ಪ್ರಮುಖ ಸುದ್ದಿ

ನಗರಸಭೆಯಲ್ಲಿ ಭಾರಿ ಅವ್ಯವಹಾರ : ಗಂಭೀರ ಆರೋಪ

ಸ್ವಚ್ಛ ಭಾರತ ಯೋಜನೆ ಅನುದಾನ ಕಬಳಿಕೆ ಆರೋಪ

ಸಮರ್ಪಕ ದಾಖಲಾತಿ ಬಿಡುಗಡೆ ಕ್ರಮಕ್ಕೆ ಆಗ್ರಹ

ಯಾದಗಿರಿ, ಶಹಾಪುರಃ ಸ್ವಚ್ಛ ಭಾರತ ಯೋಜನೆ ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾಗಿದ್ದು, ಪ್ರಧಾನಿ ಮೋದಿಜೀಯವರ ಕನಸಿನ ಯೋಜನೆಯಾಗಿದೆ. ಪ್ರತಿ ಮನೆ ಮನೆಗೆ ಶೌಚಾಲಯ ನಿರ್ಮಿಸುವ ಮೂಲಕ ನಿರ್ಮಲ ಯೋಜನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಸ್ವಚ್ಛ ಭಾರತ ಯೋಜನೆ ಹೆಸರಲಿ ಇಲ್ಲಿನ ನಗರಸಭೆಗೆ 2 ಕೋಟಿ 96 ಲಕ್ಷ ರೂ. ಅನುದಾನ ಬಂದಿದ್ದು, ಆದರೆ ಇಲ್ಲಿನ ಪೌರಾಯುಕ್ತರು ಹಾಗೂ ಸಿಬ್ಬಂದಿ ವರ್ಗ ಮತ್ತು ಗುತ್ತಿಗೆದಾರರು ಶಾಮೀಲಾಗಿ ಕೋಟ್ಯಂತರ ರೂ.ಹಣ ಕಬಳಿಕೆ ಮಾಡಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ಮುಖಂಡ ಯಲ್ಲಯ್ಯ ನಾಯಕ ವನದುರ್ಗ ಆರೋಪಿಸಿದ್ದಾರೆ.

ಶಹಾಪುರ ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾನಾಡಿದ ಅವರು, ನಗರಸಭೆಯಲ್ಲಿ ಶೌಚಾಲಯ ನಿರ್ಮಾಣ ಹೆಸರಲ್ಲಿ ಕೇಂದ್ರ ಸರ್ಕಾರದ ಅನುದಾನವನ್ನು ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಆಡಳಿತ ಅಧ್ಯಕ್ಷರು ಸೇರಿ ಅಕ್ರಮವಾಗಿ ಕೋಟಿಗಟ್ಟಲೆ ಹಣ ಲೂಟಿ ಮಾಡಿದ್ದಾರೆ ಎಂದು ತಿಳಿಸಿದರು.

ಶೌಚಾಲಯ ನಿರ್ಮಾಣ ಮಾಡಲು ಇ ಟೆಂಡರ್ ಕರೆದಿದ್ದು, ಟೆಂಡರ್ ಆದೇಶ ಪತ್ರದಲ್ಲಿ ತಿಳಿಸಿರುವಂತೆ ಯಾವುದೇ ಶೌಚಾಲಯ ನಿರ್ಮಾಣಗೊಂಡಿಲ್ಲ. ಕಳಪೆ ಮಟ್ಟದ ಶೌಚಾಲಯ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ನಗರಸಭೆ ಸದಸ್ಯ ವಸಂತಕುಮಾರ ಸುರಪುಕರ್ ಮಾತನಾಡಿ, ನಗರದಲ್ಲಿ ಶೌಚಾಲಯ ನಿರ್ಮಾಣದ ಅನುದಾನದಲ್ಲಿ ಅಧಿಕಾರಿಗಳು ಕೋಟ್ಯಂತರ ರೂ.ಹಣ ಅಕ್ರಮವಾಗಿ ಕಬಳಿಕೆ ಮಾಡಿದ್ದಾರೆ.

ನಗರದಲ್ಲಿ 1037 ವಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಪ್ರತಿ ಶೌಚಾಲಯ ನಿರ್ಮಾಣಕ್ಕೆ 15 ಸಾವಿರ ರೂ. ನೀಡಲಾಗಿದೆ ಆದರೆ ನಗರದಲ್ಲಿ ಇಷ್ಟೊಂದು ಶೌಚಾಲಯ ಕಟ್ಟಿರುವದಿಲ್ಲ ಕೇವಲ ದಾಖಲಾತಿಯಲ್ಲಿ ಮಾತ್ರ ತೋರಿಸಲಾಗಿದೆ ಎಂದು ಆರೋಪಿಸಿದರು.

