ಪ್ರಮುಖ ಸುದ್ದಿ
ಮಲೆ ಮಹದೇಶ್ವರನ ಸನ್ನಿಧಿಯಲ್ಲಿ ಕೋಟಿ ಕೋಟಿ ಹಣ!
ಚಾಮರಾಜನಗರ: ಎಪ್ಪತ್ತೇಳು ಮಲೆಗಳ ಒಡೆಯ ಎಂದೇ ಕರೆಯಲ್ಪಡುವ ಮಲೆಮಹದೇಶ್ವರ ಮತ್ತೆ ಕೋಟ್ಯಾಧೀಶನಾಗಿ ಮೆರೆದಿದ್ದಾನೆ. ಹೌದು, ಹನೂರು ತಾಲೂಕಿನ ಮಲೆಮಹದೇಶ್ವರ ದೇಗುಲದಲ್ಲಿ ಪ್ರತಿ ತಿಂಗಳು ಮಾದಪ್ಪನ ಸನ್ನಿಧಿಗೆ ಭಕ್ತರ ಕಾಣಿಕೆ ರೂಪದಲ್ಲಿ ಕೋಟಿಗಟ್ಟಲೆ ಹಣ ಹರಿದು ಬರುತ್ತಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಮಲೆ ಮಹದೇಶ್ವರ ಬೆಟ್ಟದ ದೇಗುಲದ ಹುಂಡಿಯಲ್ಲಿ 1ಕೋಟಿ 25ಲಕ್ಷ 50ಸಾವಿರದ 612 ರೂಪಾಯಿ ನಗದು ಸಂಗ್ರಹವಾಗಿದೆ. ನಿನ್ನೆ ತಡರಾತ್ರಿವರೆಗೆ ಎಣಿಕೆ ಕಾರ್ಯ ನಡೆದಿದ್ದು ನಗದು ಹಾಗೂ 28 ಗ್ರಾಂ ಬಂಗಾರ, 1 ಕೆ.ಜಿ.300 ಗ್ರಾಂ ಬೆಳ್ಳಿ ರೂಪಸಲ್ಲಿ ಭಕ್ತರಿಂದ ಕಾಣಿಕೆ ಸಂಗ್ರವಾಗಿದೆ ಎಂದು ತಿಳಿದು ಬಂದಿದೆ.
ಕಳೆದ ತಿಂಗಳಲ್ಲಿ ಎಣಿಕೆ ಕಾರ್ಯ ನಡೆದಾಗ 1 ಕೋಟಿ 28 ಲಕ್ಷ ರೂ ನಗದು ಹಾಗೂ ಚಿನ್ನ, ಬೆಳ್ಳಿ ಸಂಗ್ರವಾಗಿತ್ತು. ಪ್ರತಿ ತಿಂಗಳು ಭಕ್ತರು ಆರಾಧ್ಯದೇವನಿಗೆ ಕೋಟಿ ಕೋಟಿ ನಗದು ಕಾಣಿಕೆ ಹುಂಡಿಗೆ ಹಾಕುತ್ತಿರುವುದು ಮಹಾದೇಶ್ವರನ ಭಕ್ತರ ಭಕ್ತಿಗೆ ಸಾಕ್ಷಿಯಾಗಿದೆ ಎಂಬುದು ಭಕ್ತರ ಭಕ್ತಿಪೂರ್ಣ ಮಾತಾಗಿದೆ.