LOCK DOWN-work ಒಂದು ಕೀಮೀನಷ್ಟು ಬೆಳೆದು ನಿಂತ ಜಾಲಿಗಿಡ ಕಡಿದ ದೈಹಿಕ ಶಿಕ್ಷಕರ ತಂಡ
ಸ್ವಯಂಪ್ರೇರಣೆಯಿಂದ ಯುವಕರ ಕಸರತ್ತುಃ ನಾಗರಿಕರಿಂದ ಮೆಚ್ಚುಗೆ
ಮಲ್ಲಿಕಾರ್ಜುನ ಮುದ್ನೂರ
yadgiri, ಶಹಾಪುರಃ ಕೊರೊನಾ ತೀವ್ರೆತೆ ನಡುವೆ ಲಾಕ್ ಡೌನ್ ಜಾರಿಯಾದ ಪರಿಣಾಮ ಸಾಕಷ್ಟು ಜನರು ಮನೆಯಲ್ಲಿಯೇ ಇಷ್ಟವಾದ ಅಡುಗೆ ಮಾಡಿಕೊಂಡು ಮನೋರಂಜಾನತ್ಮಕ ಆಟಗಳನ್ನು ಆಡತ್ತಾ ಕಾಲ ಕಳೆದರೆ, ಇಲ್ಲೊಂದು ಯುವಕರ ತಂಡ ಸಾಮಾಜಿಕವಾಗಿ ಅತ್ಯುತ್ತಮ ಕೆಲಸಕ್ಕೆ ಮುಂದಾಗಿದೆ.
ಹೌದು ಕೊರೊನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿರುವ ಕಾರಣ ಸರ್ಕಾರ ಎರಡು ವಾರಗಳ ಕಾಲ ಲಾಕ್ ಡೌನ್ ಜಾರಿಗೊಳಿಸಿತು. ಕೆಸಲವಿಲ್ಲದೆ ಎರಡು ವಾರಗಳ ಕಾಲ ಮನೆಯಲ್ಲಿಯೇ ಸುಮ್ಮನೆ ಕೂಡದೆ ಏನಾದರೂ ಸಾಮಾಜಿಕ ಕಾರ್ಯ ಮಾಡಬೇಕೆಂಬ ಹಂಬಲದಿಂದ ನಗರದ ಸಹರಾ ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಬಸವರಾಜ ಚಲವಾದಿ ಹಾಗೂ ಆತನ ಮೂವರು ಸ್ನೇಹಿತರಾದ ಮಲ್ಲಿಕಾರ್ಜುನ ಬಮ್ಮನಹಳ್ಳಿ, ರಾಹುಲ್ ನಾಟೇಕಾರ ಮತ್ತು ಭೀಮಣ್ಣ ಚರ್ಚಿಸಿ ಹಾಳು ಬಿದ್ದ ಮಾವಿನ ಕೆರೆ ಉದ್ಯಾನವನ ಸ್ವಚ್ಛಗೊಳಿಸುವ ನಿರ್ಧಾರ ಮಾಡಿದರು.
ಕಳೆದ ಐದು ವರ್ಷದ ಹಿಂದೆ ಮಾವಿನ ಕೆರೆಯ ಒಡ್ಡಿನ ಮೇಲೆ ಜಿಲ್ಲಾ ಪಂಚಾಯತ ಅನುದಾನದಿಂದ ನಿರ್ಮಿಸಲಾಗಿದ್ದ ಉದ್ಯಾನವನ ನಿರ್ವಹಣೆ ಇಲ್ಲದೆ ಹಾಳು ಬಿದ್ದಿತ್ತು. ಒಡ್ಡಿನ ತುಂಬೆಲ್ಲ ಜಾಲಿಗಿಡ ಬೆಳೆದು ನಿಂತಿದ್ದವು ಯಾರೊಬ್ಬರು ಅತ್ತ ಹೋಗದ ಸ್ಥಿತಿ ನಿರ್ಮಾಣವಾಗಿತ್ತು. ನಿರ್ಧರಿಸಿದ ಮರು ಕ್ಷಣವೇ ಸ್ವಯಂ ಪ್ರೇರಣೆಯಿಂದ ಉದ್ಯಾನವನದಲ್ಲಿ ಬೆಳೆದ ಜಾಲಿಗಿಡಗಳನ್ನು ಕಡಿಯಲು ಕೊಡ್ಲಿ ಕೈಯಲ್ಲಿ ಹಿಡಿದು ನಡೆದೆ ಬಿಟ್ಟರು.
