ಪ್ರಮುಖ ಸುದ್ದಿ

ಮಾಸ್ಕ್‌ ಧರಿಸದವರಿಗೆ 5 ಸಾವಿರ‌ ದಂಡ, 3 ವರ್ಷ ಜೈಲು.!

ಅಹ್ಮದಾಬಾದ್ಃ ಕೊರೊನಾ ಎಂಬ ಮಾಹಮಾರಿ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡದಂತೆ ಮುನ್ನೆಚ್ಚರಿಕೆ ಯಾಗಿ ಮಾಸ್ಕ್ ಧರಿಸುವ ಮೂಲಕ ಕೊರೊನಾ‌ ಹರಡದಂತೆ ಜಾಗೃತಿವಹಿಸಬೇಕಿದೆ.

ಈ ಹಿನ್ನೆಲೆಯಲ್ಲಿ ಗುಜರಾತ್ ನ ಅಹ್ಮದಾಬಾದ್ ನ ಸ್ಥಳೀಯ ಆಡಳಿತ ಸಂಖ್ಯೆ ಮಾಸ್ಕ್ ಧರಿಸುವದನ್ನು ಕಡ್ಡಾಯಗೊಳಿಸಿದೆ.
ಅಲ್ಲದೆ ಮಾಸ್ಕ್ ಧರಿಸದೆ ಯಾರಾದರೂ ಹೊರಬಂದರೆ ಅಂಥವರಿಗೆ 5 ಸಾವಿರ ರೂ. ದಂಡವಿಧಿಸಲಾಗುತ್ತಿದೆ. ಅಥವಾ 3 ವರ್ಷ ಜೈಲುವಾಸ ಶಿಕ್ಷೆಗೆ‌ ಗುರಿಪಡಿಸಲು ನಿರ್ಧರಿಸಿದೆ.

ಅಹ್ಮದಬಾದ್ ಮಹಾನಗರ ಪಾಲಿಕೆಯ ಆಯುಕ್ತ ವಿಜಯ್ ನೆಹ್ರಾ, ಈ ನಿಯಮ ಸೋಮವಾರ ಬೆಳಗ್ಗೆ 6 ರಿಂದಲೇ ಜಾರಿಗೆ ಬರುತ್ತದೆ‌ ಎಂದು ತಿಳಿಸಿದ್ದಾರೆ. ಸಾಂಕ್ರಾಮಿಕ ಖಾಯಿಲೆಗಳ ಕಾಯ್ದೆ‌ ಅನ್ವಯ ಈ ಆದೇಶ‌ ಜಾರಿಗೊಳಿಸಲಾಗಿದೆ.

ಮಾಸ್ಕ್ ದೊರೆಯದಿದ್ದರೂ, ಮುಖಕ್ಕೆ ಕರ್ಚೀಪ್ ಅಥವಾ ಬಟ್ಟೆ ಯಾದರು ಮಾಸ್ಕ್ ತರಹ ಬಳಸಬೇಕು ಎಂದು ಅಧಿಕಾರಿಗಳು ಕಟ್ಟಪ್ಪಣೆ ಹೊರಡಿಸಿದ್ದಾರೆ ಎಙ್ಲಾಗಿದೆ.

Related Articles

Leave a Reply

Your email address will not be published. Required fields are marked *

Back to top button