‘ಮಾನಸಿ ಮತ್ತು ಆಶಿಶ್’ ಮಂಜುನಾಥ ಸಾಲಿಮಠರ ಕಥಾಂಕುರ ಭಾಗ-5
ಪ್ಲೀಜ್..ಕಣೆ ಅಕ್ಕ ಚಿಂತೆ ಮಾಡಬೇಡ-ಆಶಿಶ್
ಬಾಗಿಲು ತೆಗೆದು ಮಗಳ ಬ್ಯಾಗ ಹಿಡಿದು ಮುಖ ತೊಳೆಯುವಂತೆ ಗೌತಮಿಗೆ ಹೇಳಿದಳು, ಮುಖ ತೊಳೆದು ಬಂದ ಗೌತಮಿ ಡೈನಿಂಗ್ ಟೇಬಲ್ ಮೇಲೆ ಕುಳಿತು ಅಮ್ಮ ಏನು ಮಾಡಿದ್ದೀಯಾ ಬೇಗ ತಗೋಂಡು ಬಾ ಎಂದಳು. ಪುಟ್ಟಾ ಟೇಬಲ್ ಮೇಲೆ ಕುಳಿತುಕೊಳ್ಳಬಾರದೂ ಚೇರ್ ಮೇಲೆ ಕೂತುಕೋ ಎಂದು ಮಗಳನ್ನು ಗದರಿಸುತ್ತಾ ಪ್ಲೇಟ್‍ನಲ್ಲಿ ತಿಂಡಿ ತಂದಿಟ್ಟಳು. ಆದರೂ ಮಗಳು ಚೇರ್ ಮೇಲೆ ಕುಡದೇ ಟೇಬಲ್ ಮೇಲೆ ಕುಳಿತು ಅಮ್ಮ ಇಲ್ಲೇ ತಿನ್ನುತ್ತಿನಮ್ಮಾ ಅಲ್ಲಿ ನನಗೆ ಸರಿಯಾಗಿ ಪ್ಲೇಟ್ ಸಿಗಲ್ಲಾ ಎಂದು ಅವಳನು ನೋಡುತ್ತಾ ನಕ್ಕು ಅವಳ ಮುಂದೆ ಕುಳಿತಳು ಮಾನಸಿ.
ಹೊರಗೆ ಬೈಕ್ ಬಂದ ಶಬ್ಧವಾಯಿತು. ಕಿಟಕಿಯಲ್ಲಿ ನೋಡಿದಾಗ ಆಶು ಬೈಕ್ ನಿಲ್ಲಿಸುತ್ತಿದ್ದ ಏನಿವತ್ತು ಆಶು ಇಷ್ಟು ಬೇಗ ಬಂದಿದ್ದಾನೆ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾ ಬಾಗಿಲು ತೆಗೆದಳು. ಒಳಗೆ ಬಂದ ಆಶಿಶ್‍ಗೆ ಮುಖ ತೊಳೆಯುವಂತೆ ಹೇಳಿ ಅವನಿಗಾಗಿ ತಿಂಡಿ ತರಲು ಒಳಗೆ ಹೋದಳು ಅವಳು ತಿರುಗಿ ಡೈನಿಂಗ್ ಹಾಲ್ ಗೆ ಬಂದಾಗ ಆಶು ಇನ್ನು ಬಂದಿರಲಿಲ್ಲಾ. ಆಶು ಎಂದು ಕರೆದಳು ಮುಖ ಒರೆಸಿಕೊಳ್ಳುತ್ತಾ ಅಕ್ಕ ಬಂದೆ ಎಂದು ದಡದಡನೆ ಇಳಿದು ಬಂದವನ ಮುಂದೆ ತಿಂಡಿಪ್ಲೇಟ್ ಇಟ್ಟ ಮಾನಸಿ ಅವನ ಮುಂದೆ ಕುಳಿತಳು. ಬಂದು ಕುಳಿತವನನ್ನು ಗೌತಮಿ ತನ್ನ ಮುದ್ದುಮಾತಿನಿಂದ ಮಾಮ ಇವತ್ತು ಇಷ್ಟು ಬೇಗ ಬಂದಿದ್ದಿಯಾ. ನನ್ನ ಪಾರ್ಕಿಗೆ ಕರೆದುಕೊಂಡು ಹೋಗು ಎಂದು ಕೇಳಿದಳು.
