Homeಜನಮನಪ್ರಮುಖ ಸುದ್ದಿವಿನಯ ವಿಶೇಷ

ಭಾರತೀಯ ಅಂತರಿಕ್ಷಾ ಕೇಂದ್ರ ಸ್ಥಾಪಿಸಲು ಇಸ್ರೋ ಯೋಜನೆ: ಎಂ. ಶಂಕರಂ

ಬೆಂಗಳೂರು: ರಾಷ್ಟ್ರೀಯ ಅಂತರಿಕ್ಷಾ ದಿನಾಚರಣೆಯನ್ನು ಇದೇ ಆಗಸ್ಟ್ ೨೩ ರಂದು ದೇಶಾದ್ಯಾಂತ ಆಚರಿಸಲಾಗುತಿದ್ದು, ಅಂದಿನ ದಿನವನ್ನು ನಾವು ಬಾಹ್ಯಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸಬೇಕಾದ ಪ್ರಗತಿಯ ಚಿಂತನೆಯಲ್ಲಿ ವಿನಿಯೋಗಸಬೇಕು ಎಂದು ಇಸ್ರೋ ಯು.ಆರ್. ರಾವ್ ಉಪಗ್ರಹ ಕೇಂದ್ರದ ನಿರ್ದೇಶಕ ಎಂ. ಶಂಕರಂ ಹೇಳಿದ್ದಾರೆ.

ಭಾರತೀಯ ವಿಜ್ಞಾನ ಸಂಸ್ಥೆ ಐಐಎಸ್‌ಸಿ ಯಲ್ಲಿ ಇಂದು ಏರ್ಪಡಿಸಿದ್ದ ಬಾಹ್ಯಕಾಶ ದಿನಾಚರಣೆಯ ಸ್ಮರಣಾರ್ಥ ಕಾರ್ಯಗಾರದಲ್ಲಿ ಅವರು ಮಾತನಾಡುತ್ತಿದ್ದರು. ಇಂದು ಇಸ್ರೋ ಸಂಸ್ಥೆ ಭಾರತೀಯನನ್ನ ಬಾಹ್ಯಕಾಶಕ್ಕೆ ರವಾನಿಸುವ ಮತ್ತು ೨೦೩೫ರ ವೇಳೆಗೆ ಭಾರತೀಯ ಅಂತರಿಕ್ಷಾ ಕೇಂದ್ರವನ್ನು ಸ್ಫಾಪಿಸಲು ಮತ್ತು ೨೦೪೦ರ ವೇಳೆಗೆ ಗಗನಯಾತ್ರಿಯನ್ನು ಚಂದ್ರ ಗ್ರಹಕ್ಕೆ ಕಳುಹಿಸಿ ನಂತರ ಭೂಮಿಗೆ ಮರಳುವಂತೆ ಯೋಜನೆ ಹಾಕಿಕೊಂಡಿದೆ ಎಂದರು. ಇಸ್ರೋ ಸಂಸ್ಥೆಯನ್ನು ವಿಕ್ರಂ ಸಾರಭಾಯಿ ೧೯೬೨ ರಲ್ಲಿ ಆರಂಭಿಸಿದಾಗ ಅದರ ಅಗತ್ಯವಿದೆಯೇ ಎಂಬ ಜಿಜ್ಞಾಸೆ ಮೂಡಿತ್ತು, ಆದರೆ ಇಂದು ಬಾಹ್ಯಕಾಶ ತಂತ್ರಜ್ಞಾನ ನಮ್ಮ ದೈನಂದಿನ ಜೀವನದ ಭಾಗವಾಗಿದೆ ಎಂದು ತಿಳಿಸಿದರು.

ನೈಸರ್ಗಿಕ ವಿಕೋಪದ ನಿರ್ವಹಣೆ, ಹವಾಮಾನ ಮುನ್ಸೂಚನೆ, ದೂರಸಂವೇದಿ ಉಪಕ್ರಮಗಳು ಹಾಗೂ ಜಿಪಿಎಸ್ ವ್ಯವಸ್ಥೆಯನ್ನು ಇಸ್ರೋದ ಉಪಗ್ರಹಗಳು ಪೂರೈಸುತ್ತಿದೆ ಎಂದು ಶಂಕರಂ ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button