ಪ್ರಮುಖ ಸುದ್ದಿ
ಶಹಾಪುರ ಲಾಡ್ಜವೊಂದರಲ್ಲಿ ವ್ಯಕ್ತಿ ಆತ್ಮಹತ್ಯೆ
ಬಸ್ ನಿಲ್ದಾಣ ಪಕ್ಕದ ಲಾಡ್ಜನಲ್ಲಿ ವ್ಯಕ್ತಿ ಆತ್ಮಹತ್ಯೆ
ಶಹಾಪುರಃ ನಗರದ ಹಳೇ ಬಸ್ ನಿಲ್ದಾಣ ಹತ್ತಿರದ ವಸತಿ ಗೃಹ ವೊಂದರ ಬಾಡಿಗೆಗೆ ಪಡೆದ ಕೋಣೆಯಲ್ಲಿ ವ್ಯಕ್ತಿಯೋರ್ವ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಸುರಪುರ ತಾಲೂಕಿನ ರುಕ್ಮಾಪುರ ಗ್ರಾಮದ ರಾಚಪ್ಪ ತಂದೆ ಕೊಟ್ರೆಪ್ಪ (52)
ಎಂಬಾತನೇ ಆತ್ಮಹತ್ಯೆ ಗೆ ಶರಣಾದ ವ್ಯಕ್ತಿ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.