ಲುಂಬಿನಿ ಗಾರ್ಡನ್ ಸುತ್ತಲೂ ದಿನನಿತ್ಯ ಸ್ವಚ್ಛಗೊಳಿಸಿ – DC ಡಾ. ರಾಗಪ್ರಿಯಾ
ಯಾದಗಿರಿ:– ಲುಂಬಿನಿ ಗಾರ್ಡನ್ ಸುತ್ತ-ಮುತ್ತಲೂ ದಿನನಿತ್ಯ ಸ್ವಚ್ಛಗೋಳಿಸಿ, ಉದ್ಯಾನವನಕ್ಕೆ ಬರುವ ಸಾರ್ವಜನಿಕರಿಗೆ ಸುಂದರವಾಗಿ ಕಾಣುವಂತೆ ಮಾಡಿ ಎಂದು ಜಿಲ್ಲಾಧಿಕಾರಿಗಳಾದ ಡಾ. ರಾಗಪ್ರಿಯಾ ಆರ್ ಅವರು ಅಧಿಕಾರಿಗಳಿಗೆ ಹೇಳಿದರು.
ಅಕ್ಟೋಬರ್ 5ರ ಸೋಮವಾರ ನಗರದಲ್ಲಿರುವ ಲುಂಬಿನಿ ಉದ್ಯಾನವನ ವೀಕ್ಷಣೆ ಮಾಡಿ ಅವರು ಹೇಳಿದರು. ಜಿಲ್ಲೆಯಲ್ಲಿ ಹತ್ತಿರವಾದ ಸುಂದರ ತಾಣವಾಗಿದೆ. ಈ ಸಲ ಮಳೆಯಾಗಿದ್ದರಿಂದ ಗಾರ್ಡನ್ ಒಳಗಡೆ ನೀರು ನಿಲುಗಡೆಯಾಗಿದೆ, ಹೀಗಾಗಿ ಇಲ್ಲಿಯ ಕಾಮಾಗಾರಿಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಿಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಈ ಉದ್ಯಾನವನಕ್ಕೆ ದಿನನಿತ್ಯ ಬರುವ ಸಾರ್ವಜನಿಕರಿಗೆ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ತಿಳಸಬೇಕು ಹಾಗೂ ಪಾರ್ಕ ಒಳಗಡೆ ಡ್ರ್ಯಾನೇಜ್ ನೀರು ಬರುವುದನ್ನು ತಡೆಯುವದಕ್ಕೆ ಸೂಕ್ತವಾದ ಪರಿಹಾರ ಹುಡಬೇಕು ಹಾಗೂ ಉದ್ಯಾನವನ ಸುತ್ತಲೂ ಡ್ರ್ಯಾನೇಜ್ಗಳ ಸರ್ವೆ ಮಾಡಿ ವರದಿ ಸಲ್ಲಿಸಿ, ಮತ್ತು ಗಾರ್ಡನ್ ಒಳಗಡೆ ಸಣ್ಣ ಸಣ್ಣ ಕಾಮಾಗಾರಿಗಳನ್ನು ಮೊದಲು ಪೂರ್ಣ ಮಾಡಿ ಎಂದು ಅಧಿಕಾರಿಗಳಿಗೆ ಹೇಳಿದರು.
ಈ ಉದ್ಯಾನವನದಲ್ಲಿ ಮನರಂಜನೆಗೆ ಬೋಟಿಂಗ್ ನಿಂತು ಹೋಗಿದೆ ಅದನ್ನು ಆದಷ್ಟು ಬೇಗ ಸರಿಪಡಿಸಿ ಹಾಗೂ ಪಾರ್ಕ ಒಳಗಡೆ ನಿಲ್ಲುವ ಸ್ಥಳಗಳನ್ನ ಎತ್ತರ ಮಾಡಿ ನೀರು ಗಾರ್ಡನ್ನಲ್ಲಿ ನೀರು ನಿಲ್ಲದಂತೆ ಮಾಡಬೇಕು. ಪಾರ್ಕ್ನ ಸುತ್ತಲೂ ಮನೆಯ ಒಡೆದ ತ್ಯಾಜ್ಯ ಹಾಕುತ್ತಿದ್ದಾರೆ. ಕಲ್ಲು, ಮಣ್ಣು, ಕಸ, ತ್ಯಾಜ್ಯ ಹಾಕುವವರ ವಿರುದ್ಧ ಸರಿಯಾದ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.
ಇದೆ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಭೀಮರಾಯ ಕಲ್ಲೂರ, ನಗರಸಭೆ ಆಯುಕ್ತರಾದ ಬಕ್ಕಪ್ಪ, ಕೆ.ಆರ್.ಐ.ಡಿ.ಎಲ್. ಹೊನ್ನಪ್ಪ, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ಕಿರಣ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಹಾಜರಿದ್ದರು.