ಪ್ರಮುಖ ಸುದ್ದಿ

ಸ್ವಚ್ಚೋತ್ಸವದ ಜಾಗೃತಿ ಅಭಿಯಾನ : ಸಿಇಒ ಲವೀಶ್ ಒರಡಿಯಾ

ಸ್ವಚ್ಛತೆಯೇ ಸೇವೆ ಪಾಕ್ಷಿಕ ಆಂದೋಲನ

ಸ್ವಚ್ಛತೆಯೇ ಸೇವೆ ಪಾಕ್ಷಿಕ ಆಂದೋಲನ

ಸ್ವಚ್ಚೋತ್ಸವದ ಜಾಗೃತಿ ಅಭಿಯಾನ : ಸಿಇಒ ಲವೀಶ್ ಒರಡಿಯಾ

| ಪ್ರತಿ ಕುಟುಂಬದಲ್ಲಿ ಸ್ವಚ್ಛತೆಗೆ ಉತ್ಸಾಹಕರಾಗಿ |

ಯಾದಗಿರಿಃ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಗಳಲ್ಲಿ ಸ್ವಚ್ಛತೆಯೇ ಸೇವೆ ಪಾಕ್ಷಿಕ-2025 ಅಭಿಯಾನವು ಸೆಪ್ಟೇಂಬರ್ 17 ರಿಂದ ಅಕ್ಟೋಬರ್ 02 2025 ರವೆಗೆ ಸ್ವಚ್ಛತೆ ಮತ್ತು ಶುಚಿತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮ/ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿಇಒ ಲವೀಶ್ ಒರಡಿಯಾ ತಿಳಿಸಿದರು.

ಕೆಂದ್ರ ಜಲಶಕ್ತಿ ಮಂತ್ರಾಲಯ, ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರ ರವರ ನಿರ್ದೇಶನದಂತೆ ಪ್ರತಿ ವರ್ಷದಂತೆ ಈ ವರ್ಷ “ಸ್ವಚ್ಚೋತ್ಸವ” ಎಂಬ ಧ್ಯೆಯವಾಕ್ಯದೊಂದಿಗೆ ನೊಂದಿಗೆ ಸ್ವಚ್ಚತೇ ಸೇವೆ ಪಾಕ್ಷಿಕ ಅಭಿಯಾನವು ಎಲ್ಲಾಗ್ರಾಮ ಪಂಚಾಯತಿಯಲ್ಲಿ ಆಯೋಜಿಸಲಾಗುತ್ತಿದೆ ಎಂದ ಅವರು, ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 02 ವರೆಗೆ ಪ್ರತಿಯೊಬ್ಬರಿಗೂ ಸ್ವಚ್ಛತೆಯ ಅಭ್ಯಾಸಗಳನ್ನು ರೂಡಿಸಿಕೊಳ್ಳಲು ವೈಯಕ್ತಿಕ ಸ್ವಚ್ಛತೆ, ಗ್ರಾಮದ ಸ್ವಚ್ಛತೆಗೆ, ತ್ಯಾಜ್ಯ ನಿರ್ವಹಣೆ, ಜಲ ಮೂಲಗಳ ಸುತ್ತ ಸ್ವಚ್ಛತೆ ಕಾಪಾಡುವುದು, ಶ್ರಮದಾನ ಚಟುವಟಿಕೆ ಹಮ್ಮಿಕೊಂಡು ಜಾಗೃತಿ ಮೂಡಿಸುವ ಉದ್ದೇಶವಾಗಿದೆ ಎಂದರು.

ತಾಲೂಕ ಪಂಚಾಯತಿಯ ಕಚೇರಿ, ಶಾಲೆ, ಅಂಗನವಾಡಿ, ಆರೋಗ್ಯ ಕೇಂದ್ರ ಮುಂತಾದ ಸರಕಾರಿ ಕಚೇರಿಗಳಲ್ಲಿ ಸ್ವಚ್ಛತೆ ಕಾಪಾಡುವುದು ಹಾಗೂ ಸಾರ್ವಜನಿಕ ಸ್ಥಳ, ಕಸದಿಂದ ಕೂಡಿರುವ ಸ್ಥಳವನ್ನು ಸ್ವಚ್ಛತೆಗೊಳಿಸಿ ಅಲ್ಲಿ ಕಸ ಎಸೆಯದಂತೆ ರಂಗೋಲಿ ಹಾಕಿ ಸುಂದರ ಸ್ಥಳವನ್ನಾಗಿ ಬದಲಾಯಿಸ ಬೇಕೆಂದರು.

