ಸರ್ಕಾರ ರಚನೆಯಲ್ಲಿ ಶಿವಸೇನೆ ವಿಫಲ, ಎನ್‍ಸಿಪಿಗೆ ರಾಜ್ಯಪಾಲ ಬುಲಾವ್.!
ನಾಳೆ ರಾತ್ರಿ 8 ಗಂಟೆ ಎನ್‍ಸಿಪಿಗೆ ಡೆಡ್ ಲೈನ್, ರಾಷ್ಟ್ರಪತಿ ಆಡಳಿತ ಸಾಧ್ಯತೆ
mallikarjun mudnoor
ಮುಂಬೈಃ ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಏನೋ ಮುಗೀತು ಆದರೆ ಸರ್ಕಾರ ರಚನೆ ಕಸರತ್ತು ಇನ್ನು ಮುಗಿಯುತ್ತಿಲ್ಲ. ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರೂ ಮಿತ್ರ ಪಕ್ಷ ಶಿವಸೇನೆ ಬೆಂಬಲ ನೀಡದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ರಚನೆಯಿಂದ ಹಿಂದೆ ಸರಿದು ವಿಪಕ್ಷ ಸ್ಥಾನ ಅಲಂಕರಿಸಲು ಸಿದ್ಧ ಎಂದಿತು.
ಆದರೆ ಶಿವಸೇನೆ ಸರ್ಕಾರ ರಚನೆಗೆ ಮುಂದಾಗಿತ್ತೇನೋ ನಿಜ, ನಿನ್ನೆ ಸಂಜೆ 7-30 ರವೆಗೆ 145 ಶಾಸಕರ ಬೆಂಬಲ ತೋರಿಸುವಂತೆ ರಾಜ್ಯಪಾಲರು ಸಮಯ ನಿಗದಿಗೊಳಿಸಿದ್ದರು. ಹೀಗಾಗಿ ಶಿವಸೇನೆ ಎನ್‍ಸಿಪಿ ಹಾಗೂ ಕಾಂಗ್ರೆಸ್ ಪಕ್ಷ ಸೇರಿ ಸರ್ಕಾರ ರಚನೆಗೆ ಮುಂದಾಗಿತ್ತು. ಅದು ಕೈಗೂಡದ ಕಾರಣ ಶಿವಸೇನೆ ಸರ್ಕಾರ ರವನೆ ವಿಫಲವಾದೀತು.
ಇದೀಗ ರಾಜ್ಯಪಾಲರು ಎನ್‍ಸಿಪಿ ಪಕ್ಷದ ಮುಖಂಡರನ್ನು ಸರ್ಕಾರ ರಚನೆಗೆ ಆಹ್ವಾನಿಸಿದ್ದಾರೆ. ನಾಳೆ ಮಂಗಳವಾರ ರಾತ್ರಿ 8 ಗಂಟೆಯವರೆಗೆ ಡೆಡ್ ಲೈನ್ ನೀಡಿದ್ದಾರೆ. ಎನ್‍ಸಿಪಿ ಕಾಂಗ್ರೆಸ್ ಪಕ್ಷದ ಮುಖಂಡರೊಂದಿಗೆ ನಾಳೆ ಚರ್ಚಿಸಿ ತನ್ನ ನಿರ್ಧಾರ ಪ್ರಕಟಿಸುವೆ ಎಂದು ಹೇಳಿಕೆ ನೀಡಿದೆ. ಹೀಗಾಗಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಮಹಾ ನಾಟಕವೇ ನಡೆಯುತ್ತಿದೆ. ಸರ್ಕಾರ ರಚನೆ ಕಸರತ್ತು ಮುಂದುವರೆದಿದೆ. ಬಿಜೆಪಿ ಮಾತ್ರ ಸರ್ಕಾರ ರಚನೆಯಿಂದ ಹಿಂದೆ ಸರಿದು ಎಲ್ಲರತ್ತ ಕಣ್ಣಿಟ್ಟು ನೋಡುತ್ತಿದೆ.
ಹೀಗಾಗಿ ರಾಜ್ಯಪಾಲರ ಅಂಗಳಕ್ಕೆ ಮಹಾರಾಷ್ಟ್ರ ರಾಜಕೀಯ ಚಂಡು ಬಂದು ಬಿದ್ದಿರುವ ಹಿನ್ನೆಲೆಯಲ್ಲಿ. ನಾಳೆಯೂ ಎನ್‍ಸಿಪಿ ಕೈಯಿಂದಲೂ ಸರ್ಕಾರ ನಡೆಸುವದು ಕಷ್ಟಸಾಧ್ಯವಿದ್ದು, ಹೀಗೆ ಕಗ್ಗಂಟು ಮುಂದುವರೆದಲ್ಲಿ ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆ ಹೇರಿದರೂ ಅಚ್ಚರಿಪಡುವ ಅಗತ್ಯವಿಲ್ಲ ಎನಿಸುತ್ತಿದೆ. ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಯಿಂದಲೂ ಸರ್ಕಾರ ರಚನೆ ಕೈತಪ್ಪಿದೆ. ಎರಡನೇ ಅತಿ ದೊಡ್ಡ ಪಕ್ಷ ಶಿವಸೇನೆಯೂ ಸರ್ಕಾರ ರಚನೆಯಲ್ಲಿ ವಿಫಲವಾಗಿದೆ. ಇದೀಗ ಎನ್‍ಸಿಪಿಗೆ ರಾಜ್ಯಪಾಲರು ಅವಕಾಶ ಕಲ್ಪಿಸಿದ್ದು, ನಾಳೆ ರಾತ್ರಿ ಗಂಟೆಯವರೆಗೆ ಕಾದು ನೋಡಬೇಕಿದೆ.