ಯಾದಗಿರಿಯಲ್ಲಿ ಲಾಕ್ ಡೌನ್ ಮುಂದುವರಿಕೆ, ಅತ್ತ ಸಿಎಂ ರಾಜ್ಯದಲ್ಲಿ ಇನ್ಮುಂದೆ ಲಾಕ್ ಡೌನ್ ಇಲ್ಲ ಹೇಳಿಕೆ
ಯಾದಗಿರಿಃ ಲಾಕ್ ಡೌನ್ ಮುಂದುವರಿಸಿ ಡಿಸಿ ಕೂರ್ಮಾರಾವ್ ಆದೇಶ
ಯಾದಗಿರಿಃ ಜಿಲ್ಲೆಯಲ್ಲಿ ಜುಲೈ 29 ರವರೆಗೆ ಲಾಕ್ ಡೌನ್ ಮುಂದುವರೆಸಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಆದೇಶ ಹೊರಡಿಸಿದ್ದಾರೆ.
ನಾಳೆಗೆ ಮೊದಲ ಒಂದು ವಾರದ ಲಾಕ್ ಡೌನ್ ಅವಧಿ ಮುಗಿಯಲಿದ್ದು, ನಾಳೆಯಿಂದಲೇ ಮತ್ತೆ ಜುಲೈ 29 ರವೆಗೆ ಲಾಕ್ ಡೌನ್ ಮುಂದುವರೆಸಿ ಆದೇಶಿಸಿದ ಜಿಲ್ಲಾಧಿಕಾರಿಗಳು, ಕೊರೊನಾ ಮಹಾಮಾರಿ ತೀವ್ರತೆ ತಡೆಗೆ ಲಾಕ್ ಡೌನ್ ಅಗತ್ಯ. ನಾಗರಿಕರು ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಕೊರೊನಾ ತಡೆಗೆ ಸಹಕರಿಸಬೇಕು ಎಂದು ತಿಳಿಸಿದ್ದಾರೆ.
ಆದರೆ ಅತ್ತ ಸಿಎಂ ಯಡಿಯೂರಪ್ಪ ರಾಜ್ಯದ ಯಾವುದೇ ಭಾಗದಲ್ಲಿ ಇನ್ಮುಂದೆ ಲಾಕ್ ಡೌನ್ ಜಾರಿ ಇಲ್ಕ.ಕೊರೊನಾ ತಡೆಗೆ ಲಾಕ್ ಡೌನ್ ಒಂದೇ ಪರಿಹಾರವಲ್ಲ. ಹೀಗಾಗಿ ಬೆಂಗಳುರ ಸೇರಿದಂತೆ ರಾಜ್ಯದ ಯಾವುದೇ ಭಾಗದಲ್ಲಿ ಲಾಕ್ ಡೌನ್ ಇರುವದಿಲ್ಲ. ಈ ಕುರಿತು ಜಿಲ್ಲಾಧಿಕಾರಿ ಗಳೊಂದಿಗೆ ಮಾತನಾಡುವೆ ಎಂದು ಹೇಳಿಕೆ ನೀಡಿದ್ದಾರೆ.
ಹೀಗಾಗಿ 29 ರವರೆಗಿನ ಲಾಕ್ ಡೌನ್ ಇಲ್ಲಿನ ಜಿಲ್ಲಾಧಿಕಾರಿಗಳು ವಾಪಸ್ ಪಡೆಯಲಿದ್ದಾರೆಯೇ ಯಾವುದಕ್ಕು ಕಾಯ್ದು ನೋಡಬೇಕು.