ಪ್ರಮುಖ ಸುದ್ದಿ

ಯಾದಗಿರಿ 1 ವಾರ ಲಾಕ್ ಡೌನ್ ಸುದ್ದಿ ಸುಳ್ಳು, ಡಿಸಿ ಕಚೇರಿಯಿಂದ ಅಧಿಕೃತ ಪ್ರಕಟಣೆ ಬಂದಿಲ್ಲ

ಯಾದಗಿರಿ ಲಾಕ್ ಡೌನ್ ಸುದ್ದಿ ಸುಳ್ಳು ವೈರಲ್ 

ಯಾದಗಿರಿಃ ಯಾದಗಿರಿ ಜಿಲ್ಲೆ ಒಂದು ವಾರ ಲಾಕ್ ಡೌನ್ ಎಂದು ಸುದ್ದಿ ಹರಡಿದ್ದು ಶುದ್ಧ ಸುಳ್ಳು, ಇದುವರೆಗೂ ಜಿಲ್ಲಾಧಿಕಾರಿ ಕಚೇರಿಯಿಂದ ಯಾವುದೇ ಅಧಿಕೃತ ಆದೇಶ ಹೊರಬಿದ್ದಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಯಾದಗಿರಿ ಜಿಲ್ಲಾಧಿಕಾರಿಗಳು ಆದೇಶದ ಪ್ರತಿ‌ ಎಂಬಂತೆ ಅನಧಿಕೃತವಾಗಿ ಯಾರೋ ಅದನ್ನು ಎಡಿಟ್ ಮಾಡಿ ಹರಿ‌ ಬಿಟ್ಟಿದ್ದಾರೆ. ಅನಧಿಕೃತ ಆದೇಶ ಕಾಪಿ ನೋಡಿ ಜನ ಮಾಧ್ಯಮದವರಿಗೆ ಕಾಲ್ ಮಾಡ್ತಾ ಇದ್ದಾರೆ ನಿಜನಾ‌ ಅಂತ ತಿಳಿದುಕೊಳ್ಳಲು.

ಅಧಿಕೃತ ಮಾಹಿತಿ ಪ್ರಕಾರ ಜುಲೈ 15 ರಿಂದ ಜುಲೈ 22 ರವರೆಗೆ ಲಾಕ್ ಡೌನ್ ಮಾಡುವ ಕುರಿತು ಜಿಲ್ಲಾಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎನನಲಾಗಿದೆ.‌ ಇಂದು ಸಂಜೆ‌‌‌ ಕೊರೊನಾ ಪರೀಕ್ಷಾ ವರದಿ ಹೊರಬಿದ್ದ‌ನಂತರ ಜಿಲ್ಲಾಧಿಕಾರಿಗಳು ಲಾಕ್ ಡೌನ್ ಕುರಿತು ಮಾಹಿತಿ‌ ನೀಡಲಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button