂದ ಯುವಕನೋರ್ವ ಕವಾಯತು ನಡೆಯುವ ಪೊಲೀಸ್ ಮೈದಾನದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟ ಯುವಕ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಿವಾಸಿ ವಿಕಾಸ ತಂದೆ ಸಂಜು ಗಾಯಕವಾಡ ಎಂದು ತಿಳಿದು ಬಂದಿದೆ. ಈತ ಕವಾಯತು ನಡೆದ ಸಂದರ್ಭ ಹೃದಯಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾನೆ ಎಂದು ಶಂಕಿಸಲಾಗಿದೆ
ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಕೆಎಸ್ ಆರ್ ಪಿಸಿ ಗೆ ನಡೆಯುತ್ತಿದ್ದ ಸೆಲೆಕ್ಷನ್ ವೇಳೆ ರನ್ನಿಂಗ್ ಮಾಡುವಾಗ ಈ ಘಟನೆ ಜರುಗಿದೆ. ಆಸ್ಪತ್ರೆಗೆ ಈಶಾನ್ಯ ವಲಯ ಐಜಿ ಮುರುಗನ್ ಹಾಗೂ ಎಸ್ಪಿ ಎನ್ ಶಶಿಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