ಮೇ ಪೂರ್ತಿ ಮನೆಯಲ್ಲೆ ಇರಿ, ಲಾಕ್ ಡೌನ್ ವಿಸ್ತರಣೆ ಸಾಧ್ಯತೆ
ಮೇ ಪೂರ್ತಿ ಮನೆಯಲ್ಲೆ ಇರಿ, ಲಾಕ್ ಡೌನ್ ವಿಸ್ತರಣೆ ಸಾಧ್ಯತೆ
ಬೆಂಗಳೂರಃ ಮೇ.24 ಸಮೀಪಿಸುತ್ತಿದ್ದಂತೆ ಲಾಕ್ ಡೌನ್ ಅವಧಿ ಮುಗಿಯುತ್ತಾ ಬಂತು ಎಂದುಕೊಳ್ಳಬೇಡಿ. ಮಹಾಮಾರಿ ಅಟ್ಟಹಾಸ ಮುಂದುವರೆದಿರುವ ಕಾರಣ ಲಾಕ್ ಡೌನ್ ಅವಧಿ ಇನ್ನೂ ಕಠಿಣಗೊಳಿಸಿ ಈ ತಿಂಗಳ ಪೂರ್ತಿಯಾಗಿ ಮನೆಯಲ್ಲಿಯೇ ಜಾಗರಣೆ ಮಾಡುವ ಮಾರ್ಗಸೂಚಿ ಬಿಡುಗಡೆಯಾಗುವ ಸಾಧ್ಯತೆಗಳು ಇವೆ.
ಸದ್ಯ ಬೆಂಗಳೂರಿನಲ್ಲಿ ಈ ಕುರಿತು ಸಚಿವರೊಂದಿಗೆ ಸಭೆ ನಡೆಸುತ್ತಿರುವ ಸಿಎಂ ಯಡಿಯೂರಪ್ಪ ಮೇ.ಪೂರ್ತಿ ಲಾಕ್ ಡೌನ್ ಗೊಳಿಸುವ ನಿರ್ಧಾರಕ್ಕೆ ಬರುವ ಸಾಧ್ಯತೆಗಳು ಕಂಡು ಬರುತ್ತಿವೆ ಎನ್ನಲಾಗಿದೆ.
ಸಿಎಂ ಯಡಿಯೂರಪ್ಪ ಸಚಿವರೊಂದಿಗೆ ಚರ್ಚಿಸಿ ಅಲ್ಲದೆ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ಕರೆ ಮಾಡಿ ಕೊರೊನಾ ಸ್ಥಿತಿಗತಿ ಕುರಿತು ಮಾಹಿತಿನಮನ ಪಡೆಯುತ್ತಿದ್ದು, ಇಷ್ಟರಲ್ಲಿಯೇ ಹೊಸ ಲಾಕ್ ಡೌನ್ ಅವಧಿ, ಕಠಿಣ ಕ್ರಮ ಕುರಿತು ವಿಷಯ ಹೊರ ಬೀಳಲಿದೆ ಎನ್ನಲಾಗಿದೆ. ಬಹುತೇಕ ಎಲ್ಲಾ ಜಿಲ್ಲೆಗಳಿಂದ ಲಾಕ್ ಡೌನ್ ವಿಸ್ತರಣೆಗೆ ಬೇಡಿಕೆ.
ಕೊರೊನಾ ಹೆಮ್ಮಾರಿ ತಡೆಗೆ ಕಠಿಣ ಲಾಕ್ ಡೌನ್ ಅಗತ್ಯವಿದೆ ಎಂಬುದನ್ನು ಜಿಲ್ಲಾಧಿಕಾರಿಗಳು ತಿಳಿಸುತ್ತಿದ್ದು, ಹೀಗಾಗಿ ಲಾಕ್ ಡೌನ್ ವಿಸ್ತರಣೆ ಸಾಧ್ಯವಿದೆ ಎಂದು ಹೇಳಬಹುದು. ಅಲ್ಲದೆ ಸಚಿವರು ಸಹ ಲಾಕ್ ಡೌನ್ ವಿಸ್ತರಣೆ ಮಾಡಿದರೆ ಒಳ್ಳೆಯದು ಎಂದು ತಿಳಿಸಿದ್ದಾರೆ.