ಪ್ರಮುಖ ಸುದ್ದಿ
ಶೇ.40 ರಷ್ಟು ಲೇಔಟ್ ಅಭಿವೃದ್ಧಿ ಪಡಿಸಿದಲ್ಲಿ ನಿವೇಶನ ಮಾರಾಟಕ್ಕೆ ಅವಕಾಶ
ಶೇ.40 ರಷ್ಟು ಲೇಔಟ್ ಅಭಿವೃದ್ಧಿ ಪಡಿಸಿದಲ್ಲಿ ನಿವೇಶನ ಮಾರಾಟಕ್ಕೆ ಅವಕಾಶ
ಬೆಂಗಳೂರಃ ಈ ಹಿಂದೆ ಲೇಔಟ್ ಪೂರ್ಣ ಅಭಿವೃದ್ಧಿ ಬಳಿಕವಷ್ಟೆ ನಿವೇಶನ ಮಾರಾಟ ಮಾಡಲು ಅವಕಾಶವಿತ್ತು. ಇದೀಗ ಸಚಿವ ಸಂಪುಟದಲ್ಲಿ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ ತಿದ್ದುಪಡಿಗೆ ಒಪ್ಪಿಗೆ ನೀಡಲಾಗಿದ್ದು, ಲೇಔಟ್ ನ್ನು ಶೇ.40 ರಷ್ಟು ಅಭಿವೃದ್ಧಿ ಪಡಿಸಿದರೂ ಸಾಕು ನಿವೇಶನ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.
ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಬಳಿಕ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದರು.
ಪೂರ್ಣ ಪ್ರಮಾಣದಲ್ಲಿ ಲೇಔಟ್ ಅಭಿವೃದ್ಧಿ ಪಡಿಸುವ ಮೊದಲೇ ನಿವೇಶನ ಮಾರಾಟ ಮಾಡುವದರಿಂದ ನಿವೇಶನ ಖರೀದಿದಾರರಿಗೂ ಲೇಔಟ್ ನಿರ್ಮಿಸುವವರಿಗೆ ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು.