ಶಹಾಪುರಃ 10 ಸಾವಿರ ಉಚಿತ ಮಾಸ್ಕ್ ವಿತರಣೆ
ನಾಗರಿಕ ಹೋರಾಟ ಸಮಿತಿ ಕೊರೊನಾ ಜಾಗೃತಿ ಕಾರ್ಯಕ್ರಮ
ನಿಯಮ ಪಾಲಿಸಿ ಕೊರೊನಾ ದೂರವಿಡಿ- ಟಿಎಚ್ಓ ಡಾ.ಗುತ್ತೇದಾರ
ಯಾದಗಿರಿ,ಶಹಾಪುರಃ ಕೊರೊನಾ ವೈರಸ್ ತಡೆಗೆ ಹಲವು ಮುಂಜಾಗೃತ ಕೈಗೊಳ್ಳಬೇಕಿದ್ದು, ಸಾರ್ವಜನಿಕರು ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ರಮೇಶ ಗುತ್ತೇದಾರ ತಿಳಿಸಿದರು.
ನಗರದಲ್ಲಿ ನಾಗರಿಕ ಹೋರಾಟ ಸಮಿತಿವತಿಯಿಂದ ಕೊರೊನಾ ಕುರಿತು ಜಾಗೃತಿ ಕಾರ್ಯಕ್ರಮ ಹಾಗೂ ಉಚಿತವಾಗಿ 10 ಸಾವಿರ ಮಾಸ್ಕ್‍ಗಳ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.
ಎಲ್ಲಡೆ ಕೊರೊನಾ ವೈರಸ್ ಭೀತಿ ಎದುರಾಗಿದೆ. ಇದರಿಂದ ಬಚಾವ್ ಆಗಬೇಕಿದ್ದಲ್ಲಿ ನಾಗರಿಕರು ಮುಂಜಾಗೃತವಾಗಿ ಎಚ್ಚರಿಕೆವಹಿಸುವ ಅಗತ್ಯವಿದೆ. ಸರ್ಕಾರ ಆರೋಗ್ಯ ಇಲಾಖೆ ಸೂಚಿದ ನಿಯಮಗಳನ್ನು ನಾಗರಿಕರು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಂದಾಗ ಮಾತ್ರ ಕೊರೊನಾ ತಡೆಗಟ್ಟಲ್ಲು ಸಾಧ್ಯವಾಗಲಿದೆ. ಅಸಡ್ಡೆ ತೋರಿದಲ್ಲಿ ಮುಂದಿನ ಸ್ಥಿತಿ ಊಹಿಸಲು ಸಾಧ್ಯವಿಲ್ಲ. ಅದು ಅನುಭವಿಸುವಾಗ ನಾವೇಳುತ್ತಿದ್ದ ಮಾತುಗಳು ನೆನಪಿಸಿಕೊಂಡರೆ ಫಲವೇನು.

ಹಾಗಾಗಬಾರದು ಅಂದ್ರೆ ಕೂಡಲೇ ಜಾಗೃತರಾಗಿ. ಯಾರೊಬ್ಬರು ಮನೆಯಿಂದ ಹೊರಬರಬೇಡಿ. ಒಂದು ಇತ್ತೋ ಇಲ್ವೋ ಅಂದಂತೆ ಊಟ ಮಾಡುತ್ತಾ ಸಂಕಷ್ಟದ ದಿನಗಳನ್ನು ಎದುರಿಸಬೇಕು. ಅಲಕ್ಷ ತೋರುತ್ತಾ ಸಂಚಿಸಿದ್ದಲ್ಲಿ ಯಾರೇನು ಮಾಡಲಾಗಲ್ಲ. ಕಾರಣ ದಯವಿಟ್ಟು ಸಾರ್ವಜನಿಕರು ಈ ಕುರಿತು ತಿಳಿದುಕೊಳ್ಳಬೇಕು. ನಿಮ್ಮ ಕೈಯಲ್ಲಿಯೇ ಈ ಕೊರೊನಾ ರೋಗ ಹರಡುವುದು ಬಿಡುವುದು ನಿಮ್ಮಗಳ ಕೈಯಲ್ಲಿದೆ. ಕಾರಣ ಸ್ವಚ್ಛತೆ ಕಾಪಾಡಿ, ನಿತ್ಯ ಸ್ಯಾನಿಟಜೀರ್ ಬಳಸಿ, ಇಲ್ಲಾ ಡೆಟಾಲ್, ಡಿಟರಜೆಂಟ್ ಇತರೆ ಸಾಬೂನುಗಳನ್ನು ಸಹ ಬಳಸಿ ಕಾಲ ಕಾಲಕ್ಕೆ ಕೈತೊಳೆದುಕೊಳ್ಳಿ, ಯಾರೊಬ್ಬರುನ್ನು ಮುಟ್ಟ ಬೇಡಿ, ಸಾಕಷ್ಟು ಅಂತರ ಕಾಯ್ದುಕೊಳ್ಳಬೇಕು. ಈ ಎಲ್ಲಾ ನಿಯಮಗಳನ್ನು ಪಾಲಿಸಬೇಕೆಂದು ತಿಳಿಸಿದರು.
