LIVE : ಜಮ್ಮು ಕಾಶ್ಮೀರ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾತು
ನವದೆಹಲಿ: ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ 370, 35ಎ ವಿಧಿ ರದ್ದುಗೊಳಿಸಿದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಮೋದಿ ಮಾತಿನ ಸಾರಾಂಶ ಇಲ್ಲಿದೆ…
ಡಾ.ಬಿ.ಆರ್.ಅಂಬೇಡ್ಕರ್, ಶಾಮ ಪ್ರಸಾದ್ ಮುಖರ್ಜಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಅಟಲ್ ಬಿಹಾರಿ ವಾಜಪೇಯಿ ಅವರ ಕನಸು ನನಸಾಗಿದೆ. ದೇಶದ ನಿರ್ಧಾರಕ್ಕೆ ಸ್ಪಂದಿಸಿದ ಜಮ್ಮು ಕಾಶ್ಮೀರದ ಜನರಿಗೆ ನಾನು ಕೃತಗ್ನತೆ ಸಲ್ಲಿಸುತ್ತೇನೆ. ಈವರೆಗೆ ಜಮ್ಮು ಕಾಶ್ಮೀರದಲ್ಲಿ ಹೊಸ ಯುಗ ಆರಂಭವಾಗಿದೆ. ಈವರೆಗೆ 42ಸಾವಿರ ಜನ ಅಲ್ಲಿ 370ವಿಧಿಯ ಪರಿಣಾಮ ಉಗ್ರವಾದದಿಂದ ಜೀವ ಕಳೆದುಕೊಂಡಿದ್ದರು. ಅಲ್ಲಿನ ಜನರಿಗೆ ಅಭಿವೃದ್ಧಿ ಗಗನ ಕುಸುಮವಾಗಿತ್ತು. ಶಿಕ್ಷಣ, ಸಫಾಯಿ ಕರ್ಮಚಾರಿ ಹಕ್ಕು ಸೇರಿದಂತೆ ದೇಶದ ವಿವಿಧ ನಿಯಮಗಳು, ಇತರೆ ಯೋಜನೆಗಳಿಂದ ಅಲ್ಲಿನ ಜನ ವಂಚಿತರಾಗಿದ್ದು. ಹೀಗಾಗಿ, ಜಮ್ಮು ಕಾಶ್ಮೀರ ವಿಭಜನೆ ಮೂಲ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದೇವೆ. ಹೊಸ ನಿರ್ಧಾರದಿಂದ ಕಾಶ್ಮೀರಕ್ಕೆ ಬಲ ಬಂದಿದ್ದು ಭವಿಷ್ಯದ ಕಾಶ್ಮೀರ ಸುಭದ್ರವಾಗಿದ್ದು ಸುರಕ್ಷತೆ ಸಿಗಲಿದೆ..
ಮೋದಿ ಭಾಷಣ ಮುಂದುವರೆದಿದೆ…