ಅಂಕಣಪ್ರಮುಖ ಸುದ್ದಿ
ಕುರುಕ್ಷೇತ್ರ ಚಿತ್ರ ಮತ್ತು ಟಿಕ್ ಟಾಕ್ ಕಾಂಪಿಟೇಷನ್!
ಬಹುತಾರಾಗಣದ ಕುರುಕ್ಷೇತ್ರ ಸಿನಿಮಾ ಆಗಸ್ಟ್ 9ಕ್ಕೆ ರಿಲೀಸ್ ಗೆ ಮುಹೂರ್ತ ಫಿಕ್ಸ್ ಆಗಿದೆ. ಈಗಾಗಳೇ ಚಿತ್ರದ ಟ್ರೈಲರ್ ಮತ್ತು ಹಾಡುಗಳು ದೊಡ್ಡ ಟ್ರೆಂಡ್ ಆಗಿದ್ದು ಚಿತ್ರತಂಡ ಪ್ರೇಕ್ಷಕರಿಗೆ ಹೊಸ ಸವಾಲೊಂದನ್ನು ಒಡ್ಡಿದೆ.
ಟಿಕ್ ಟಾಕ್ ಮಾಡಿ ಬಹುಮಾನ ಗೆಲ್ಲಿ
ಕುರುಕ್ಷೇತ್ರ ಚಿತ್ರದ ಹಾಡುಗಳು ಹಾಗೂ ಟ್ರೈಲರ್ ರಿಲೀಸ್ ಆಗಿದ್ದು ಆ ಪೈಕಿ ನಿಮ್ಮಿಷ್ಟದ ಒಂದು ಹಾಡು ಅಥವಾ ಡೈಲಾಗ್ನ್ನು ಟಿಕ್ ಟಾಕ್ ಮಾಡಿ ಕಳಿಸುವಂತೆ ಕಲಾಭಿಮಾನಿಗಳಲ್ಲಿ ಚಿತ್ರತಂಡ ಮನವಿ ಮಾಡಿದೆ. ಆಗಷ್ಟ್ 5ರೊಳಗೆ ಟಿಕ್ ಟಾಕ್ನಲ್ಲಿ ಮಾಡಿರೋ ವಿಡಿಯೋವನ್ನು #Kurukshetra And #Dboss ಗೆ ಹ್ಯಾಷ್ ಟ್ಯಾಗ್ ಬಳಸಿ ಕಳಿಸಬೇಕು. ಸ್ಪರ್ಧೆಯಲ್ಲಿ ಗೆದ್ದ 15 ಅದೃಷ್ಟಶಾಲಿ ಜೋಡಿಗೆ ಚಿತ್ರದ ಉಚಿತ ಟಿಕೆಟ್ ನೀಡಲಾಗುತ್ತದೆ. ಆಯ್ಕೆಯಾಗುವ ಅದೃಷ್ಟಶಾಲಿಗಳನ್ನು ಆಗಸ್ಟ್ 7ರಂದು ಅನೌನ್ಸ್ ಮಾಡಲಾಗುವುದು ಎಂದು ಚಿತ್ರತಂಡ ತಿಳಿಸಿದೆ.