ಪ್ರಮುಖ ಸುದ್ದಿ
ಮಹಾದಾಯಿ ವಿಚಾರಃ ಬಂದ್ ಬೆಂಬಲಿಸಿ ಶರಣು ಗದ್ದುಗೆ ಉರುಳು ಸೇವೆ
ಯಾದಗಿರಿಃ ಮಹಾದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ರೈತಪರ ಸಂಘಟನೆಗಳು ಬುಧವಾರ ನೀಡಿದ ಉತ್ತರ ಕರ್ನಾಟಕ ಬಂದ್ ಕರೆಗೆ ಬೆಂಬಲಿಸಿ ನಗರದ ರೈಲ್ವೇ ಸ್ಟೇಷನ್ ಹತ್ತಿರ ಕರವೇ ಕಾರ್ಯಕರ್ತರು ಉಕ ಅಧ್ಯಕ್ಷ ಶರಣು ಗದ್ದುಗೆ ನೇತೃತ್ವದಲ್ಲಿ ಉರುಳು ಸೇವೆ ಸಲ್ಲಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶರಣು ಗದ್ದುಗೆ, ಉತ್ತರ ಕರ್ನಾಟಕದ ಜನರಿಗೆ ಮಹಾದಾಯಿ ಯೋಜನೆ ಸಮರ್ಪಕವಾಗಿ ಜಾರಿಗೊಳಿಸುವ ಮೂಲಕ ಕುಡಿಯಲು ನೀರು ಒದಗಿಸಬೇಕು.
ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ದ್ವಿಮುಖ ನೀತಿ ಅನುಸರಿಯುವದನ್ನು ಬಿಟ್ಟು ಸ್ವಪಕ್ಷೀಯ ರಾಜಕೀಯವನ್ನು ಬದಿಗೊತ್ತಿ ನಾಗರಿಕರಿಗೆ ನ್ಯಾಯ ಒದಗಿಸಕೊಡಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಅಧ್ಯಕ್ಷರು, ಕಾರ್ಯಕರ್ತರು ಭಾಗವಹಿಸಿದ್ದರು.