ಪ್ರಮುಖ ಸುದ್ದಿ

ಯಾದಗಿರಿ: ಮಾಜಿ ಪ್ರಧಾನಿಗಳ 88ನೇ ಹುಟ್ಟು ಹಬ್ಬಕ್ಕೆ 88 ಜನರಿಂದ ರಕ್ತದಾನ

ಯಾದಗಿರಿ: ಆಧುನಿಕ ಜಗತ್ತಿನಲ್ಲಿ ಮನುಷ್ಯ ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದಿದ್ದರೂ ಅಮೂಲ್ಯವಾದ ರಕ್ತವನ್ನು ಕೃತಕವಾಗಿ ಸೃಷ್ಠಿಸಲು ಸಾಧ್ಯವಾಗಿಲ್ಲ ಎಂದು ರಾಜ್ಯ ಜೆಡಿಎಸ್ ಯುವ ನಾಯಕ ಶರಣಗೌಡ ಕಂದಕೂರ ತಿಳಿಸಿದರು.
ಸೋಮವಾರ ನಗರದ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಅವರ ಜನಸಂಪರ್ಕ ಕಚೇರಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ 88ನೇ ಜನ್ಮದಿನಾಚರಣೆ ನಿಮಿತ್ತ ಕಂದಕೂರ ಅಭಿಮಾನಿ ಬಳಗದಿಂದ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್-19 ವೇಳೆ ದೇಶದಲ್ಲಿ ಸಾಕಷ್ಟು ಜನರಿಗೆ ರಕ್ತ ಅವಶ್ಯಕತೆ ಇದ್ದು, ಮಣ್ಣಿನ ಮಗನಾದ ದೇವೇಗೌಡರ ಜನ್ಮದಿನಾಚರಣೆ ನಿಮಿತ್ಯ ಈ ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.

ಸಧ್ಯ ದೇಶ ಸಂಕಷ್ಟದ ಸ್ಥಿತಿಯಲ್ಲಿದ್ದು, ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಹೆಮ್ಮರಿ ಕರೊನಾವನ್ನು ಹೊಡೆದೋಡಿಸಬೇಕಿದೆ. ನಮ್ಮ ಮಾರ್ಗದರ್ಶಕರು, ಜೆಡಿಎಸ್‍ನ ವರೀಷ್ಠರಾದ ದೇವೇಗೌಡರ ಆಶಯವೂ ಇದೇ ಆಗಿದ್ದು, ಎಲ್ಲರೂ ಒಗ್ಗಟ್ಟಾಗಿ ದೇಶಕ್ಕೆ ಅಂಟಿಕೊಂಡಿರುವ ಈ ಪಿಡುಗನ್ನು ದೂರ ಮಾಡಬೇಕಿದ್ದು, ಅನಗತ್ಯವಾಗಿ ಯಾರೂ ಮನೆಯಿಂದ ಹೊರಗಡೆ ಬರಕೂಡದು ಎಂದು ಸಲಹೆ ನೀಡಿದರು.
ಶಿಬಿರದಲ್ಲಿ ಒಟ್ಟು 88 ಜನರು ರಕ್ತದಾನ ಮಾಡಿದರು. ಎಲ್ಲಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತು. ಅಲ್ಲದೆ ಪ್ರತಿಯೊಬ್ಬರಿಗೆ ಮಾಸ್ಕ್ ಹ್ಯಾಂಡ್ ಗ್ಲೋಸ್ ಮತ್ತು ಸ್ಯಾನಿಟೈಜರ್ ವಿತರಣೆ ಮಾಡಿದ್ದು, ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಮಲ್ಲಣ್ಣಗೌಡ ಕೌಳೂರು, ಪಾಪಣ್ಣ ಮನ್ನೆ, ಬಾಲರಾಜ ದಾಸರ್, ಶರಣಪ್ಪ ಲಿಕ್ಕಿ, ನರಸಪ್ಪ ಕವಡೆ ಬದ್ದೇಪಲ್ಲಿ, ತಾಯಪ್ಪ ಬದ್ದೇಪಲ್ಲಿ, ಮಲ್ಲಿಕಾರ್ಜುನ ಅರುಣಿ, ಶಿವುಗೌಡ ಕೌಳೂರು, ಮಲ್ಲು ಮಾಳಿಕೇರಿ, ಅಯ್ಯಪ್ಪ ಹೆಡಗಿಮದ್ರಿ, ಮಾರ್ಥಂಡ ಮಾನೇಗಾರ, ದೊಡ್ಡಣ್ಣಗೌಡ ಅರಿಕೇರಾ (ಬಿ), ವಿಜಯಕುಮಾರ ಡಿಬ್ಬಾ ಯರಗೋಳ, ಸಿದ್ರಾಮರೆಡ್ಡಿ ವಡ್ನಳ್ಳಿ, ಶಿವುಗೌಡ ಸೈದಾಪೂರ, ಎಸ್.ಬಿ.ಟೀಮ್ ಹಾಗೂ ಇನ್ನಿತರರು ಇದ್ದರು ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿವರ್ಗದವರಾದ ಶ್ರೀಮತಿ ಅನಿತಾ, ಶ್ರೀ ಚೇತನಕುಮಾರ, ಶ್ರೀ ಶ್ರೀನಿವಾಸ, ಶ್ರೀಮತಿ ಲಕ್ಷ್ಮಿಮ ಶ್ರೀಮತಿ ನಿಂಗಮ್ಮ ಶ್ರೀ ಮರೇಪ್ಪ ಇವರುಗಳು ಕೂಡಾ ಬಾಗಿಯಾಗಿದ್ದರು.

ಮೊಬೈಲ್ ಮೂಲಕ ಕ್ಷೇತ್ರದ ಜನರ ಯೋಗಕ್ಷೇಮ ವಿಚಾರಸಿದ ಕುಮಾರಣ್ಣ:

ರಕ್ತದಾನ ಶಿಬಿರದ ವೇಳೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪಕ್ಷದ ಮುಖಂಡ ಶರಣಗೌಡ ಕಂದಕೂರ್ ಅವರಿಗೆ ಕರೆ ಮಾಡಿ ಗುರುಮಿಠಕಲ್ ಮತಕ್ಷೇತ್ರದಲ್ಲಿ ಕರೋನಾ ಪಾಜಿಟೀವ್ ಬೆಳಿಕಿಗೆ ಬಂದ ಬಗ್ಗೆ ಮಾಹಿತಿ ಪಡೆದುಕೊಂಡರು, ಜಿಲ್ಲೆಯಲ್ಲಿ ಕರೋನಾ ಹೆಚ್ಚಿನ ಪ್ರಮಾಣದಲ್ಲಿ ಹರಡದಂತೆ ಜನತೆ ಮುನ್ನಚ್ಚರಿಕೆ ವಹಿಸುವಂತೆ ಅವರು ಸಲಹೆ ನೀಡಿದರು.

Related Articles

Leave a Reply

Your email address will not be published. Required fields are marked *

Back to top button