ಪ್ರಮುಖ ಸುದ್ದಿ
ಕುರಿಗಾಯಿ ರಕ್ಷಣೆಗೆ ಸಿದ್ಧತೆ, ನೀರಿನ ಹರಿವು ನೋಡಿ ರಕ್ಷಣೆ ಧಾವಂತ.!
ಯಾದಗಿರಿಃ ಕೃಷ್ಣಾನದಿ ಪ್ರವಾಹದಿಂದಾಗಿ ಜಿಲ್ಲೆಯ ಸುರಪುರ ತಾಲೂಕಿನ ನಡುಗಡ್ಡೆಯಲ್ಲಿ 230 ಕುರಿಗಳೊಂದಿಗೆ ಕುರಿಗಾಯಿ ಸಿಕ್ಕಿ ಹಾಕಿಕೊಂಡಿದ್ದು, ಆತನ ರಕ್ಷಣೆಗೆ ಇದೀಗ ಹೈದರಾಬಾದ್ ಮೂಲದ ಎನ್ ಡಿಆರ್ ಎಫ್ ನ 16 ಜನರ ತಂಡ ಎರಡು ಏರ್ ಬೋಟಗಳನ್ನು ಸಿದ್ಧಪಡಿಸಿಕೊಂಡಿದ್ದು, ಅಗ್ನಿ ಶಾಮಕದಳದ ಒಂದು ಬೋಟನ್ನು ಸಹ ನದಿ ದಡದಲ್ಲಿ ಇರಿಸಲಾಗಿದೆ.
ಕುರಿಗಾಯಿ ಟೋಪಣ್ಣ ಎಂಬಾತನಿ ನಡುಗಡ್ಡೆಯಲ್ಲಿ ಸಿಲುಕಿದ್ದು, ಆತ ಸೇರಿದಂತೆ ನೂರಾರು ಕುರಿಗಳ ರಕ್ಷಣೆಗೆ ಜಿಲ್ಲಾಡಳಿತ ಸಜ್ಜುಗೊಳಿಸಿದ ಎನ್ನಲಾಗಿದೆ.
ಸ್ಥಳದಲ್ಲಿ ಶಾಸಕ ರಾಜುಗೌಡ ಹಾಗೂ ತಾಲೂಕಾಡಳಿತ ಅಧಿಕಾರಿಗಳು ಮುಕ್ಕಾಂ ಹೂಡಿದ್ದು, ರಕ್ಷಣೆಗೆ ತಯ್ಯಾರಿ ನಡೆಸುತ್ತಿದ್ದಾರೆ. ನೀರಿನ ಹರಿವು ನೋಡಿ ರಕ್ಷಣಾ ಕಾರ್ಯಕ್ಕೆ ಇಳಿಸಲಾಗುತ್ತದೆ.
ಯಾವ ಭಾಗದಿಂದ ನಡುಗಡ್ಡೆ ತಲುಪಬಹುದು ಎಂಬ ಕುರಿತು ಶಾಸಕರ ಜೊತೆ ಅಧಿಕಾರಿಗಳು ಮತ್ತು ರಕ್ಷಣಾ ತಂಡ ಚರ್ಚೆಯಲ್ಲಿ ತೊಡಗಿದ್ದು, ರಕ್ಷಣಾ ಧಾವಂತಕ್ಕೆ ಸಿದ್ಧತೆಯಲ್ಲಿದ್ದಾರೆ ಎನ್ನಲಾಗಿದೆ.
ಒಳ್ಳೆಯ ಮಾನವೀಯ ಸ್ಪಂದನೆಯ ವರದಿ ಸರ್.
Thank u sir