ವಿನಯ ವಿಶೇಷ

ವಿನಯವಾಣಿ ವಿಶೇಷ : ಗುಜರಾತಿನ ಸಿಂಹ ಹುಲ್ಲು ತಿನ್ನುತ್ತಿದೆ ನೋಡಿ!

ಗುಜರಾತ್‌ನ ಗಿರ್ ಕಾಡಿನಲ್ಲಿ ಸಿಂಹ ಹುಲ್ಲು ತಿನ್ನುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು ಟ್ವಿಟರ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.  ನಿಜಕ್ಕೂ ಈ ವಿಚಾರ ವಿಚಿತ್ರವೆನಿಸಬಹುದು ಆದರೆ ವನ್ಯಜೀವಿಗಳ ಬಗ್ಗೆ ಸಮರ್ಪಕ ಮಾಹಿತಿಯುಳ್ಳವರಿಗೆ ಆಶ್ಚರ್ಯವಾಗುವುದಿಲ್ಲ. ಸಿಂಹಗಳು ಮಾಂಸವನ್ನು ಆನಂದಿಸುತ್ತವೆ ಆದರೆ ಹೆಚ್ಚಾಗಿ ಹುಲ್ಲು ತಿನ್ನುತ್ತವಂತೆ.

ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿರುವ ವಿಡಿಯೋದಲ್ಲಿ ಸಿಂಹವೊಂದು ಕಾಡಿನಲ್ಲಿರುವ ಹುಲ್ಲುಗಾವಲಿನಲ್ಲಿ ಪೊದೆಗಳು ಮತ್ತು ಗಿಡಮೂಲಿಕೆಗಳನ್ನು ಅಗಿದು ತಿನ್ನುವ ದೃಶ್ಯವಿದೆ.  ಅಂತರ್ಜಾಲದಲ್ಲಿ ಒಂದಷ್ಟು ಜನ ರಂಜಿಸುತ್ತಿದ್ದು ತಮಾಷೆಯಾಗಿ ಅಭಿಪ್ರಾಯ ದಾಖಲಿಸುತ್ತಿದ್ದಾರೆ. ಕೆಲವರು “ಸಸ್ಯಾಹಾರಿ ಸಿಂಹ” ಎಂದರೆ, ಮತ್ತೊಬ್ಬರು “ಆ ಬಡವನನ್ನು ಅವನ ಹೆಂಡತಿ ಆಹಾರಕ್ರಮಕ್ಕೆ ಹೇಳಿದ್ದಳು. ಅವಳು ಸಿಂಹಿಣಿ.” ಅಂದರೆ ಇನ್ನೊಬ್ಬರು ”ಶ್ರಾವಣ ಸಿಂಹ” ಎಂದಿದ್ದಾರೆ!

ಇನ್ನೂ ಅನೇಕರು ಸಿಂಹವನ್ನು ಹುಲ್ಲು ಸೇವಿಸುವುದರ ಹಿಂದಿನ ಕಾರಣವನ್ನು ವಿವರಿಸಿದ್ದಾರೆ.  ಪ್ರಾಣಿ ತನ್ನ ಕರುಳನ್ನು ಸ್ವಚ್ಚ ಗೊಳಿಸಲು ಆಗಾಗ್ಗೆ ಹುಲ್ಲು ತಿನ್ನುತ್ತದೆ ಎಂದು ಹೇಳಿದ್ದಾರೆ. “ಎಲ್ಲಾ ಜಾತಿಯ ಬೆಕ್ಕುಗಳು ಹುಲ್ಲನ್ನು ತಿನ್ನುತ್ತವೆ ಎಂದು ಹಲವರು ಟ್ವೀಟ್ ಮಾಡಿದ್ದಾರೆ. ಅಂತೆಯೇ ತಜ್ಞರು ಸಹ ಸಿಂಹಗಳು ಸೇವಿಸುವ ಕಚ್ಚಾ ಮಾಂಸವು ಆಮ್ಲೀಯ ಪರಿಣಾಮವನ್ನು ಬೀರುತ್ತದೆ ಮತ್ತು ಜೀರ್ಣಕ್ರಿಯೆಯಲ್ಲಿ ತೊಂದರೆ ಉಂಟುಮಾಡುತ್ತದೆ. ಆದ್ದರಿಂದ ಹುಲ್ಲು ಅದರ ವ್ಯವಸ್ಥೆಯನ್ನು ಸ್ವಚ್ಛ ಗೊಳಿಸಲು ಸಹಾಯ ಮಾಡುತ್ತದೆ ಎಂದು ಹೇಳುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button