ಕಾರ್ಯಕ್ರಮಗಳನ್ನು ಆಯೋಜಿಸಿರುವ ಗ್ರಾಮ ಪಂಚಾಯತಗಳಿಗೆ ಪ್ರಶಸ್ತಿ ನೀಡಲಾಗುವುದು ಈ ಅಭಿಯಾನದಲ್ಲಿ ಗ್ರಾಮ ಪಂಚಾಯತ ಮಟ್ಟದ ವಿವಿಧ ಇಲಾಖೆಯ ಅಧಿಕಾರಿ/ ಸಿಬ್ಬಂದಿ ವರ್ಗದವರು, ಗ್ರಾಮ ಪಂಚಾಯತ ಅಧ್ಯಕ್ಷರು, ಸದ್ಯರು, ಯುವಕರು, ಸಂಜೀವಿನಿ ಯೋಜನೆಯ ಸಿಬ್ಬಂದಿ, ಸ್ವಸಹಾಯ ಸಂಘದ ಸದಸ್ಯರು, ನರೇಗಾ ಕೂಲಿಕಾರ್ಮಿಕರು, ಸಹಯೋಗದೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸಲು ಗ್ರಾಮ ಪಂಚಾಯತಿಗೆ ನಿರ್ದೇಶನ ನೀಡಲಾಗಿದೆ ಪ್ರಯುಕ್ತ ಸ್ವಚ್ಚತೆಯೇ ಸೇವೆ ಪಾಕ್ಷಕಿ ಆಂದೋಲನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಮನವಿ ಮಾಡಿದರು.

ಕಸ ಹೊಂದಿರುವ ಸ್ಥಳ ಗುರುತಿಸಿ ಸ್ವಚ್ಛಗೊಳಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಶಾಲೆ, ಅಂಗನವಾಡಿ, ಸರಕಾರಿ ಕಚೇರಿಗಳಲ್ಲಿ ಶ್ರಮದಾನ ಮೂಲಕ ಸ್ವಚ್ಛಗೊಳಿಸುವುದು, ಗ್ರಾಮದ ಸ್ವಚ್ಛತೆಯಲ್ಲಿ ತೊಡಗುವ ಸ್ವಚ್ಛತಾ ಸಿಬ್ಬಂದಿಯವರಿಗೆ ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ, ಆರೋಗ್ಯ ತಪಾಸಣೆ ಮಾಡಿಸುವುದು, ಅವರಿಗೆ ಆತ್ಮಗೌರವದ ಕಾರ್ಡಗಳನ್ನು ನೀಡಿ ಪ್ರೋತ್ಸಾಹ ನೀಡುವುದು, ಏಕಬಳಕೆಯ ಪ್ಲಾಸ್ಟಿಕ್ ತ್ಯಜಿಸಿ, ಮರುಬಳಕೆ ಅಥವಾ ಬಟ್ಟೆ ಚೀಲಗಳನ್ನು ಉಪಯೋಗಿಸುವುಂತೆ ಪ್ರೇರೆಣೆ, ಪರಿಸರ ಸ್ನೇಹಿ ಹಬ್ಬಗಳನ್ನು ಆಚರಣೆ ಉತ್ತೆಜಿಸುವಂತೆ ವಿವಿಧ ಜಾಗೃತಿ ಚಟಿವಟಿಕೆಗಳನ್ನು ಹಮ್ಮಿಕೊಳ್ಳುವುದು.

ವಿಶೇಷವಾಗಿ ಏಕ್ ದಿನ್, ಏಕ್ ಘಂಟಾ, ಏಕ್ ಸಾಥ್ : 25 ನೇ ಸೆಪ್ಟೆಂಬರ್ 2025 ರಂದು ಒಂದು ಏಕ್ ದಿನ್, ಏಕ್ ಘಂಟಾ, ಏಕ್ ಸಾಥ್ ಎಲ್ಲರೂ ಒಟ್ಟಿಗೆ ಸೇರಿ ಕುಡಿಯುವ ನೀರಿನ ಮೂಲಗಳ ಸುತ್ತ-ಮುತ್ತ, ಸಾರ್ವಜನಿಕ ಸ್ಥಳ, ಮುಂತಾದ ಸ್ಥಳಗಳಲ್ಲಿ ಶ್ರಮದಾನ ಮಾಡುವುದು.
ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಅಭಿಯಾನದ ಮಾಹಿತಿಯನ್ನು   https:swachhatahiseva.gov.in     ಐಟಿ ಪೋರ್ಟಾಲ್ ನಲ್ಲಿ ಅಪ್ ಲೋಡ ಮಾಡಲು ಸಂಬಂಧಪಟ್ಟಅಧಿಕಾರಿ ಸಿಬ್ಬಂದಿಯವರಿಗೆ ನಿರ್ದೇಶನ ನೀಡಲಾಗಿದೆ ಎಂದರು.

Related Articles

Leave a Reply

Your email address will not be published. Required fields are marked *

Back to top button