ದಲಿತ ಯುವಕನ ಹತ್ಯೆಃ ಆರೋಪಿಗಳ ಬಂಧನಕ್ಕೆ ಆಗ್ರಹ
ದಲಿತ ಯುವಕನ ಹತ್ಯೆಃ ಆರೋಪಿಗಳ ಬಂಧನಕ್ಕೆ ಆಗ್ರಹ
yadgiri, ಶಹಾಪುರಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ಬೂದಿಹಾಳ(ಪಿಎಚ್) ಗ್ರಾಮದಲ್ಲಿ ದಲಿತ ಯುವಕನೋರ್ವನನ್ನು ಸವರ್ಣಿಯರು ಕೊಲೆಗೈದಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಇಲ್ಲಿನ ಮಾದಿಗ ಯುವ ಸೇನೆ ತಹಶೀಲ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿತು.
ಕ್ಷುಲ್ಲಕ ಕಾರಣಕ್ಕೆ ದಲಿತ ಯುವಕನ ಮೇಲೆ ಸವರ್ಣಿಯರು ಅಮಾನುಷವಾಗಿ ಕೊಲೆಗೈದ ಘಟನೆ ನಾಗರಿಕರು ತಲೆ ತಗ್ಗಿಸುವಂತದ್ದು, ಸ್ವಾತಂತ್ರ್ಯ ದೊರೆತು 75 ವರ್ಷ ಕಳೆದರೂ ಇಂದಿಗೂ ಜಾತಿಯತೆ ತಾಂಡವಾಡುತ್ತಿದೆ ಎಂದರೆ ಇದು ದುರಂತವೇ ಸರಿ. ಕಾರಣ ಸರ್ಕಾರ ಕೂಡಲೇ ಈ ಕುರಿತು ಆರೋಪಿಗಳನ್ನು ಬಂಧಿಸಿ ಘೋರ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.
ದೇಶ ಎಷ್ಟೆ ಮುಂದುವರೆದಿದ್ದರೂ ಗ್ರಾಮೀಣ ಭಾಗದಲ್ಲಿ ಇಂದಿಗೂ ಅಸ್ಪøಶ್ಯತೆ ಜೀವತವಿದೆ. ದಲಿತರನ್ನು ಕಡೆಗಣಿಸುವದು ನಡೆದಿದೆ. ಹೀಗಾಗಿ ಸ್ವಾತಂತ್ರ್ಯದ ಸವಿ ದಲಿತರಿಗೆ ಇನ್ನೂ ದೊರೆತಿಲ್ಲ ಎಂದು ಸೇನೆಯ ಯುವ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಕೇವಲ ಮಂದಿರವೊಂದರ ಮೇಲೆ ಸವರ್ಣಿಯರ ಸಮನಾಗಿ ಕುಳಿತ ಎನ್ನುವ ಕಾರಣಕ್ಕೆ ಮಾತ್ರ ದಲಿತ ಯುವಕನನ್ನು ಕೊಲೆಗೈಯುತ್ತಾರೆ ಅಂದರೆ ಇನ್ನೂ ಯಾವ ಕಾಲದಲ್ಲಿ ಇದ್ದೇವೆ ಎಂಬುದು ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸೇನೆಯ ತಾಲೂಕು ಅಧ್ಯಕ್ಷ ಹಣಮಂತ ಬೇಟೆಗಾರ, ಮಲ್ಲಿಕಾರ್ಜುನ ಪಾಟೀಲ್, ಶರಬಣ್ಣ ರಸ್ತಾಪುರ, ಶಿವಶರಣ ಕಟ್ಟಿಮನಿ, ಮಲ್ಲಿಕಾರ್ಜುನ ಬನ್ನಿಕಟ್ಟಿ ಸೇರಿದಂತೆ ಮುಖಂಡರಾದ ಅವಿನಾಶ ಗುತ್ತೇದಾರ ಇದ್ದರು.