ಶಹಾಪುರಃ ಬಾಂಬೆಯಿಂದ ಕಳವು ಮಾಡಿ ತಂದಿದ್ದ ಗಂಟು ಮೂಟೆ ಸಮೇತ ಸಿಕ್ಕಿಬಿದ್ದ .!
ಕಂಪ್ಯೂಟರ್, ಲ್ಯಾಪ್ ಟ್ಯಾಪ್ ಕಳ್ಳನ ಬಂಧನ
ಶಹಾಪುರ: ಬಾಂಬೆಯಲ್ಲಿನ ಅಂಗಡಿಯೊಂದರಲ್ಲಿ ಲ್ಯಾಪ್ ಟ್ಯಾಪ್ ಹಾಗೂ ಇತರೆ ಕಂಪ್ಯೂಟರ್ ಮತ್ತು ಅದಕ್ಕೆ ಸಂಬಂಧಿಸಿದ ಸಾಮಾನುಗಳನ್ನು ಕದ್ದು, ಶಹಾಪುರಕ್ಕೆ ಬಂದಿದ್ದ ಓರ್ವ ಕಳ್ಳನನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಮುನ್ಯಾ ಅಲಿಯಾಸ್ ಮಾನೆ ಚವ್ಹಾಣ (22) ಬಂಧಿತ ಆರೋಪಿಯಾಗಿದ್ದು, ಈತ ತಾಲೂಕಿನ ಕನ್ಯಾಕೋಳೂರ ಗ್ರಾಮದ ಜಾಪಾ ನಾಯಕ ತಾಂಡಾ ನಿವಾಸಿ ಎನ್ನಲಾಗಿದೆ.
ಈತ ಬಾಂಬೆಯಿಂದ ಬಂದು ಬೆಳಗಿನಜಾವ ಇಲ್ಲಿನ ನೂತನ ಬಸ್ ನಿಲ್ದಾಣದಲ್ಲಿ ಇಳಿದು ತನ್ನ ಬ್ಯಾಗಗಳಲ್ಲಿ ಮೂಟೆ ಕಟ್ಟಿದ್ದ ಗಂಟನ್ನು ಹೊತ್ತುಕೊಂಡು ತಾಂಡಾಕ್ಕೆ ತೆರಳುವವನಾಗಿದ್ದ ಎನ್ನಲಾಗಿದೆ. ಆಗ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಈತನನ್ನು ವಿಚಾರಿಸಿದ್ದಾರೆ. ಮೂಟೆಯಲ್ಲಿ ಏನಿದೆ ಎಂದು ವಿಚಾರಿಸಿದಾಗ, ಸಂಶಯ ಮೂಡಿದ್ದು, ಆತನನ್ನು ಠಾಣೆಗೆ ಕರೆದೊಯ್ದು ವಿಚಾರಿಸಲಾಗಿ ಮೂಟೆಯಲ್ಲಿ, ಲ್ಯಾಪಟಾಪ್, ಮಾನಿಟರ್ ಮತ್ತು ವಿವಿಧ ಸಾಮಾಗ್ರಿಗಳು ಕಂಡು ಬಂದಿವೆ.
ಆಗ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಬಾಂಬೆ ಮಹಾನಗರಿಯಲ್ಲಿ ಕಳುವು ಮಾಡಿ ತಂದಿರುವ ಬಗ್ಗೆ ಮುನ್ಯಾ ಬಾಯಿ ಬಿಟ್ಟಿದ್ದಾನೆ. ಆಗ ಪೊಲೀಸರು, ಆತನಲ್ಲಿದ್ದ ಒಂದು ಲ್ಯಾಪ್ ಟ್ಯಾಪ್, ಒಂದು ಸಿಪಿಓ, ಕೀಬೋರ್ಡ್ ಮತ್ತು ಎರಡು ಮಾನಿಟರ್ ಸೇರಿದಂತೆ ಸಣ್ಣಪುಟ್ಟ ಸಾಮಾಗ್ರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಒಟ್ಟು 32.200 ರೂ.ಮೌಲ್ಯದ ಸಾಮಾಗ್ರಿಗಳು ಇವೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ಅಲ್ಲದೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬುಧವಾರ ನಸುಕಿನಲ್ಲಿ ಗಸ್ತು ಕರ್ತವ್ಯದಲ್ಲಿದ್ದ ಎಸ್.ಸಿ.ಹೊನ್ನಪ್ಪ ಭಜಂತ್ರಿ, ಪಿಸಿಗಳಾದ ಗಜೇಂದ್ರ, ಬಾಬು, ಸಿದ್ರಾಮಯ್ಯ, ಸತೀಶ ನರಸನಾಯಕ ಬೆಳಗಿನ ಜಾವ ನೂತನ ನಿಲ್ದಾಣದಲ್ಲಿ ಈತನನ್ನು ಸಂಶಯ ವ್ಯಕ್ತಪಡಿಸಿ ಸಿಪಿಐ ಅಂಬರಾಯ ಕಮಾನಮನಿ ಅವರಿಗೆ ತಿಳಿಸಿದ್ದಾರೆ, ನಂತರ ಸ್ಥಳಕ್ಕೆ ಆಗಮಿಸಿ ಅವರು ಜೀಪಿನಲ್ಲಿ ವಿಚಾರಣೆಗಾಗಿ ಠಾಣೆಗೆ ಕರೆ ತಂದೇವು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಕರ್ತವ್ಯಪರತೆಯಿಂದ ಓರ್ವ ಆರೋಪಿಯನ್ನು ಬಂಧಿಸಿದಂತಾಗಿದೆ.