ಪ್ರಮುಖ ಸುದ್ದಿ
ಯತ್ನಾಳ ಹೇಳಿಕೆ ಸಮರ್ಥಿಸಿಕೊಂಡ ಸಚಿವ ಈಶ್ವರಪ್ಪ
ಯತ್ನಾಳ ಹೇಳಿಕೆ ಸಮರ್ಥಿಸಿಕೊಂಡ ಸಚಿವ ಈಶ್ವರಪ್ಪ
ಬೆಂಗಳೂರಃ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರನ್ನು ನಾನು ಪಾಕ್ ಏಜೆಂಟ್ ಎಂದು ಕರೆಯುವದಿಲ್ಲ. ಆದರೆ ಯತ್ನಾಳ ಅವರು ಬಳಸಿದ ಪದಗಳನ್ನು ನಾನು ಬಳಸುವದಿಲ್ಲ ಎಂದ ಅವರು, ದೊರೆಸ್ವಾಮಿ ಅವರು ಕಾಂಗ್ರೆಸ್ ನಿಲುವಿಗೆ ಸದಾ ಬೆಂಬಲಿಸುವ ಇವರ ನಡೆ ಸರಿಯಲ್ಲ ಎಂದು ಈಶ್ವರಪ್ಪ ಹೇಳಿದರುು.
ಅಲ್ಲದೆ ಕನ್ಹಯ್ಯ, ಅಮೂಲ್ಯ ಮತ್ತು ಆರ್ದ್ರಾ ಅವರ ಜೊತೆ ದೊರೆಸ್ವಾಮಿ ಫೋಟೊ ತೆಗೆಸಿಕೊಂಡಿರುವದನ್ನು ಬಿಡುಗಡೆ ಮಾಡಿ ಯಾವ ಕಾರಕ್ಕೆ ಇಂತವರ ಜೊತೆ ಫೋಟೊ ತೆಗೆಸಿಕೊಂಡರು ಎಂದು ಪ್ರಶ್ನಿಸಿದರು.
ಹಿಂದೆ ಮಾಜಿ ಸಿಎಂ ಸಿದ್ರಾಮಯ್ಯನವರು ಇಡಿ ಪ್ರಪಂಚ ಹೊಗಳುತ್ತಿರುವ ಪ್ರಧಾನಿ ಮೋದಿಯವರನ್ನು ಕೊಲೆಗಡುಕ ಎಂದು ಜರಿದಿದ್ದರು, ಅಂದೇ ಕಾಂಗ್ರೆಸ್ ಸಿದ್ರಾಮಯ್ಯ ನವರನ್ನು ಪಕ್ಷದಿಂದ ಹೊರಗಡೆ ಹಾಕಬೇಕಿತ್ತು.
ಆದರೆ ಈಗ ಯತ್ನಾಳ ಏನೋ ಅಂದಿದ್ದಾರೆ ಎಂದು ಅವರ ವಿರುದ್ಧ ಮಾತುಗಳನನಾಡುವ ಕಾಂಗ್ರೆಸ್ ಗರಿಗೆ ನೈತಿಕತೆ ಬೇಕು ಎಂದು ಪರೋಕ್ಷವಾಗಿ ಯತ್ನಾಳ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು.