ಪ್ರಮುಖ ಸುದ್ದಿ
ಶಹಾಪುರಃ ಇಬ್ಬರು ಕುರಿಗಳ್ಳರ ಬಂಧನ
ಶಹಾಪುರಃ ಇಬ್ಬರು ಕುರಿಗಳ್ಳರ ಬಂಧನ
ಶಹಾಪುರಃ ಕಳುವು ಮಾಡಿ ತಂದಿದ್ದ ಕುರಿಗಳನ್ನು ಮಾರಾಟ ಮಾಡಲು ರವಿವಾರ ಹುಣಸಗಿ ಸಂತೆಗೆ ತೆರಳುತ್ತಿದ್ದ ಇಬ್ಬರು ಆರೋಪಿಗಳ ಸಮೇತ 9 ಕುರಿಗಳು ಮತ್ತು ಒಂದು ಟಗರು ಶಹಾಪುರ ಪೊಲೀಸ್ ಠಾಣೆ ಪೊಲೀಸರು ವಶಪಡಿಸಿಕೊಂಡ ಘಟನೆ ನಡೆದಿದೆ.
ತಾಲೂಕಿನ ಧರ್ಮಾನಾಯಕ ತಾಂಡಾದ ವಿಷ್ಣು ಹಾಗೂ ಕನ್ಯಾಕೋಳೂರ ಮಾನಸಿಂಗ್ ತಾಂಡಾದ ರಾಮು ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಹೊರವಲಯದ ಚಾಂದ್ ಪೆಟ್ರೋಲ್ ಬಂಕ್ ಹತ್ತಿರ ಕುರಿಗಳನ್ನು ತೆಗೆದುಕೊಂಡು ತೆರಳುತ್ತಿರುವಾಗ ಸುರಪುರ ಡಿವೈಎಸ್ಪಿ ಹಾಗೂ ಪಿಐ ಚನ್ನಯ್ಯ ಹಿರೇಮಠ ನಿರ್ದೇಶನದಂತೆ ಕಾನ್ಸಟೇಬಲ್‍ಗಳಾದ ನಾರಾಯಣ, ಭಾಗಣ್ಣ, ಗೋಕುಲ್, ಸಿದ್ಧರಾಜ ಅವರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಪರಾಧ ವಿಭಾಗದ ಪಿಎಸ್‍ಐ ಶ್ಯಾಮ ಸುಂದರ್ ನಾಯಕ ತಿಳಿಸಿದ್ದಾರೆ.
——–