ಪ್ರಮುಖ ಸುದ್ದಿ

ಲಿಂಗಾಯತ ಧರ್ಮ ವಿಚಾರ: ಎಂ.ಬಿ.ಪಾಟೀಲ್ ಮತ್ತು ಪ್ರಭಾಕರ್ ಕೋರೆ ನಡುವೆ ಜಟಾಪಟಿ

ಲಿಂಗಾಯತ ಧರ್ಮ ವಿಚಾರ: ನಾಯಕರ ನಡುವೆ ಜಟಾಪಟಿ

ಬೆಂಗಳೂರಃ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ಬೆಂಗಳೂರಿನ ಹೊಟೇಲ್ ವೊಂದರಲ್ಲಿ ನಡೆದ ಮಹಾಸಭೆಯಲ್ಲಿ ಸಚಿವ ಎಂ.ಬಿ.ಪಾಟೀಲ್ ಹಾಗೂ ಮುಖಂಡ ಪ್ರಭಾಕರ್ ಕೋರೆ ನಡುವೆ ಮಾತಿನ ಜಟಾಪಟಿ ನಡೆದಿದೆ.

ಜನೇವರಿಯೊಳಗೆ ಲಿಂಗಾಯತ ಪ್ರತ್ಯೇಕ ಧರ್ಮ ಕುರಿತು ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸಬೇಕಿದೆ ಕಾರಣ ಆದಷ್ಟು ಎಲ್ಲರೂ ಭಿನ್ನಮತ ಪಕ್ಷಬೇಧ ಮರೆತು ಕೈಜೋಡಿಸಬೇಕಿದೆ ಎಂದು ಎಂ.ಬಿ.ಪಾಟೀಲ್ ಹೇಳುತ್ತಿದ್ದಂತೆ,

ಸಭೆಯಲ್ಲಿದ್ದ ಹಿರಿಯ ನಾಯಕ ಪ್ರಭಾಕರ ಕೋರೆಯವರು, ಯಾಕ್ರಿ ಜನೇವರಿಯೊಳಗೆ ಆಗಬೇಕು.? ನೀವ್ಯಾಕ ಹೇಳ್ತಿದ್ದೀರಿ ಅಂತ ಗೊತ್ತು ಬಿಡಿ ನಮಗೆ ಎಂದಾಗ ಮಾತಿನ ವಾಕ್ಸಮರ ನಡೆಯಿತು.

ಜನೇವರಿ ಯಲ್ಲಿ ಚುನಾವಣೆ ಘೋಷಣೆಯಾಗುತ್ತದೆ. ಆಗ ಕೆಲಸ ಆಗಲ್ಲ ಈಗಲೇ ನಿರ್ಧಾರ ಪ್ರಕಟಿಸಿದರೆ, ಚುನಾವಣೆ ಘೋಷಣೆಯೊಳಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡಬಹುದು ಎಂದು ಓಪನ್ ಆಗಿಯೇ ಪಾಟೀಲರು ಹೇಳುದರು. ಆಗ ಕೋರೆಯವರು ಅದನ್ನೆ ಹೇಳ್ತಾ ಇರೋದೆ ಲಿಂಗಾಯತ ಸಮುದಾಯವನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಅದು ಚುನಾವಣೆ ಹೊಸ್ತಿಲಲಿ ಅದೆಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣೆ ಅಜೆಂಡಾವಾಗಿ ಇದನ್ನೆ ಬಳಸಿಕೊಳ್ಳಲು ನೀವು ತಯಾರಾಗಿದ್ದೀರಿ ಎನ್ನುತ್ತಿರುವಾಗ,

ಪಾಟೀಲರು ನೀವೆನ್ ಈಗ ಬಂದು ಹೇಳ್ತೀರಾ ನಮಗೂ ಗೊತ್ತಿದೆ ಏನ್ಮಾಡಬೇಕು ಎಂದು ಏರು ಧ್ವನಿಯಲ್ಲಿಯೇ ಅಂದರು. ಆಗ ಸಚಿವ ಶರಣಪ್ರಕಾಶ ಪಾಟೀಲ್ ಮಧ್ಯೆ ಪ್ರವೇಶಿಸಿ ಶಾಂತಗೊಳಿಸಿದರು ಎಂದು ತಿಳಿದು ಬಂದಿದೆ.

Related Articles

One Comment

Leave a Reply

Your email address will not be published. Required fields are marked *

Back to top button