ಲಿಂಗಾಯತ ಧರ್ಮ ಕುರಿತು ಸಾಹಿತಿ ಹೊನ್ಕಲ್ ರ ಬರಹ
ಲಿಂಗಾಯತ ಧರ್ಮದ ಬಗ್ಗೆ ಒಂದು ಚಿಂತನೆ
ಸಾಹಿತಿ ಹೊನ್ಕಲ್ ರು ಚಿಂತಿಸಿದ 3 ಪ್ರಶ್ನೆಗೆ ತಾವೇ ವಿವರಿಸಿದ್ದಾರೆ ಓದಿ..
೧)ಅತ್ಯಂತ ಪ್ರಮುಖ ಅಂದ್ರೆ ಹುಟ್ಟಿನಿಂದ ಜಾತಿ ಜಂಗಮರಾದವರಿಗೆ ಇಲ್ಲಿ ಸ್ಥಾನ ಇಲ್ಲ.ಅವರನ್ನು ಹೊರಗಿಡುತ್ತಾರಂತೆ ಅನ್ನುವದು.
ಉತ್ತರ:-ಇದು ಅಪ್ಪಟ ಸುಳ್ಳು.ಯಾರು ಇಂತಹ ಜಾತಿಯಲ್ಲಿ ಹುಟ್ಟಬೇಕು ಅಂತ ಅರ್ಜಿ ಹಾಕಿ ಹುಟ್ಟಿರುವದಿಲ್ಲ.ಹಾಗಾಗಿ ಎಲ್ಲ ಜಂಗಮರು,ಸ್ವಾಮೀಜಿಗಳು,ಮಠಾದೀಶರು ಸಹ ಇಲ್ಲಿ ಇರುತ್ತಾರೆ.ಮೊದಲು ತಾವು ವೀರಶೈವರು ಅಂದುಕೊಂಡವರು ಈಗ ಲಿಂಗಾಯತರು ಅಂತ ಬದಲಾಗುತ್ತದೆ ಅಷ್ಟೇ. ನಾವು ಚಿಕ್ಕವರಿದ್ದಾಗ ಹಿಂದು ಎಂದು ಧರ್ಮದ ಕಾಲಂನಲ್ಲಿ,ಜಾತಿ ಕಾಲಂದಲ್ಲಿ ಲಿಂಗಾಯತ ಅಂತ ಬರೆಸುತ್ತಾ ಇದ್ದೀವಿ.ನಂತರದ ಬೆಳವಣಿಗೆಯಲ್ಲಿ ಧರ್ಮ ಅಂದಾಗ ವೀರಶೈವ ಲಿಂಗಾಯತ ಅಂತ ಮಕ್ಕಳಿಗೆ ಬರೆಯಿಸಿ ಜಾತಿ ಕಾಲಂದಲ್ಲಿ ಉಪ ಪಂಗಡ ಬರೆಸುವದು ಉದಾಹರಣೆಗೆ ಬಣಜಿಗ,ಸಾದರು,ಕುಂಬಾರ,ಹೂಗಾರ,ಮಡಿವಾಳ,ಸವಿತಾ,ಹೀಗೆ..ಈಗ
ಧರ್ಮದ ಕಾಲಂದಲ್ಲಿ ಕೇವಲ ಲಿಂಗಾಯತ ಅಂತ ಬರೆಯಿಸಿ ಜಂಗಮರು,ಬಣಜಿಗರು,ಸಾದರು,ಹೂಗಾರ,ಸಿಂಪಿಗ,ಮಡಿವಾಳ ಎಂದು ಜಾತಿ ಕಾಲಂದಲ್ಲಿ ಬರೆಯಿಸುವದು ಬದಲಾವಣೆ ಆಗುತ್ತದೆ ಅಷ್ಟೇ ಬೇರೇನು ಇಲ್ಲ.
ಪ್ರಶ್ನೆ:೨)ಲಿಂಗಾಯತ ಧರ್ಮ ಬಂದ ಮೇಲೆ ಮನೆಗೆ ಸ್ವಾಮೀಜಿಗಳನ್ನು ಕರೆಯಿಸಿ ಗೌರವಿಸಿ ದಾಸೋಹ,ದಕ್ಷಣೆ ನೀಡುವ ಸಂಸ್ಕೃತಿ ಇರುತ್ತೋ ಇಲ್ಲವೋ ಅನ್ನುವದು ಬಹುದೊಡ್ಡ ಪ್ರಶ್ನೆ.
