ಕಥೆ
ತಾಯಿ ಮತ್ತು ಪತ್ನಿ ಹೇಳಿದ ವರದಲ್ಲಿ ಯಾವದನ್ನು ಬೇಡಲಿ –

ಏಕೈಕ ವರ
ಒಮ್ಮೆ ನಿಷ್ಠಾವಂತ ಬ್ರಾಹ್ಮಣನೊಬ್ಬ ಶ್ರೀಮಂತನಾಗಬೇಕೆಂದು ಮಹಾಲಕ್ಷ್ಮೀ ತಪಸ್ಸು ಮಾಡಿದ. ಆಕೆಯ ಭವ್ಯ ದರುಶನ ಪಡೆದ, ಆಕೆ ಒಂದು ವರ ಕೊಡುವೆ ಎಂದಾಗ ‘ಹೆಂಡತಿ ಹಾಗೂ ತಾಯಿಯನ್ನು ಕೇಳಿ ಬರುವುದಾಗಿ’ ತಿಳಿಸಿದ.
ಹೆಂಡತಿ ‘ನನಗೊಬ್ಬ ಮಗ ಬೇಕು’ ಎಂದರೆ ತಾಯಿ ‘ನನ್ನ ದೃಷ್ಟಿ ಹರಿತವಾಗಲಿ’ ಎಂದು ಕೇಳಿದಳು. ಬ್ರಾಹ್ಮಣನು ಮನಃ ಹಾಗೆಂದಾಗ ದೇವಿ ಒಂದೇ ವರ ಕೊಡುವೆ ಎಂದಾಗ ಪುನಃ ಬ್ರಾಹ್ಮಣನಿಗೆ ಸಂಕಷ್ಟವಾಯಿತು.
ಆಗ ದಾರಿಯಲ್ಲಿ ಎದುರಿಗೊಬ್ಬ ಸಾಧು ಸಿಕ್ಕಿ ಹೊಸ ಮೊರೆಯ ಬಗ್ಗೆ ದಾರಿತೋರಿದ. ‘ಮಹಾಲಕ್ಷ್ಮೀ, ತನ್ನ ಮೊಮ್ಮಗನು ಬಂಗಾರದ ತಟ್ಟೆಯಲ್ಲಿ ಮೃಷ್ಟಾನ್ನವನ್ನು ಉಣ್ಣುವುದನ್ನು ನನ್ನ ತಾಯಿ ಕಂಡು ಹಿಗ್ಗಬಯಸುತ್ತಾಳೆ. ಈ ಒಂದೇ ವರವನ್ನು ಅನುಗ್ರಹಿಸು’ ಎಂದಾಗ ದೇವಿ ಮನಸಿನಿಂದ ಹರಸಿ ಆಶೀರ್ವಾದಳು.
ನೀತಿ :– ಆಶೆಗೊಂದು ಮಿತಿ ಇದೆ. ಎಣಿಸಿಕೊಂಡಂತೆ ಆಶೆಗಳೆಲ್ಲ ಈಡೇರುವುದಿಲ್ಲ. ಬದುಕು ಬೆಳಗಲು ಆಶೆ ಇತಿಮಿತಿಯಲ್ಲಿರಬೇಕು.
ಸಂಗ್ರಹ
ಡಾ.ಈಶ್ವರಾನಂದ ಸ್ವಾಮೀಜಿ.
– 9341137882.