ನಗರದಲ್ಲಿ ನಿರ್ಮಾಣಗೊಂಡಿರುವ ಅಂದಾಜು 400 ಶೌಚಾಲಯಗಳು ಸಹ ಪೂರ್ಣ ಕಳಪೆ ಮಟ್ಟದಿಂದ ಕೂಡಿದ್ದು, ರೆಡಿಮೇಡ್ ಶೌಚಾಲಯ ಫಿಟ್ ಮಾಡಿದ್ದಾರೆ. ಟೆಂಡರ್ ಆದೇಶದಲ್ಲಿ ಇಟ್ಟಂಗೆ, ಆಲೋಬ್ಲಾಕ್ ಗಳಿಂದ ನಿರ್ಮಾಣ ಮಾಡಬೇಕೆಂಬ ನಿಯಮವಿದೆ. ಸಂಪೂರ್ಣ ನಿಯಮ ಬಾಹಿರ ಕಾಮಗಾರಿ ನಡೆದಿವೆ.

ಟೆಂಡರನಲ್ಲಿ ಸೂಚಿಸಿರುವಂತೆ ಯಾವುದೇ ಕಾಮಗಾರಿ ನಡೆದಿಲ್ಲ. ಸಂಪೂರ್ಣ ಕಳಪೆಮಟ್ಟದಾಗಿವೆ. ಬಿಲ್ ಮಾತ್ರ ಪಾವತಿಸಲಾಗಿದೆ ಎಂದು ದೂರಿದರು.

ಅದೇ ರೀತಿ 429 ಜನರಿಗೆ ಪ್ರತಿ ಶೌಚಾಲಯ ನಿರ್ಮಿಸಿಕೊಳ್ಳಲು 2650 ರೂ. ಮಾತ್ರ ಹಾಕಲಾಗಿದೆ. ಅದ್ಯಾವ ಕಾರಣಕ್ಕೆ ಹಣ ಅವರ ಅಕೌಂಟಿಗೆ ಹಾಕಲಾಗಿದೆ ಗೊತ್ತಿಲ್ಲ. ಇಲ್ಲಿ ಇವರಾರು ಶೌಚಾಲಯ ನಿರ್ಮಿಸಿಕೊಂಡಿಲ್ಲ. ಮತ್ತು ಪೂರ್ಣ ಪ್ರಮಾಣದ ಹಣವು ಅವರಿಗೆ ನೀಡಿಲ್ಲ. ಇಲ್ಲಿ ವಂಚನೆ ನಡೆದಿರುವುದು ಮೇಲ್ನೋಟಕ್ಕೆ ತಿಳಿದು ಬರುತ್ತದೆ. ಒಬ್ಬ ಫಲಾನುಭವಿ ಹೆಸರಲಿ ಎರಡೆರಡು ಬಾರಿ ದುಡ್ಡು ಕಬಳಿಸುತ್ತಿದ್ದಾರೆ.

ವಾರ್ಡ್ ನಂ.1 ರವಿ ಅಂಬಲಪ್ಪ ಗುತ್ತಿಗೆದಾರರಿಂದ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಮತ್ತು 15 ಸಾವಿರ ಶೌಚಾಲಯ ನಿರ್ಮಾಣಕ್ಕೆ ಆತನ ಅಕೌಂಟಿಗೆ ಹಣ ಹಾಕಲಾಗಿದೆ. ಅದೇ ಚಂದಮ್ಮ ಮುದಕಪ್ಪ, ವಾರ್ಡ್ ನಂ-21 ರಲ್ಲಿ ಕವಿತಾ ಭೀಮರಾಯ, ರವಿ ಲಕ್ಷ್ಮಣರಾವ್, ಸಾಬಮ್ಮ ಇದೇ ರೀತಿ ಸಾಕಷ್ಟು ಜನರಿಗೆ ಎರಡೆರು ಬಾರಿ ಹಣ ಒದಗಿಸಿರುವ ಕುರಿತು ದಾಖಲೆ ಸಮೇತ ಪ್ರದರ್ಶಿಸಿದರು. ಅಂದಾಜು 12 ಲಕ್ಷ ರೂ. ಅಕ್ರಮವಾಗಿ ಇಲ್ಲಿ ಹಣ ಪೋಲಾಗಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಸದಸ್ಯ ವಸಂತ ಸುರಪುರಕರ್, ಚಂದ್ರು ಯಾಳಗಿ, ಮಲ್ಲಣ್ಣ ಶಿರಡ್ಡಿ, ಶರಣಪ್ಪ ಹೋತಪೇಟ ಇತರರಿದ್ದರು.