ಉತ್ತರ:ಕಾಯಕ ದಾಸೋಹ ಲಿಂಗಾಯತ ಧರ್ಮದ ಮುಖ್ಯ ಕಾನಸೆಪ್ಟ ಮೇಲೆ ನಿಂತಿದೆ.ಸತ್ಯ ಶುದ್ಧ ಕಾಯಕ ಮಾಡಿ ಬಂದದರಲ್ಲಿ ದಾಸೋಹ ಮಾಡುವದು.ಅದು ಗುರು,ಲಿಂಗ,ಜಂಗಮಕೆ ಅಂತ ಕ್ಲೀಯರ ಆಗಿಯೇ ಇದೆ.ಲಿಂಗಾಯತರಿಗೆ ಗುರುಗಳು ಅಂದ್ರೆ ಈ ಮಠಾದೀಶರು,ಅಥವಾ ಸ್ವಾಮೀಜಿ, ಅಯ್ಯನವರೇ ಆಗಿರುತ್ತಾರೆ.ಹಾಗಾಗಿ ಇವರಿಗೆ ದಾಸೋಹದ ಮೂಲಕ ಈಗ ಸಲ್ಲುವದೆಲ್ಲವು ಸಲ್ಲುತ್ತದೆ.ಲಿಂಗಾಯತರ ಮನೆ ಗುರು ಎಲ್ಲಿಗೂ ಹೋಗಿರುವದಿಲ್ಲ.ಅವರು ಮುಂದೆಯು ಅವರ ಮನೆ ಗುರುವಾಗಿಯೇ ಇರುತ್ತಾರೆ.
೩)ಪ್ರತಿಯೊಬ್ಬರು ಲಿಂಗಕಟ್ಟಿಕೊಂಡು ಕಂಪಾಲ್ಸರಿಯಾಗಿ ವಿಭೂತಿ ಹಚ್ಚಿಕೊಂಡು ಲಿಂಗಾರ್ಚನೆ ಮಾಡಲೇಬೇಕೆ?ಯಾವ ಗುಡಿ ಗುಂಡಾರಗಳಿಗೆ ಒಟ್ಟು ಹೋಗಲೇಬಾರದಂತೆ ಹೌದಾ?ಮನೆ ದೇವರು ಏನು?ಮಾಡಬೇಕು.
ಉತ್ತರ:ಭಾರತದ ಸಂವಿಧಾನ ಪ್ರತಿಯೊಬ್ಬರಿಗೂ ಅವರಿಗಿಷ್ಟವಾದಂತೆ ಬೇರೆಯವರಿಗೆ ತೊಂದರೆ ಮಾಡದಂತೆ ಬದುಕುವ,ಆಚರಿಸುವ,ಇರುವ, ಎಲ್ಲಾದರೂ ಹೋಗುವ ಬರುವ ಸ್ವಾತಂತ್ರ್ಯ ಕೊಟ್ಟಿದೆ.ನಿಮ್ಮ ನಂಬಿಕೆಗನುಸಾರವಾಗಿ ನೀವು ಯಾವ ದೇವರಿಗಾದರು ಹೋಗಬಹುದು,ನಂಬಬಹುದು, ಆಚರಿಸಬಹುದು ಅಲ್ಲದೆ ಲಿಂಗಾರ್ಚನೆ ಮಾಡಲೇಬೇಕು ಎಂದು ಒತ್ತಾಯಿಸುವದು ಇರುವದಿಲ್ಲ.ಅದು ತಮ್ಮ ನಂಬಿಕೆಗೆ ಸೇರಿದ್ದು.
ಒಟ್ಟಾರೆ ಹೇಳುವದಾದರೆ ವೈದಿಕ ಆಚರಣೆಗಳು ಕಡಿಮೆ ಮಾಡಿಕೊಳ್ಳುವದು ಆ ಮೂಲಕ ಮೂಢನಂಬಿಕೆ,ಶೋಷಣೆಯಿಂದ ಹೊರಗಾಗಬಹುದೇ ಹೊರತು ಏಕದಂ ಎಲ್ಲ ಅದಾದ ಮರುದಿನ ಬದಲಾಗಿ ಹೋಗುತ್ತದೆ ಎಂಬುದಿಲ್ಲ.ನಿಮ್ಮ ಮನೆಯ ಜಗಲಿ,ಮನೆ ದೇವರು ಅದು ನಿಮ್ಮ ನಂಬಿಕೆ ಪ್ರಶ್ನೆ. ಅದನ್ನು ಯಾರು ಕಿತ್ತಲು ಬರೋಲ್ಲ.ನಿಮ್ಮ ಸಂಸ್ಕಾರ ಒಂದೇ ಸಲ ಬದಲಾಗಲ್ಲ.ತಲೆತಲಾಂತರದಿಂದ ಬಂದದ್ದು ಲಿಂಗಾಯತ ಆದ ಮರುದಿನವೇ ಬದಲಾಗುವದು ಎಂದು ಯಾರು ನಿರೀಕ್ಷೆ ಮಾಡಲಾರರು.ಅದು ತಮ್ಮ ಖಾಸಗಿತನ.
