ಪ್ರಮುಖ ಸುದ್ದಿ
ಬೈಕ್ ಸವಾರರ ಮೇಲೆ ಚಿರತೆ ದಾಳಿ.! ಸಂಚಾರಕ್ಕೆ ಆತಂಕ
ಬೈಕ್ ಸವಾರರ ಮೇಲೆ ಚಿರತೆ ದಾಳಿ.! ಆತಂಕ
ತಿರುಪತಿಃ ಇಲ್ಲಿನ ತಿರುಮಲ ಘಾಟನಲ್ಲಿ ಹೊರಟಿದ್ದ 6 ಬೈಕ್ ಸವಾರರ ಮೇಲೆ ಚಿರತೆ ದಾಳಿ ನಡೆಸಿದ್ದು, ಅದೃಷ್ಟವಶಾತ್ ಪ್ರಾಣಪಾಯವಾಗದೆ ಪಾರಾದ ಘಟನೆ ನಡೆದಿದೆ.
ತಿರುಪತಿ ತಿರುಮಲ ಘಾಟನಲ್ಲಿ ಬೈಕ್ ಸವಾರರು ಸಂಚರಿಸುವಾಗ ಹಠಾತ್ತಾಗಿ ಚಿರತೆ ದಾಳಿ ನಡೆಸಿದ್ದು, ಸವಾರರು ಸಣ್ಣಪುಟ್ಟಗಾಯಗೊಂಡು ಜೀವ ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ.
ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆ ಹಿಡಿಯಲು ಹರಸಾಹಸ ಪಡುತ್ತಿದ್ದಾರೆ. ಸದ್ಯಕ್ಕೆ ಘಾಟ ರಸ್ತೆಯಲ್ಲಿ ಸಂಚಾರಕ್ಕೆ ಆತಂಕ ಎದುರಾಗಿದೆ.