ಪ್ರೋಗ್ರೆಸ್ ರಿಪೋರ್ಟನಲ್ಲಿ ತಪ್ಪು ಮಾಹಿತಿ

 ಜಿಲ್ಲಾಧಿಕಾರಿಗಳಿಗೆ ವಂಚನೆ ಮಾಡಿದ ನಗರಸಭೆ

ನಗರಸಭೆಯಲ್ಲಿ ಶೌಚಾಲಯ ನಿರ್ಮಾಣ ಯೋಜನೆಯಡಿಯಲ್ಲಿ ಕೋಟ್ಯಂತರ ಹಣ ಲೂಟಿಯಾಗಿದೆ ಎಂದು ಆರೋಪಿಸಲಾಗಿದೆ. ಇಲ್ಲಿ ಒಟ್ಟು 2 ಕೋಟಿ 28 ಲಕ್ಷ ಶೌಚಾಲಯ ನಿರ್ಮಾಣದ ಖಚು ತೋರಿಸಲಾಗಿದೆ. ಆದರೆ ಕಾಮಗಾರಿ ಟೆಂಡರ್ ಸೇರಿದಂತೆ ಹಣ ಬಿಡುಗಡೆಗೆ ಜಿಲ್ಲಾಧಿಕಾರಿಗಳ ಅನುಮತಿಯು ಪಡೆದಿರುವದಿಲ್ಲ. ಕೇವಲ ಎಸ್‍ಐ, ಪರಿಸರ ಇಂಜಿನಿಯರ ಮತ್ತು ಪೌರಾಯುಕ್ತರು ತಾವೇ ಒಪ್ಪಿಗೆ ಮಾಡಿಕೊಂಡು ಅಕ್ರಮ ಎಸಗಿದ್ದಾರೆ ಎಂದು ಬಿಜೆಪಿಯ ಚಂದ್ರು ಯಾಳಗಿ ತಿಳಿಸಿದರು.

ಅಲ್ಲದೆ ನಗರಸಭೆ ಅನುದಾನ 1 ಕೋಟಿ 11 ಲಕ್ಷ ರೂ. ಖರ್ಚು ಹಾಕಿದಾಗಲೂ ನಗರಸಭೆ ಅಧ್ಯಕ್ಷರ ಅನುಮೋದನೆ ಪಡೆದಿರುವದಿಲ್ಲ. ಸ್ವತಃ ಅಧ್ಯಕ್ಷರಿಗೆ ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ಇಲ್ಲ. ಆದಾಗ್ಯು ಯಾವುದೇ ಅಕ್ರಮ ನಡೆದಿಲ್ಲ ಎಲ್ಲವೂ ನಿಯಮನುಸಾರ ನಡೆದಿದೆ ಎಂಬ ಹೇಳಿಕೆಯನ್ನು ಅಧ್ಯಕ್ಷರು ನೀಡಿರುವುದು ಹಾಸ್ಯಸ್ಪದವಾಗಿದೆ ಎಂದರು.

ಅಲ್ಲದೆ 2 ಕೋಟಿಗೂ ಅಧಿಕ ಖರ್ಚು ವರದಿಯಲ್ಲಿದೆ. ಆದರೆ ಜಿಲ್ಲಾಧಿಕಾರಿಗಳಿಗೆ ತೋರಿಸಿರುವ ಪ್ರೋಗ್ರೆಸ್ ರಿಪೋರ್ಟ್‍ನಲ್ಲಿ 1 ಕೋಟಿ 46 ಲಕ್ಷ ರೂ. ಎಂದು ನಮೂದಿಸುವ ಮೂಲಕ ಜಿಲ್ಲಾಧಿಕಾರಿಗಳಿಗೆ ಇಲ್ಲಿನ ಅಧಿಕಾರಿಗಳು ವಂಚನೆ ಎಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಟ್ಟಾರೆ ನಗರಸಭೆಯಲ್ಲಿ ಕೋಟ್ಯಂತರ ರೂ.ಅವ್ಯವಹಾರ ನಡೆದಿದ್ದು, ಜಿಲ್ಲಾಧಿಕಾರಿಗಳು ಸಮಗ್ರ ತನಿಖೆ ನಡೆಸುವ ಮೂಲಕ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

Related Articles

Leave a Reply

Your email address will not be published. Required fields are marked *

Back to top button