ಮಕ್ಕಳಿಗೆ ಮಾನವೀಯ ಮೌಲ್ಯಗಳ ಪಾಠ ಅಗತ್ಯಃ ಮಲ್ಲಮ್ಮ ಕೋಮಲ್
ಯಾದಗಿರಿ:ಪ್ರಸ್ತುತ ದಿನಮಾನಗಳಲ್ಲಿ ಮಾನವೀಯ ಮೌಲ್ಯಗಳು ನಶಿಸುತ್ತಿವೆ. ಅವುಗಳ ಉಳಿವಿಗಾಗಿ ಮಕ್ಕಳಲ್ಲಿ ಬಾಲ್ಯಾವಸ್ಥೆಯಿಂದಲೇ ಉತ್ತಮ ಮೌಲ್ಯಗಳನ್ನು ಬೆಳೆಸುವಲ್ಲಿ ಪಾಲಕರು, ಪೋಷಕರು ಹಾಗೂ ಶಿಕ್ಷಕರು ಶ್ರಮವಹಿಸಬೇಕಿದೆ ಎಂದು ರಾಜ್ಯ ಬಾಲ ಭವನ ಸೂಸೈಟಿಯ ಸದಸ್ಯೆ ಮಲ್ಲಮ್ಮ ಕೋಮಲ್ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲ ಭವನ ಸೂಸೈಟಿ ಯಾದಗಿರಿ ಇವರ ಸಹಯೋಗದಲ್ಲಿ ನಡೆದ ಅಭಿರಂಗ ಮಕ್ಕಳ ನಾಟಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಚಿಕ್ಕಂದಿನಿಂದಲೆ ಉತ್ತಮ ಸಂಸ್ಕಾರ ನೀಡಬೇಕು. ಪಾಲಕರು ಶಿಕ್ಷಕರು ಶೈಕ್ಷಣಿಕ ಕಲಿಕೆಯಲ್ಲಿ ಸಾಮಾನ್ಯ ಜ್ಞಾನ ಅಂದರೆ, ದೇಶದ ಸಂಪ್ರದಾಯ, ಸಂಸ್ಕøತಿ, ಬದುಕಿಗೆ ಬೇಕಾದ ಮೌಲ್ಯಗಳ ಜೀವಂತಿಕೆ ಕುರಿತು ನೀತಿ ಬೋಧನೆ ಮಾಡುವ ಮೂಲಕ ಉತ್ತನ ನಾಗರಿಕರನ್ನಾಗಿ ಮಾಡಬೇಕು. ಶೈಕ್ಷಣಿಕವಾಗಿ ಬೆಳೆದು ದೊಡ್ಡ ಹುದ್ದೆ ಪಡೆದು ತಿಂಗಳ ಮಾಸಿಕವನ್ನು ಲಕ್ಷಗಟ್ಟಲೆ ಪಡೆದರೆ ಆಯಿತು ಎಂದು ತಿಳಿಯಬೇಡಿ. ಮಕ್ಕಳನ್ನು ಮೊದಲು ಉತ್ತಮ ನಾಗರಿಕರನ್ನಾಗಿ ಮಾಡುವಲ್ಲಿ ಅವರಿಗೆ ಸರಿಯಾದ ಮಾರ್ಗವನ್ನು ತೋರುವುದು ಬಹು ಮುಖ್ಯವಿದೆ ಎಂದರು.
