ಮಾನ್ಪಡೆ ಇಲ್ಲದ ಚಳುವಳಿಗೆ ಬಲವಿಲ್ಲಃ ಚನ್ನಪ್ಪ ಆನೇಗುಂದಿ ಕಳವಳ
ಮಾನ್ಪಡೆ ಇಲ್ಲದ ಚಳುವಳಿಗೆ ಬಲವಿಲ್ಲಃ ಚನ್ನಪ್ಪ ಕಳವಳ
yadgiri, ಶಹಾಪುರಃ ಬಿಡುವಿಲ್ಲದ ಹೋರಾಟ ನಡೆಸುತ್ತಲೇ ನಮ್ಮನ್ನಗಲಿದ ಮಾರುತಿ ಮಾನ್ಪಡೆ ಅವರ ಸಿದ್ಧಾತ, ತತ್ವಾದರ್ಶ ನಮಗೆಲ್ಲ ಮಾದರಿ. ಇಂದು ಮಾನ್ಪಡೆ ಅವರಿಲ್ಲದ ಚಳುವಳಿಗೆ ಬಲವಿಲ್ಲದಂತಾಗಿದೆ ಎಂದು ರೈತ ಮುಖಂಡ ಚನ್ನಪ್ಪ ಆನೇಗುಂದಿ ಕಳವಳ ವ್ಯಕ್ತಪಡಿಸಿದರು.
ನಗರದ ಎಪಿಎಂಸಿ ಸಭಾಂಗಣದಲ್ಲಿ ಮಂಗಳವಾರ ಸಾಮೂಹಿಕ ಸಂಘಟನೆಗಳ ವತಿಯಿಂದ ನಡೆದ ಅಗಲಿದ ಹೋರಾಟಗಾರ ಮಾರುತಿ ಮಾನ್ಪಡೆಯವರ ಭಾವಪೂರ್ಣ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಅಸ್ಪøಶ್ಯತೆ, ದಲಿತರ ಹಕ್ಕಿಗಾಗಿ, ಅಸಮಾನತೆ, ಶೋಷಣೆಯ ವಿರುದ್ಧ ಅಲ್ಲದೆ ಕೂಲಿಕಾರ್ಮಿಕರು, ರೈತರ ಪರವಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಅವರ ಕಾರ್ಯಕ್ಷಮತೆ ಮೆಚ್ಚುವಂತಹದ್ದು, ತಮ್ಮ ಇಡಿ ಜೀವನವನ್ನು ಸಾಮಾಜಿಕ ಕಾರ್ಯ, ಅನ್ಯಾಯದ ವಿರುದ್ಧ ಹೋರಾಟಕ್ಕಾಗಿ ಮುಡಿಪಿಟ್ಟ ಧಿಮಂತ ನಾಯಕ ಮಾರುತಿ ಮಾನ್ಪಡೆ ಅವರು, ಇಂದು ನಮ್ಮ ಮಧ್ಯ ಅವರಿಲ್ಲ.
ಆದರೆ ಅವರ ನಡೆಸಿದ ಕಳಕಳಿಯ ಹೋರಾಟಗಳು, ಹೋರಾಟ ನಡೆಸುವಾಗಿನ ಅವರ ಧೈರ್ಯ, ಹಠ, ಸಾಧಿಸುವ ಛಲ, ಎಲ್ಲವೂ ನಮ್ಮನ್ನು ಕಾಡುತ್ತಿವೆ. ಕಲ್ಯಾಣ ಕರ್ನಾಟಕ ಭಾಗದ ಹೋರಾಟದ ಧ್ವನಿಯಾಗಿದ್ದರು. ಸಂಘಟನಾ ಚತುರರಾಗಿದ್ದ ಅವರು, ಹೋರಾಟದ ರೂಪರೇಷೆಗಳ ಬಗ್ಗೆ ತಿಳಿಸುವ ಶಿಕ್ಷಕರೂ ಆಗಿದ್ದರು. ತಮ್ಮ ಜೀವನದ ಬಗ್ಗೆ ಎಂದೂ ಯೋಚಿಸದ ಅವರು, ಸದಾ ಶೋಷಿತರ ಪರ ನೊಂದವರ ಬಗ್ಗೆ ಚಿಂತಿಸುತ್ತಲೇ ಬದುಕು ಸವೆಸಿದವರು ಎಂದು ಭಾವುಕರಾದರು.
ಹೀರಿಯ ವಕೀಲರಾದ ಆರ್.ಎಂ.ಹೊನ್ನಾರಡ್ಡಿ ಮತ್ತು ಇಬ್ರಾಹಿಂಸಾಬ ಮಾತನಾಡಿ, ಮಾನ್ಪಡೆ ಅವರು ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ, ಮಾನವೀಯ ಕಳಕಳಿಯುಳ್ಳವರಾಗಿದ್ದರು. ಹೋರಾಟದ ಮಝೂಲಕ ಜನಮನದಲ್ಲಿ ಬೆರೆತು ಹೋಗಿದ್ದರು. ರಆಜ್ಯದ ಯಾವುದೇ ಮೂಲೆಯಲ್ಲಿ ಅನ್ಯಾಯವಾದರೂ ಅಲ್ಲಿಗೆ ತೆರಳಿ ಅದನು ವಿರೋಧಿಸಿ ನ್ಯಾಯಕ್ಕಾಗಿ ಮುಂಚೂಣಿಯ ಹೋರಾಟ ಕೈಗೊಳ್ಳುತ್ತಿದ್ದರು.
ಅಂತಹ ಹೋರಾಟಗಾರರು ನಮ್ಮಿಂದ ದೂರವಾಗಿರಬಹುದು ಆದರೆ ಅವರ ಚಿಂತನೆ, ವಿಚಾರಧಾರೆ ನಡೆ ನುಡಿ ನಮ್ಮೊಳಗಿವೆ ಎಂದರು. ಈ ಸಂದರ್ಭದಲ್ಲಿ ಸಾಹಿತಿ ಶಿವಣ್ಣ ಇಜೇರಿ, ಜೈಲಾಲ್ ತೋಟದಮನಿ, ಮಲ್ಲಯ್ಯ ಪೋಲಂಪಲ್ಲಿ, ಎಸ್.ಎಂ.ಸಾಗರ, ದಾವಲಸಾಬ್, ರಂಗಣ್ಣ ಹಯ್ಯಾಳ, ಎಲ್‍ಐಸಿ ನೌಕರ ಸಂಘದ ಕಾರ್ಯದರ್ಶಿ ಸಂತೋಷ ಕುಮಾರ್, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಬಸಲಿಂಗಮ್ಮ ನಾಟೇಕಾರ, ಅಕ್ಷರ ದಾಸೋಹ ಕರ ಸಂಘದ ಗೌರವ ಅಧ್ಯಕ್ಷ ಸುನಂದ ಹಿರೇಮಠ ಸೇರಿದಂತೆ ಇತರರಿದ್ದರು.