Homeಜನಮನಪ್ರಮುಖ ಸುದ್ದಿಮಹಿಳಾ ವಾಣಿ

ಶಿಕ್ಷಣ ಇಲಾಖೆಯಿಂದ SSLC- PUC ಯಲ್ಲಿ ಫೇಲ್ ಆದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಏನದು? ಇಲ್ಲಿದೆ ಮುಖ್ಯ ಮಾಹಿತಿ

(SSLC- PUC) ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆದ ವಿದ್ಯಾರ್ಥಿಗಳಿಗೆ ಮತ್ತೆ ಶಾಲೆಯಲ್ಲಿ ಮರು ದಾಖಲಾತಿ ಮಾಡಿಕೊಳ್ಳುವಂತೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಫೇಲ್ ಆದ ವಿದ್ಯಾರ್ಥಿಗಳಿಗೆ ಮರು ದಾಖಲಾತಿ ಕೊಡದ ಹಿನ್ನೆಲೆ ಈ ಆದೇಶ:
ಮರು ದಾಖಲಾತಿ ಕೊಡುವಂತೆ ಸರ್ಕಾರದ ಆದೇಶವಿದ್ದರೂ ಸರ್ಕಾರಿ ಶಾಲೆಗಳಲ್ಲಿ ಫೇಲಾದ ಮಕ್ಕಳನ್ನು ಮರು ದಾಖಲಾತಿ ಮಾಡಿಕೊಳ್ಳಲು ಕೆಲವು ಶಾಲೆಗಳ ಮುಖ್ಯವಾಧ್ಯಾಯರು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ SSLC, PUC ಫೇಲಾದ ಮಕ್ಕಳಿಗೆ ಮರು ದಾಖಲಾತಿ ಅವಕಾಶ ನೀಡಬೇಕು ಎಲ್ಲ ಮಕ್ಕಳಿಗೆ ಸಿಗುವ ಮೂಲ ಸೌಲಭ್ಯವನ್ನು ಈ ಮಕ್ಕಳಿಗೂ ಕಲ್ಪಿಸಬೇಕು. ಯಾವುದೇ ತಾರತಮ್ಯ ಮಾಡುವಂತಿಲ್ಲ ಪಠ್ಯೇತರ ಚಟುವಟಿಕೆಗೆ ಅವಕಾಶ ನೀಡಬೇಕೆಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button