ಪ್ರಮುಖ ಸುದ್ದಿ
ನನ್ನ ಸರ್ಕಾರ ಉರುಳಿಸಿದ್ದೇ ಡ್ರಗ್ಸ್ ದಂಧೆಕೋರರು- ಎಚ್.ಡಿ.ಕುಮಾರ ಸ್ವಾಮಿ ಅಬ್ಬರ
ನನ್ನ ಸರ್ಕಾರ ಉರುಳಿಸಿದ್ದೇ ಡ್ರಗ್ಸ್ ದಂಧೆಕೋರರು- ಎಚ್.ಡಿ.ಕುಮಾರ ಸ್ವಾಮಿ ಅಬ್ಬರ
ಬೆಂಗಳೂರಃ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಯಾಗಿದ್ದಾಗ ನಾನು ಡ್ರಗ್ಸ್ ದಂಧೆ ಮಟ್ಟ ಹಾಕಲು ಯತ್ನಿಸಿದೆ ಈ ವೇಳೆ ಕೆಲವರು ಶ್ರೀಲಂಕಾಗೆ ಓಡಿ ಹೋದರು. ಮೈತ್ತಿ ಸರ್ಕಾರ ಬೀಳಿಸಲು ಈ ಡ್ರಗ್ಸ್ ಮಾಫಿಯಾವೇ ಕಾರಣ, ಈ ದಂಧೆಕೋರರು ಮೈತ್ರಿ ಸರ್ಕಾರ ಉರುಳಿಸಿದ್ದಾರೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಸರ್ಕಾರ ಕೆಡವಲು ಡ್ರಗ್ಸ್, ಕ್ರಿಕೆಟ್ ಬೆಟ್ಟಿಂಗ್ ಮತ್ತು ಪಬ್ ಹಣ ಬಳಕೆಯಾಗಿದೆ ಎಂದು ದೂರಿದರು.
ಇಂತಹ ಕೆಟ್ಟ ದಂಧೆ ನಡೆಸುತ್ತಿರುವ ಮಾಫಿಯಾ ಹಿಂದೆ ಎಷ್ಟೇ ಪ್ರಭಾವಿ ವ್ಯಕ್ತಿ ಇದ್ದರೂ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮಕೈಗೊಳ್ಳಬೇಕು. ಡ್ರಗ್ಸ್ ನಿಂದ ಅದೆಷ್ಟೋ ಬಾಲಕರ ಬದುಕು ಹಾಳಾಗಿದೆ. ಅದರಿಂದ ಕುಟುಂಬಗಳು ಇಂದಿಗೂ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.
ಸರ್ಕಾರ ಕುಡಲೇ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಬೇಕು ದಂಧೆಕೋರರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.