ಹಾಗಾಗಿ ಈ ಲಿಂಗಾಯತದ ಒಳಪಂಗಡಗಳಿಗೆ ಗಾಭರಿ ಹುಟ್ಟಿಸಿ ಅವರಿಗೆ ಇಲ್ಲದ ಭಯ ಹಾಕಿ ಈಗ ಇರುವದೇ ಇರಲಿ ಅನ್ನುವಂತೆ ಮಾಡುವ ಹುನ್ನಾರ ನಡೆದಿವೆ.ಅದರ ಜೊತೆಗೆ ಈ ಜಾತಿ ಜಂಗಮರು ತಮ್ಮನ್ನು ಯಾರು ಕೇಳದಂತೆ ಆಗುತ್ತದೆ ಎಂದು ಭಯಕ್ಕೆ ಸ್ವತಹ ಬಿದ್ದಿದ್ದಾರೆ.ಹಾಗೇನು ಆಗುವದಿಲ್ಲ.ಹಾಗಾಗಿ ಇದರ ಬಗ್ಗೆ ಸಲ್ಲದ ಸುದ್ಧಿ ಹಬ್ಬಿಸಬೇಡಿ ಅಂತ ಎಲ್ಲ ನಮ್ಮ ಗ್ರಾಮೀಣ,ಅರೇ ಪಟ್ಟಣದ,ಅವಿಧ್ಯಾವಂಥ ಸ್ವಾಮಿ,ಜಂಗಮ ಸಮಾಜದವರಲ್ಲಿ ನಮ್ಮ ವಿನಂತಿ ಇದೆ.
ಹೀಗೆ ಮೂರು ಮುಖ್ಯ ಪ್ರಶ್ನೆ ನಾನೇ (ಜನರಲ್ಲಿ ಗೊಂದಲ ಮೂಡಿಸಿರುವವುಗಳನ್ನು) ಹಾಕಿಕೊಂಡು ಇಲ್ಲಿ ಉತ್ತರಿಸಿರುವೆ.ಬಸವಾದಿ ಶರಣರು ಕೈಯಲ್ಲಿಯೇ ಲಿಂಗವನ್ನು ಕೊಟ್ಟು ಏಕದೇವೋಪಾಸನೆ ಹೇಳಿದ್ದಾರೆ.ಹುಟ್ಟಿನಿಂದ ಲಿಂಗಾಯತರಾಗಿರುವವರಲ್ಲಿಯೇ ಕೆಲವರು ಲಿಂಗ ಪೂಜೆ ಮಾಡಿಕೊಳ್ಳುವದಿಲ್ಲ.ಕೆಲವರು ಕಟ್ಟಿಕೊಂಡು ಇಲ್ಲ.
ಅದೆಲ್ಲ ಅವರವರ ಅನುಕೂಲ ಹಾಗೂ ನಂಬಿಕೆ ಪ್ರಶ್ನೆ ಅಷ್ಟೇ.ಸಕಲ ಜೀವಾತ್ಮರಲಿ ಲೇಸ ಬಯಸಿ,ಇತರರಿಗೆ ಕೇಡು ಬಯಸದಂತಿದ್ದರೆ ಅದೇ ಮಹಾ ಲಿಂಗಪೂಜೆಯು ಆಗಬಹುದು.ಕಾಯಕದಲ್ಲಿ ನಿರತನಾಗುವದೇ ಲಿಂಗಪೂಜೆಗೆ ಸಮ ಇಲ್ಲಿ.ಯಾರು ಗಾಭರಿ ಆಗಬೇಕಿಲ್ಲ.ದಯವಿಟ್ಟು ಮುಖ್ಯವಾಗಿ ಸಾಮಾನ್ಯ ಭಕ್ತರಿಗಿಂತ ಈ ಗುರುಗಳೇ ಭೀತರಾಗಿದಾರೆ.ನೀವು ಭಯ ಕಳಚಿಕೊಳ್ಳಿ.ಈಗ ಲಿಂಗಾಯತದಲ್ಲಿ ಇರುವ ಉಪ ಪಂಗಡಗಳು ಸಹ ಸರ್ಕಾರದ ಸವಲತ್ತುಗಳಿಂದ ಮುಂದೆಯು ವಂಚಿತವಾಗುವದಿಲ್ಲ.