ಸುರಪುರ ಡಿವೈಎಸ್‍ಪಿ ವೆಂಕಟೇಶ ಹುಗಿಬಂಡಿ ಮಾತನಾಡಿ, ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು. ಸರ್ಕಾರ, ಪೊಲೀಸರು, ವೈದ್ಯರು ಕಾರ್ಮಿಕರು ನಾಗರಿಕರ ಉಳಿವಿಗಾಗಿ ಶ್ರಮಿಸಲಾಗುತ್ತಿದೆ. ಸೂಚಿಸಿದ ನಿಯಮಗಳನ್ನು ಪಾಲಿಸಿ. ಮನೆ ಬಿಟ್ಟು ಯಾರೊಬ್ಬರು ಬರಬೇಡಿ. ನಿಮ್ಮನ್ನು ನೀವು ಕಾಪಾಡಿಕೊಳ್ಳಿ. ಪ್ರಸ್ತುತ ಕೊರೊನಾ ಸ್ಥಿತಿಗತಿ ಕುರಿತು ಎಲ್ಲರಿಗೂ ತಿಳಿದಿದ್ದು, ಅಲಕ್ಷತನವಹಿಸುವದು ಸರಿಯಲ್ಲ ಎಂದರು. ನಾಗರಿಕರ ಹೋರಾಟ ಸಮಿತಿ ಜನರಲ್ಲಿ ಜಾಗೃತಿ ಮೂಡಿಸುತ್ತಿರುವದು, ಮಾಸ್ಕ್ ವಿತರಿಸುತ್ತಿರುವ ಶ್ಲಾಘನೀಯವಾಗಿದೆ. ಉತ್ತಮ ಕಾರ್ಯ ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಜಗನ್ನಾಥರಡ್ಡಿ, ಸಿಪಿಐ ಹನುಮರಡ್ಡೆಪ್ಪ ಉಪಸ್ಥಿತರಿದ್ದರು. ಸಮಿತಿ ಮುಖಂಡರಾದ ಗುರು ಕಾಮಾ, ರಾಜಕುಮಾರ ಚಿಲ್ಲಾಳ, ರಫೀಕ್ ಚೌದ್ರಿ, ಸಯ್ಯದ್ ಖಾದ್ರಿ, ಮಲ್ಲಿಕಾರ್ಜುನ ಗಂಗಾಧರಮಠ, ಮಲ್ಲಿಕಾರ್ಜುನ ಮುದನೂರ, ಶರಣಗೌಡ ಕಟ್ಟಿಮನಿ, ರಾಜಶೇಖರ ಪತ್ತಾರ, ಉಮೇಶ ಬಾಗೇವಾಡಿ, ಮಲ್ಲಿಕಾರ್ಜುನ ಬುಕಿಸ್ಟಗಾರ, ರಮೇಶ ನಗನೂರ, ತಲಕ್ ಚಾಂದ್, ಬಸವರಾಜ ತಳವಾರ, ಶಿವಕುಮಾರ ತಳವಾರ ಸೇರಿದಂತೆ ಇತರರು ಭಾಗವಹಿಸಿದ್ದರು. ದಿಗ್ಗಬೇಸ್ ದಿಂದ ಕನ್ಯಾಕೋಳೂರ ಅಗಸಿವರೆಗೂ ಮಾಸ್ಕ್‍ಗಳನ್ನು ವಿತರಿಸಲಾಯಿತು. ಅಲ್ಲದೆ ಮೈಕ್ ಮೂಲಕ ಜನರಲ್ಲಿ ಹಲವು ನಿಯಮಗಳನ್ನು ಪಾಲಿಸುವಂತೆ ಮನಮುಟ್ಟುವಂತೆ ತಿಳಿಸಲಾಯಿತು.