ಪ್ರಮುಖ ಸುದ್ದಿ

ಶಹಾಪುರಃ ಸೆ.9 ರಂದು ರಾಷ್ಟ್ರೀಯ ಲೋಕ ಅದಾಲತ್

ಅದಾಲತ್ ಮೂಲಕ ರಾಜಿಯಾಗಿ ರಾಜಮಾರ್ಗ ಕಂಡುಕೊಳ್ಳಿ

ಸೆ.9 ರಂದು ರಾಷ್ಟ್ರೀಯ ಲೋಕ ಅದಾಲತ್

ಅದಾಲತ್ ಮೂಲಕ ರಾಜಿಯಾಗಿ ರಾಜಮಾರ್ಗ ಕಂಡುಕೊಳ್ಳಿ

yadgiri, ಶಹಾಪುರಃ ಇಲ್ಲಿನ ನ್ಯಾಯಾಲಯದಲ್ಲಿ ಸೆ.9 ರಂದು ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದೆ. ಈ ಅದಾಲತ್‍ನಲ್ಲಿ ಬಾಕಿ ಇರುವ ಕಾನೂನಿನ್ವಯ ರಾಜಿ ಆಗಬಹುದಾದಂತ ಅಪರಾಧಿಕ ಪ್ರಕರಣಗಳು, ಚೆಕ್ ಬೋನ್ಸ್, ಮೋಟಾರ್ ವಾಹನ ಅಪಘಾತ ಪ್ರಕರಣಗೂ ಸೇರಿದಂತೆ ಬ್ಯಾಂಕ್ ಸಾಲ ವಸೂಲಾತಿ, ಕಾರ್ಮಿಕ ವಿವಾದಗಳು, ಭೂಸ್ವಾಧಿನ ಪರಿಹಾರ ಪ್ರಕರಣಗಳು, ಕೈಗಾರಿಕಾ ಕಾರ್ಮಿಕ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು ಮತ್ತು ವೈವಾಹಿಕ ಅಥವಾ ಕೌಟುಂಬಿಕ ವಿವಾದದ ಪ್ರಕರಣಗಳು( ವಿಚ್ಛೇದನೆಯನ್ನು ಹೊರತುಪಡಿಸಿ) ಮತ್ತು ರಾಜಿಯಾಗಬಲ್ಲ ಸಿವಿಲ್ ಮತ್ತು ಇತರೆ ಪ್ರಕರಣಗಳು, ಆಸ್ತಿ ವಿಭಾಗ ಪ್ರಕರಣಗಳು ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಸಿದ್ರಾಮ ಟಿ. ತಿಳಿಸಿದರು.

ನಗರದ ನ್ಯಾಯಾಲಯದಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕ ಅದಾಲತ್ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು. ವಕೀಲರು ಮತ್ತು ಕಕ್ಷಿದಾರರು ಸದಾವಕಾಶವನ್ನು ಬಳಕೆ ಮಾಡಿಕೊಳ್ಳಬೇಕು. ವಿದ್ಯುತ್, ನೀರು ಮತ್ತು ಬ್ಯಾಂಕ್‍ಗೆ ಸಂಬಂಧಿಸಿದ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಸಹ ರಾಜಿ ಮಾಡಿಕೊಳ್ಳಲು ಅವಕಾಶವಿದೆ.

ಕಳೆದ ಬಾರಿ ಲೋಕ ಅದಾಲತ್ ನಲ್ಲಿ 3218 ಪೆಂಡಿಂಗ್ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿತ್ತು. ಈ ಬಾರಿಯು ಸುಮಾರು 3000 ಕ್ಕೂ ಅಧಿಕ ಪ್ರಕರಣಗಳು ಇತ್ಯರ್ಥ ಪಡಿಸಬೇಕೆಂಬ ಉದ್ದೇಶ ಹೊಂದಿದ್ದು, ಆ ಕುರಿತು ಎಲ್ಲಡೆ ಮಾಹಿತಿ ನೀಡಲಾಗಿದೆ. ಪ್ರಕರಣಗಳ ಕಕ್ಷಿದಾರರು ಪರಸ್ಪರರ ಒಪ್ಪಿಗೆ ಮೇರೆಗೆ ರಾಜಿ ಸಂಧಾನ ಮಾಡಲಾಗುತ್ತದೆ. ರಾಜಿ ಸಂಧಾನದಿಂದ ರಾಜಮಾರ್ಗ ಕಂಡುಕೊಳ್ಳಬಹುದು. ಉದಾಹರಣೆಗೆ ಸಹೋದರರ ನಡುವೆ ಆಸ್ತಿ ಪಾಲುದಾರಿಕೆಯಡಿ ಪ್ರಕರಣವನ್ನು ಸಹೋರದರರು ರಾಜಿ ಸಂಧಾನ ಮಾಡಿಕೊಂಡಲ್ಲಿ ಪರಸ್ಪರರಲ್ಲಿ ಪ್ರೀತಿ ವಿಶ್ವಾಸ ಹಾಗೇ ಉಳಿಯಲಿದೆ.

ಇಲ್ಲವಾದಲ್ಲಿ ಹತ್ತಾರು ವರ್ಷ ನ್ಯಾಯಾಲಯದಕ್ಕ ಎಅಲೆದಾಡಿ ಕೊನೆಗೆ ಪ್ರಕರಣದಲ್ಲಿ ಯಾರಾದರೂ ಒಬ್ಬರ ಕಡೆ ದಾಖಲೆಗಳ ಸಮಕ್ಷಮ ಆದೇಶ ಹೊರ ಬಂದಾಗ ಅದು ಕೊನೆವರೆಗೆ ಕೆಟ್ಟಸ್ಥಿಕೆಗೆ ಗುರಿ ಯಾಗುತ್ತೀರಿ ಸಹೋದರತ್ವ ಉಳಿಯುವದಿಲ್ಲ. ಅದಾಲತ್‍ನಲ್ಲಿ ಪರಸ್ಪರರು ಒಪ್ಪಿ ರಾಜಿ ಆದಾಗ ಅದೇ ಸಹೋದರತೆ ಭಾವನೆ ಪ್ರೀತಿ ಮುಂದುವರೆಯಲಿದೆ ಎಂದು ತಿಳಿಸಿದರು. ಹೀಗಾಗಿ ಎಷ್ಟು ಸಾಧ್ಯವೋ ಅಷ್ಟು ಪ್ರಕರಣಗಳಲ್ಲಿ ರಾಜಿಯಾಗಿ ಆರಾಮದಾಯಕ ಜೀವನ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಕಿರಿಯ ಶ್ರೇಣಿ ನ್ಯಾಯಧೀಶ ಬಸವರಾಜ ಮತ್ತು ವಕೀಲರ ಸಂಘದ ಉಪಾಧ್ಯಕ್ಷ ಶರಣಪ್ಪ ಪ್ಯಾಟಿ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button