ಸಾರಿಗೆ ನೌಕರರ ಮುಷ್ಕರ ಹಿಂದೆ ಕಾಣದ ಕೈಗಳ ಕೈವಾಡ – ಸವದಿ ಆರೋಪ
ಸಾರಿಗೆ ನೌಕರರ ಮುಷ್ಕರ ಹಿಂದೆ ಕಾಣದ ಕೈಗಳ ಕೈವಾಡ – ಸವದಿ ಆರೋಪ
ಬೆಂಗಳೂರಃ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವದು ಕಷ್ಟಸಾಧ್ಯ. ನಮ್ಮ ಹಣಕಾಸಿನ ಇತಿಮಿತಿಯೊಳಗೆ ಸರ್ಕಾರ ನಡೆಸಬೇಕಾಗುತ್ತದೆ. ಕೊರೊನಾ ಸಂಕಷ್ಟದ ಮಧ್ಯ ಇಂತಹ ಬೇಡಿಕೆ ಈಡೇರಿಸುವದು ಆಗಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟ ಪಡಿಸಿದರು.
ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ನೌಕರರ ವಿರುದ್ಧ ಯಾವುದೇ ಬ್ರಹ್ಮಾಸ್ತ್ರ ಉಪಯೋಗಿಸುವದಿಲ್ಲ.
ಸಂಜೆಯೊಳಗೆ ಮನವೊಲಿಸುವ ಮೂಲಕ ಸೇವೆಗೆ ಹಾಜರಾಗಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಮನವಿ ಮಾಡಲಾಗಿದೆ. ಈ ಮುಷ್ಕರ ಹಿಂದೆ ಕಾಣದ ಕೈಗಳಿವೆ ಎಂದು ಕೋಡಿಹಳ್ಳಿ ಚಂದ್ರಶೇಖರ ವಿರುದ್ಧ ಹರಿಹಾಯ್ದರು.
ಸಾರಿಗೆ ನೌಕರರು ನಮ್ಮ ಕುಟುಂಬ ಸದಸ್ಯರಿದ್ದಂತೆ ಆದರೆ ಕೊರೊನಾ ಸಂದರ್ಭ ಸರ್ಕಾರಿ ನೌಕರರಾಗಿ ಪರಿಗಣಿಸುವದು ಸಾಧ್ಯವಿಲ್ಲ ಎಂದ ಅವರು, ಮುಷ್ಕರಕ್ಕೆ ಬೆಂಬಲ ನೀಡಿದ ರೈತ ಸಂಘಟನೆಯ ಕೋಡಿಹಳ್ಳಿ ಚಂದ್ರಶೇಖರ ಅವರ ಈ ಪ್ರತಿಭಟನೆ ಜೊತೆ ಕೈಜೋಡಿಸಲು ಬಂದಿರುವದರ ಹಿಂದೆ ಕಾಣದ ಕೈ ಕೆಲಸಮಾಡಿದೆ. ಮೂರು ನಾಲ್ಕು ದಿನದಲ್ಲಿ ಅದನ್ನು ಬಯಲು ಮಾಡುವೆ ಎಂದು ತಿಳಿಸಿದರು.