ಆಯ್ತು ಪುಟ್ಟಿ ಕರೆದ್ಕೊಂಡು ಹೋಗ್ತಿನಿ ಮೊದಲು ಬೇಗ ತಿಂಡಿ ತಿಂದು ರೆಡಿಯಾಗು ಎಂದು ಹೇಳುತ್ತಾ ತಿನ್ನಲು ಪ್ರಾರಂಭಿಸಿದನು. ಅಕ್ಕ ನೀನು ತಿನ್ನು ಎಂದಾಗ ಮಾನಸಿ ಇಲ್ಲಾ ಕಣೋ ಈಗತಾನೇ ಊಟ ಆಗಿದೆ ಎಂದಳು. ಅಕ್ಕ ನೀನು ಸರಿಯಾಗಿ ಊಟ ಮಾಡುವುದಿಲ್ಲಾ ನಂಗೆ ಗೊತ್ತು ಬಾ ಅಕ್ಕ ತಿನ್ನು ಎಂದು ಕರೆದಾಗ ನಾನು ಊಟ ಮಾಡದೆ ಹಾಗೆ ಇದ್ದರೆ ನಿನ್ನ ಭಾವ ಊಟ ಮಾಡ್ತಾರೇನು ನಿಂಗೆ ಗೊತ್ತಲ್ಲಾ ಅವರು ಒತ್ತಾಯ ಮಾಡಿಯಾದರೂ ತಿನ್ನಿಸುತ್ತಾರೆ. ಇರಲಿ, ನೀನು ಸರಿ ಯಾಗಿರೋದು ಕಲಿ, ನಿಮ್ಮ ಭಾವನ ಪ್ರೀತಿ ಕಳೆದುಕೊಳ್ಳುವಂತಾ ಕೆಲಸ ಯಾವತ್ತು ಮಾಡಬೇಡ ಎಂದಳು.
ತಿಂಡಿ ತಿಂದು ಮುಗಿಸಿದ ಮಗಳನ್ನು ಕರೆದುಕೊಂಡು ರೂಮಿಗೆ ಹೋದಳು. ಗೌತಮಿ ಜಗಳ ಶುರುವಿಟ್ಟುಕೊಂಡಳು. ಹೊಸ ಡ್ರೆಸ್ ಹಾಕಿಕೊಳ್ಳುವೆ ಎಂದು, ಅಲ್ಲಿಗೆ ಬಂದ ಆಶು ಅಕ್ಕ ಅವಳನ್ನು ಯಾಕೆ ಅಳಿಸ್ತಾಯಿದೀಯಾ ಹೊಸ ಬಟ್ಟೆ ಹಾಕು ಅವಳ ಹುಟ್ಟಿದ ಹಬ್ಬಕ್ಕೆ ಬೇರೆಯದು ಬಟ್ಟೆ ತಂದರಾಯಿತು. ಭಾವ ಕೊಡಿಸಲ್ಲಾ ಕೊಡಿಸೆ ಕೊಡಿಸ್ತಾರೆ ಇಲ್ಲಾ ಅಂದ್ರೆ ನಾನು ಹೊಸಬಟ್ಟೆ ಅವಳಿಗೆ ತಂದುಕೊಡುತ್ತೇನೆ ಎಂದು ಗೌತಮಿಯನ್ನು ಸಮಾಧಾನ ಮಾಡುತ್ತಾ, ಅವಳಿಗೆ ಅವನೇ ಬಟ್ಟೆ ತೊಡಿಸಿ ಅಕ್ಕ ನೀನು ರಡಿಯಾಗು ಮೂವರು ಹೋಗೋಣ ಎಂದಾಗ ಮಾನಸಿ ಮುಖತೊಳೆದು ಬರಲು ಹೋದಳು. ರಡಿಯಾಗಿರುವ ಗೌತಮಿ ಅಮ್ಮನು ಬರ್ತಾಳೆ ಎಂದು ಕುಣಿಯತೊಡಗಿದಳು.
