ಪ್ರಮುಖ ಸುದ್ದಿ
ಮೇ 17 ಕ್ಕೆ ಲಾಕ್ ಡೌನ್ ಅಂತ್ಯವಲ್ಲ ಮುಂದುವರೆಯಲಿದೆ.?
ವಿವಿ ಡೆಸ್ಕ್ಃ ಕೊರೋನಾ ಸೋಂಕು ತಡೆಗಗಾಗಿ ಜಾರಿ ಮಾಡಲಾದ ಮೂರನೇಯ ಹಂಥದ ಲಾಕ್ ಡೌನ್ ಮೇ 17 ಕ್ಕೆ ಮುಕ್ತಾಯವಾಗಯವ ಲಕ್ಷಣಗಳು ಕಾಣುತ್ತಿಲ್ಲ.
ಲಾಕ್ ಡೌನ್ ಸಡಿಲಿಕೆ ಮಾಡಿದ ಮೇಲೇ ಇನ್ನಷ್ಟು ಕೊರೋನಾ ಸೋಂಕು ಹರಡುವ ಪ್ರಮಾಣ ಜಾಸ್ತಿ ಆಗುತ್ತಿದ್ದು ಪರಿಣಾಮ ಲಾಕ್ಡೌನ್ ಕಟ್ಟು ನಿಟ್ಟಾಗಿ ಮುಂದುವರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಲಾಕ್ ಡೌನ್ ಹಿಂಪಡೆದು ಮತ್ತೆ ಸಮಸ್ಯೆಗೆ ಅವಕಾಶ ಕೊಡಬೇಡಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಸಹ ಎಚ್ಚರಿಕೆ ನೀಡಿದೆ ಎನ್ನಲಾಗಿದೆ.
ಅನೇಕ ದೇಶಗಳಲ್ಲಿ ಆರ್ಥಿಕತೆ ಉದ್ದೇಶದಿಂದ ಲಾಕ್ಡೌನ್ ಸಡಿಲಗೊಳಿಸಿದ್ದು, ಮತ್ತೆ ಕೆಲವು ದೇಶಗಳಲ್ಲಿ ಲಾಕ್ಡೌನ್ ಹಿಂಪಡೆಯಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೋಸ್ ಅಧಾನೊಮ್ ಗೆಬ್ರೋಸ್, ಕೊರೋನಾ ಸೋಂಕು ತೀವ್ರವಾಗಿ ಹರಡುವುದನ್ನು ತಡೆಯಲು ಮುನ್ನೆಚ್ಚರಿಕೆ ಅಗತ್ಯ ಎಂದಿದ್ದಾರೆ. ಇಲ್ಲವಾದಲ್ಲಿ ಮತ್ತೆ ಲಾಕಗ ಡೌನ್ ಅನಿವಾರ್ಯ ಎಂದು ಹೇಳಲಾಗುತ್ತಿದೆ.