ಕೆಲವು ಬಸವವಾದಿ ಉಗ್ರರ ಮಾತುಗಳಿಂದ ಈಗಲೇ ಹೆದರದಿರಿ.ಅವರೇನು ಖೋಮೇನಿಗಳು ಅಲ್ಲ.ಅವರು ಬದಲಾದ ಸಂದರ್ಭದಲ್ಲಿ ಖಂಡಿತ ಬದಲಾಗುತ್ತಾರೆ.ಆಗದಿದ್ದರೆ ಅಂತಹವರಿಗೆ ಸಾಮಾನ್ಯ ಸಹಬಾಳ್ವೆ ಬಯಸುವ ಲಿಂಗಾಯತರೇ ನಂತರ ತಿಳಿಸಿ ಹೇಳುತ್ತಾರೆ. ಅಂತಹವರನ್ನು ನೋಡಿ,ಹೆದರಿ ಬಸವಾದಿ ಶರಣರ ಲಿಂಗಾಯತ ಬೇಡ ಅನ್ನಬೇಡಿ.
ಮುಖ್ಯವಾಗಿ ಧರ್ಮಕಿಂತ ಬದುಕು,ಸಮಾನತೆಯ, ಸೌಹಾರ್ದತೆಯ,ಸಹಬಾಳ್ವೆ ಮುಖ್ಯ. ಅದನ್ನು ಮರೆಯದಿರೋಣ.ನಾನೇನಾದರೂ ಬಿಟ್ಟಿದ್ದರೆ ಬಲ್ಲವರು ಹೇಳಲಿ.ನಾನು ನೀವು ಕೂಡಿಯೇ ಒಪ್ಪೋಣ.ತಿದ್ದಿಕೊಳ್ಳೋಣ. ನಾನು ಹೇಳಿದ ವಿಚಾರಗಳು ಒಪ್ಪುವವರು ದಯವಿಟ್ಟು ನಿಮ್ಮ ಅಭಿಪ್ರಾಯ ತಿಳಿಸಿ.ಬದಲಾವಣೆ ಜಗದ ನಿಯಮ.ನಾನು ನೀವು ಸಹ ಬದಲಾಗೋಣ.ನಿಮ್ಮ ಪ್ರತಿಕ್ರಿಯೆ ಗೌರವಯುತ ಚರ್ಚೆಗೆ ಕಾರಣವಾಗಲಿ.ಇದು ನೂರಾರು ಜನರ ಅನಿಸಿಕೆ ಆಲಿಸಿ ಅವರನ್ನು ಒಳಗೊಳ್ಳಲು ಬರೆದಿರುವೆ.
ಇನ್ನೊಂದು ಬಹುಮುಖ್ಯ ವಿಷಯ ಅಂದರೆ ಇದು ವೀರಶೈವ ಲಿಂಗಾಯತರ ಮಧ್ಯೆ ಈಗ ಉಂಟಾಗಿರುವ ಒಂದು ತಾತ್ಕಾಲಿಕ ಗೊಂದಲ.ದಯವಿಟ್ಟು ಇತರರು ಇದನ್ನು ಸಿನಿಕತನದಿಂದ ನೋಡಿ ಉಢಾಫೆ ಸ್ಟೇಟಸ್ ಹಾಕುವದು,ಅನಗತ್ಯ ಟೀಕೆ ಮಾಡಿ ಮನಸ್ಸು ಕೆಡಿಸುವದು ಮಾಡಬೇಡಿ.ದಯವಿಟ್ಟು ಇದು ತಮಗಲ್ಲವೆ ಅಲ್ಲ.ಇಂಥವುಗಳನ್ನು ಓದಲೇ ಹೋಗಬೇಡಿ.ಪ್ರತಿಕ್ರಿಯೆಯು ಮಾಡಬೇಕಾದ ಅಗತ್ಯ ವು ಸಹ ಇಲ್ಲ.ಪರಧರ್ಮದ ಬಗ್ಗೆ ಆಸಕ್ತಿ, ಸಹಾನುಭೂತಿ ಇದ್ದವರು ಗಮನಿಸಿದರೆ ಬೇಜಾರಿಲ್ಲ. ಎಲ್ಲರಿಗೂ ನಮಸ್ಕಾರ.
ತಮ್ಮ ವಿಶ್ವಾಸಿ
ಸಿದ್ಧರಾಮ ಹೊನ್ಕಲ್.
ಲೇಖಕ,ಶಹಾಪುರ(ಕಲಬುರ್ಗಿ)