ಎಲ್ಲರೂ ಪಾರ್ಕಿಗೆ ಬಂದರು. ಆದರೆ ಮಾನಸಿಯ ಮನಸ್ಸು ಮಾತ್ರ ರಾತ್ರಿಯ ಘಟನೆಯನ್ನು ಮೇಲಕು ಹಾಕುತ್ತಿತ್ತು. ಹೇಗಾದರೂ ಮಾಡಿ ಆಶಿಶನನ್ನು ತಪ್ಪು ಮಾಡದಂತೆ ತಡೆಯಲು ಯೋಚಿಸುತ್ತಿತ್ತು. ಪಾರ್ಕಿನಲ್ಲಿ ಮಕ್ಕಳಾಡುವ ಜಾಗಕ್ಕ ಆಶಿಶ ಗೌತಮಿಯನ್ನು ಕೆರೆದುಕೊಂಡು ಉಯ್ಯಾಲೆಯಲ್ಲಿ ಕುಳ್ಳಿರಿಸಿ ತೂಗಲು ಪ್ರಾರಂಬಿಸಿದ ಚಿಕ್ಕವನಿರುವಾಗ ಅಕ್ಕ ನನ್ನ ಇದೇ ರೀತಿ ತೂಗುತ್ತಿದ್ದಳು. ನನ್ನ ಅಕ್ಕ ಎಷ್ಟು ಒಳ್ಳೆಯವಳು ಅವಳು ನನಗಾಗಿ ಏನೆಲ್ಲಾ ತ್ಯಾಗ ಮಾಡಿದ್ದಾಳೆ.
ಅವಳಿಗಾಗಿ ನಾನು ಈಗ ನನಗೆ ಅಂಟಿಸಿಕೊಂಡ ಚಟಗಳನ್ನು ಬಿಡಲಾಗುವುದಿಲ್ಲವೇ ಖಂಡಿತ ಬೀಡುತ್ತೇನೆ. ಅವಳು ತನಗಾಗಿ ಏನು ಕೇಳಿಲ್ಲಾ ಈ ಎಲ್ಲಾ ಚಟಗಳಿಂದ ನನ್ನ ಆರೋಗ್ಯಕ್ಕೆ ಹಾನಿ ಎಂದೇ ಬಿಡು ಅನ್ನುತ್ತಿದ್ದಾಳೆ ಎಂದು ಕೊಂಡು ದೂರದಲ್ಲಿ ಕುಳಿತ ತನ್ನ ಅಕ್ಕನ ಮುಖ ನೋಡಿದ. ಮಾನಸಿಯ ಮುಖ ಗ್ರಹಣ ಹಿಡಿದ ಚಂದಿರನಂತಾಗಿತ್ತು, ಗೌತಮಿಯನ್ನು ಅವಳ ಸ್ನೇಹಿತರೊಂದಿಗೆ ಆಡಿಕೊಳ್ಳಲು ಹೇಳಿ ಮಾನಸಿಯ ಬಳಿ ಬಂದ ಆಶಿಶ ಪಕ್ಕದಲ್ಲಿ ಕುಳಿತು ಅಕ್ಕ ಯಾಕೆ ಇಷ್ಟೊಂದು ಯೋಚನೆ ಮಾಡುತ್ತಿರುವೆ ನಾನು ಖಂಡಿತ ನೀನು ಹೇಳಿದ ಹಾಗೇ ಕೇಳುತ್ತೆನೆ ಅಕ್ಕ ನೀನು ಚಿಂತೆ ಮಾಡಬೇಡ ಪ್ಲೀಸ್..
ಲೇಖಕರುಃಮಂಜುನಾಥ ಸಾಲಿಮಠ.
ಪತ್ರಕರ್ತರು ಮಸ್ಕಿ.
ಓದುಗರ ಗಮನಕ್ಕೆಃ ‘ಮಾನಸಿ ಮತ್ತು ಆಶಿಶ್’ ಕಥಾಂಕುರ ನಾಳೆ ಮುಗಿಯಲಿದೆ. ಇಂದು 5 ನೇ ಭಾಗ. ನಾಳೆ 6 ನೇ ಭಾಗ ಕಥೆ ಮುಕ್ತಾಯವಾಗಲಿದೆ. ನಾಳೆ ಭಾಗ 1 ರಿಂದ 6 ನೇ ಭಾಗದವರೆಗೂ ಸೀರಿಯಲ್ಲಾಗಿ ವಿನಯವಾಣಿ ಕಥಾ ವಿಭಾಗದಲ್ಲಿ ಓದಬಹುದು.