Homeಕ್ಯಾಂಪಸ್ ಕಲರವಜನಮನಮಹಿಳಾ ವಾಣಿವಿನಯ ವಿಶೇಷ

ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 5000 ಸ್ಕಾಲರ್ ಶಿಪ್: ಈ ರೀತಿ ಅರ್ಜಿ ಸಲ್ಲಿಸಿ

(manchester scholarship) ಸ್ನಾತಕೋತ್ತರ ಓದುತ್ತಿರುವ ವಿದ್ಯಾರ್ಥಿಗಳಿಗೆ 2024 ನೇ ಸಾಲಿನ ಮ್ಯಾಂಚೆಸ್ಟರ್ ಹ್ಯುಮಾನಿಟೀಸ್ ಇಂಟರ್ನ್ಯಾಷನಲ್ ಎಕ್ಸಲೆನ್ಸ್ ಸ್ಕಾಲರ್ಶಿಪ್ ನೀಡುತ್ತಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ ಏನು, ಅರ್ಜಿ ಸಲ್ಲಿಕೆ ಹೇಗೆ? ಕೊನೆಯ ದಿನಾಂಕ ಯಾವಾಗ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಮ್ಯಾಂಚೆಸ್ಟರ್ ಹ್ಯುಮಾನಿಟೀಸ್ ಇಂಟರ್ನ್ಯಾಷನಲ್ ಎಕ್ಸಲೆನ್ಸ್ ಸ್ಕಾಲರ್ಶಿಪ್, ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಕೋರ್ಸ್ ಗಳಿಗೆ ದಾಖಲಾಗಿರುವ ವಿದ್ಯಾರ್ಥಿಗಳಿಗಾಗಿ ಯುನಿವರ್ಸಿಟಿ ಆಫ್ ಮ್ಯಾಂಚೆಸ್ಟರ್ ನೀಡುತ್ತಿರುವ ಅವಕಾಶವಾಗಿದೆ. ಭಾರತೀಯ ಪ್ರಜೆಗಳು ಮತ್ತು ಇತರ ನಿರ್ದಿಷ್ಟ ದೇಶಗಳ ನಾಗರಿಕರಿಗೆ ಮುಕ್ತವಾಗಿದ್ದು, ವಿದ್ಯಾರ್ಥಿಗಳು ಪೂರ್ಣ ಸಮಯದ ಪಿಜಿ ಕೋರ್ಸ್ ಗೆ ಪ್ರವೇಶ ಅವಕಾಶವನ್ನು ಸ್ವೀಕರಿಸಿರಬೇಕು ಮತ್ತು ನಿರ್ದಿಷ್ಟಪಡಿಸಿದ ಶೈಕ್ಷಣಿಕ ಮಾನದಂಡಗಳನ್ನು ಪೂರೈಸಬೇಕು.

ಎಷ್ಟು ಸ್ಕಾಲರ್ ಶಿಪ್ ಲಭ್ಯ:
£5,000 (ಅಂದಾಜು 4,17,138)

ಅರ್ಜಿ ಸಲ್ಲಿಕೆ ಹೇಗೆ?;
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು www.b4s.in/nwmd/MIES1 ಈ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

(manchester scholarship) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ವರ್ಷಪೂರ್ತಿ ಈ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಬಹುದಾಗಿದೆ.

Related Articles

Leave a Reply

Your email address will not be published. Required fields are marked *

Back to top button