ಒಂದು ವಾರದಲ್ಲಿ ಸುಮಾರು ಅರ್ಧ ಕಿಮೀನಷ್ಟು ಜಾಲಿಗಿಡಗಳನ್ನು ಕಡಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಈಗಾಗಲೇ ಅರ್ಧ ಕಿಮೀ ನಷ್ಟು ಬೆಳೆದ ನಿಂತ ಜಾಲಿ ಕಡಿದು ಸ್ವಚ್ಛಗೊಳಿಸಿದ್ದಾರೆ. ಇನ್ನು ಅರ್ಧದಷ್ಟು ಕೆಲಸ ಬಾಕಿ ಉಳಿದಿದೆ ಎಂದು ಖುಷಿ ವ್ಯಕ್ತಪಡಿಸುತ್ತಾರೆ ಆ ನಾಲ್ವರು. ಅದನ್ನು ಇನ್ನೂ ಒಂದು ವಾರದಲ್ಲಿ ಮುಗಿಸುತ್ತೇವೆ ಎಂದು ನಗೆ ಬೀರುತ್ತಾರೆ ಗೆಳೆಯರು.
ಸದ್ಯ ಜಾಲಿಗಿಡ ಮಾಯವಾಗಿ ಮಾವಿನ ಕೆರೆ ಉದ್ಯಾನವನ ಜಾಗ ಬಯಲಾಗಿ ಕಂಗೊಳಿಸುತ್ತಿದೆ. ಸಂಜೆ ವಿಹಾರಕ್ಕೆ ಮತ್ತೆ ಸಿದ್ಧಗೊಂಡತಿದೆ. ದೈಹಿಕ ಶಿಕ್ಷಕ ಸೇರಿದಂತೆ ನಾಲ್ವರ ಯುವಕರ ಕೆಲಸ ನೋಡಿ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಲಾಕ್ ಡೌನ್ ನಲ್ಲಿ ಕೆಲಸವಿಲ್ಲ. ಖಾಲಿ ಕುಳಿತು ಏನ್ಮಾಡುವದೆಂದು ಯೋಚಿಸಿ ಮಾವಿನ ಕೆರೆ ಉದ್ಯಾನವನ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾದೇವು. ಅಲ್ಲಿ ಸಂಪೂರ್ಣ ಜಾಲಿ ಆವರಿಸಿತ್ತು. ನಾಲ್ವರು ಗೆಳೆಯರು ಸೇರಿ ಕೊಡ್ಲಿಯಿಂದ ಅವುಗಳನ್ನು ಕಡಿಯುತ್ತಾ ಸಾಗಿದೇವು. ಈಗ ನೋಡಲು ಬಯಲಾಗಿ ಸಂಜೆ ವಿಹಾರಕ್ಕೆ ಉತ್ತಮ ಪ್ರದೇಶವಾಗಿ ಕಂಗೊಳಿಸುತ್ತಿದೆ. ಕೊರೊನಾ ಸಮಯದಲ್ಲಿ ನಮಗೆ ಉತ್ತಮ ವ್ಯಾಯಾಮವು ಆಯಿತು ಒಂದು ಒಳ್ಳೆಯ ಕೆಲಸ ಆಯಿತೆಂಬ ಖುಷಿ ಇದೆ. ಇದೆಲ್ಲ ಮುಗಿದ ಮೇಲೆ ಸಸಿಗಳನ್ನು ನೆಡಲಾಗುವದು.
-ಬಸವರಾಜ ಚಲವಾದಿ. ದೈಹಿಕ ಶಿಕ್ಷಕ.
————-
ದೈಹಿಕ ಶಿಕ್ಷಕ ಸೇರಿದಂತೆ ಅವರ ತಂಡ ಇಡಿ ಕೆರೆ ಒಡ್ಡಿನ ಉದ್ದಕ್ಕೂ ಬೆಳೆದು ನಿಂತ ಜಾಲಿಗಿಡ ಕಡಿಯುವ ಕೆಲಸ ಮಾಡುತ್ತಿರುವದು ಸಾಹಸದ ಕೆಲಸವೇ ಸರಿ. ಅವರ ಕಾರ್ಯ ಶ್ಲಾಘನೀಯವಾದದು. ಲಕ್ಷಾಂತರ ರೂ.ಖರ್ಚು ಮಾಡಿ ಉದ್ಯಾನ ನಿರ್ಮಿಸಿದ ಸರ್ಕಾರ ಸಮರ್ಪಕವಾಗಿ ನಿರ್ವಹಣೆ ಮಾಡದೆ ಹಾಳುಗೆಡುವಿತು. ಸುತ್ತಲೂ ಜಾಲಿಗಿಡಗಳು ಹೆಮ್ಮರವಾಗಿ ಬೆಳೆದು ನಿಂತಿದ್ದವು, ಇದೀಗ ಯುವಕರ ಅವುಗಳನ್ನು ಕಡಿದು ಸ್ವಚ್ಛಗೊಳಿಸುತ್ತಿರುವದು ಉತ್ತಮ ಕಾರ್ಯವಾಗಿದ್ದು, ಇನ್ನುಳಿದ ಯುವಕರಿಗೆ ಮಾದರಿಯಾಗಿದ್ದಾರೆ.–ಬಸವರಾಜ ಕಡಗಂಚಿ. ಉದ್ಯಮಿ.