ಅಂಕಣಪ್ರಮುಖ ಸುದ್ದಿ
ಕುರುಕ್ಷೇತ್ರ : ಕರ್ಣ-ದುರ್ಯೋಧನ ಪೋಸ್ಟರ್ , ಅದ್ಧೂರಿ ಸಂದೇಶ!
ಬೆಂಗಳೂರು : ಬಹು ನಿರೀಕ್ಷಿತ , ಬಹು ತಾರಾಗಣದ ‘ಕುರುಕ್ಷೇತ್ರ’ ಸಿನಿಮಾ ರಿಲೀಸ್ಗೆ ದಿನಗಣನೆ ಶುರುವಾಗಿದೆ. ಅದ್ಧೂರಿ ಮೇಕಿಂಗ್ ಸಿನೆಮಾದಲ್ಲಿ ಖ್ಯಾತ ನಟರು ನಟಿಸಿರುವ ಕುರುಕ್ಷೇತ್ರ ಸಿನಿ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದೆ. ರಿಲೀಸ್ಗೆ ದಿನಗಣನೆ ಇರುವಂತೆ ದುರ್ಯೋಧನ ಮತ್ತು ಕರ್ಣ ಪಾತ್ರಧಾರಿ ದರ್ಶನ್ ಮತ್ತು ಅರ್ಜುನ್ ಸರ್ಜಾ ಇರುವ ಮತ್ತೊಂದು ಪೋಸ್ಟರ್ ಬಿಡುಗಡೆಗೊಳಿಸಿದೆ.
ಸಿಂಹಾಸನದಲ್ಲಿ ರಾಜ ವೈಭೋಗದಿಂದ ಮೆರೆಯುತ್ತಿರುವ ಚಿತ್ರ ಸಿನೆಮಾದ ಅದ್ಧೂರಿ ಮೇಕಿಂಗ್ ಗೆ ಸಾಕ್ಷಿಯಾಗಿದೆ. ಇಬ್ಬರು ಒಟ್ಟಾಗಿ ಕುಳಿತಿರುವ ಕಲರ್ ಫುಲ್ ಪೋಸ್ಟರ್ ಕಂಡು ಸಿನಿ ಅಭಿಮಾನಿಗಳು ಖುಷಿ ಆಗಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕುರುಕ್ಷೇತ್ರ ಆಗಸ್ಟ್ 2 ರಂದು ತೆರೆಮೇಲೆ ಬರಲಿದೆ.