ಪ್ರಮುಖ ಸುದ್ದಿ
ಕ್ರೈನ್ ಮುರಿದು ಬಿದ್ದು ಆರು ಜನ ಕಾರ್ಮಿಕರು ದುರ್ಮರಣ!
ಕಲಬುರಗಿ : ಜಿಲ್ಲೆಯ ಸೇಂಡಂ ತಾಲ್ಲೂಕಿನ ಕೋಡ್ಲಾ ಗ್ರಾಮದ ಬಳಿಯಿರುವ ಶ್ರೀ ಸಿಮೆಂಟ್ ಕಾರ್ಖಾನೆಯಲ್ಲಿ ವೆಲ್ಡಿಂಗ್ ಮಾಡುವ ಸಮಯದಲ್ಲಿ ಕ್ರೈನ್ ಮುರಿದು ಬಿದ್ದು ಆರು ಜನ ಕಾರ್ಮಿಕರು ಸಾವಿಗೀಡಾದ ದಾರುಣ ಘಟನೆ ನಡೆದಿದೆ. ಕಹಾರ್ ಮೂಲದ ತಬಾರಕ್ ಅಲಿ (25) ಸ್ಥಳದಲ್ಲೆ ಸಾವಿಗೀಡಾಗಿದ್ದಾನೆ. ಇನ್ನುಳಿದ ಐವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರೂ ಸಹ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ಕಾರ್ಮಿಕರನ್ನು ತಬಾರಕ್ ಅಲಿ (26), ಕೋಕೊ (22), ಮಹಮ್ಮದ್ ಜುಬೇರ್, (26), ಸುಧಾಕರ್ (28) ಎಂದು ಗುರುತಿಸಲಾಗಿದೆ. ಇನ್ನಿಬ್ಬರ ಗುರುತು ಈವರೆಗೆ ತಿಳಿದು ಬಂದಿಲ್ಲ. ಸೇಡಂ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕ್ರೈನ್ ಅವಘಡಕ್ಕೆ ಕಾರಣವೇನೆಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.