ಜಿಲ್ಲೆಯಲ್ಲಿರುವ 5-16 ವರ್ಷದ ಮಕ್ಕಳಿಗೆ ನಾಟಕಗಳ ಮೂಲಕ ಭಾಷೆ, ಸಂಸ್ಕøತಿ, ಸಾಹಿತ್ಯ, ಸಾಮಾಜಿಕ, ಮಕ್ಕಳಲ್ಲಿ ಆತ್ಮವಿಶ್ವಾಸ, ನಾಟಕ ಅಭಿರುಚಿ, ವ್ಯಕ್ತಿತ್ವ ವಿಕಸನ, ಧೈರ್ಯ ಹಾಗೂ ಇತರರೊಂದಿಗೆ ಬೆರೆತು ಜೀವಿಸುವುದು, ದೇಶಪ್ರೇಮ, ಪರಿಸರ ಕಾಳಜಿ ಮಾನವಿಯ ಮೌಲ್ಯಗಳನ್ನು ಬೆಳೆಸಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಭಿರಂಗ ಮಕ್ಕಳ ನಾಟಕೋತ್ಸವ ಕಾರ್ಯಕ್ರಮದಲ್ಲಿ ದೋರನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಂದ “ಕೆಟ್ಟ ಮೇಲೆ ಬುದ್ದಿ ಬಂತು” ಎಂಬ ನಾಟಕ, ಸರಕಾರಿ ಬಾಲಕಿಯರ ಬಾಲ ಮಂದಿರ ಮಕ್ಕಳಿಂದ “ಭ್ರೂಣ ಹತ್ಯೆ” ಎಂಬ ಕಿರುನಾಟಕ ಹಾಗೂ ಯಾದಗಿರಿ ಗ್ರೇಸ್ ಅನಾಥ ಆಶ್ರಮ ಮಕ್ಕಳಿಂದ “ಶಿಕ್ಷಣ ನನ್ನ ಹಕ್ಕು”ಎಂಬ ಕಿರುನಾಟಕವನ್ನು ರಂಗ ಪ್ರದರ್ಶನ ಮೂಲಕ ನೀಡಲಾಯಿತು.
ಕಾರ್ಯಕ್ರಮದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಅಬ್ದುಲ್ ರಹಿಮಾನ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಬೆಂಗಳೂರು ಬಾಲ ವಿಕಾಸ ಅಕಾಡಮಿ ಸದ್ಯಸ ಪ್ರಕಾಶ ಅಂಗಡಿ ಕನ್ನಳ್ಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀಕ್ಷಕ ಚಂದ್ರಕಾಂತ ಚಲವಾದಿ, ಬಾಲ ಕಾರ್ಮಿಕ ಇಲಾಖೆಯ ಯೋಜನಾಧಿಕಾರಿ ರಘುವೀರ ಸಿಂಗ್ ಠಾಕೂರ್, ಪರಸುರಾಮ, ಬೀರಪ್ಪ, ಕಾರ್ಯಕ್ರಮ ಸಂಯೋಜಕರು ಹಾಗೂ ಜಿಲ್ಲಾ ಬಾಲ ಭವನ ಸಿಂಬ್ಬಂದಿ ಅನೀಲಕುಮಾರ ಪಾಟೀಲ್ ಭಾಗವಹಿಸಿದ್ದರು.
ನಾಟಕೋತ್ಸವಕ್ಕೆ ಚಾಲನೆ: ಇದಕ್ಕೂ ಮೊದಲು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅಬ್ದುಲ್ ರಹಿಮಾನ್ ಅವರು, ನಗರದ ಹೊಸ ಬಸ್ ನಿಲ್ದಾಣದಲ್ಲಿ ಅಭಿರಂಗ ಮಕ್ಕಳ ನಾಟಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಯರಗೋಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತು ಕಿರುನಾಟಕ ಹಾಗೂ ಯಾದಗಿರಿ ಸರಕಾರಿ ಬಾಲಕಿಯರ ಬಾಲ ಮಂದಿರದ ಮಕ್ಕಳಿಂದ ಸ್ವಚ್ಛಭಾರತ ಅಭಿಯಾನ ಕುರಿತು ಕಿರುನಾಟಕವನ್ನು ಪ್ರದರ್ಶಿಸಿ, ಸಾರ್ವಜನಿಕರಲ್ಲಿ ಬಾಲ್ಯವಿವಾಹ ಕಾಯ್ದೆ ಹಾಗೂ ಸ್ವಚ್ಛ ಭಾರತ ಬಗ್ಗೆ ಕಾನೂನು ಅರಿವು ಮೂಡಿಸಲಾಯಿತು.