ಮಹಾರಾಷ್ಟ್ರದಲ್ಲಿ ಮುಂದುವರೆದ ಹೈಡ್ರಾಮ
ಎನ್‍ಡಿಎ ಮೈತ್ರಿಯಿಂದ ಹೊರಬರುತ್ತಾ ಶಿವಸೇನೆ.?
ಮುಂಬೈಃ ಮುಂಬೈ ನಲ್ಲಿ ಸರ್ಕಾರ ರಚನೆ ಬಹುಮತವಿಲ್ಲದ ಕಾರಣ ಸರ್ಕಾರ ರಚನೆಯಿಂದ ಹಿಂದೆ ಸರಿದಿದ್ದು, ಅಲ್ಲಿನ ರಾಜ್ಯಪಾಲರಿಗೆ ಬಿಜೆಪಿ ತನ್ನ ನಿಲುವನ್ನು ಸಷ್ಟಪಡಿಸಿದೆ. ಹೀಗಾಗಿ ಎರಡನೇ ದೊಡ್ಡ ಪಕ್ವಾಗಿ ಹೊರಹೊಮ್ಮಿದ ಶಿವಸೇನೆಗೆ ರಾಜ್ಯಪಾಲರು ಸಕಾರ ರಚನೆಗೆ ಆಹ್ವಾನ ನೀಡಿದದು, ಶಿವಸೇನೆ ತನ್ನ ಬೆಂಬಲಕ್ಕೆ ಎನ್‍ಸಿಪಿ ಹಾಗೂ ಕಾಂಗ್ರೆಸ್ ಬೆಂಬಲ ಪಡೆಯುವ ಸಾಧ್ಯತೆ ಕಂಡು ಬರುತ್ತಿದೆ.
ರಾಜ್ಯಪಾಲರು ನಾಳೆ ಅಂದ್ರೆ ಸೋಮವಾರ ಸಂಜೆ 7-30 ರೊಳಗೆ ಬಹುಮತ ಸಾಬೀತು ಪಡಿಸುವಂತೆ ನಿರ್ದೇಶನ ನೀಡಿದ್ದು, ಶಿವಸೇನೆ ಈಗಾಗಲೇ ಎನ್‍ಸಿಪಿ ಹಾಗೂ ಕಾಂಗ್ರೆಸ್ ನ್ನು ಸಂಪರ್ಕಿಸಿದೆ ಎನ್ನಲಾಗಿದೆ. ಹೀಗಾಗಿ ಶಿವಸೇನೆ ಎನ್‍ಡಿಎ ಮೈತ್ರಿಕೂಟದಿಂದ ಹೊರಬರುವ ಸಾಧ್ಯತೆ ಕಂಡು ಬಂದಿದ್ದು, ಕಾಂಗ್ರೆಸ್ ಹಾಗೂ ಎನ್‍ಸಿಪಿ ಶಾಸಕರನ್ನು ರೆಸಾರ್ಟ್ಸ್‍ಗೆ ಕಳುಹಿಸಲಾಗಿದೆ ಎಂದು ಸುದ್ದಿ ತಿಳಿದು ಬಂದಿದೆ.
ಶಿವಸೇನೆ ಸಿದ್ದಾಂತವನ್ನು ಎನ್‍ಸಿಪಿ ಮತ್ತು ಕಾಂಗ್ರೆಸ್‍ಗರಿಗೂ ಒಪ್ಪಿಕೊಂಡು ಶಿವಸೇನೆ ಜಪತೆ ಸೇರಿ ಮಹಾರಾಷ್ಟ್ರದ ಗದ್ದುಗೆ ಏರುವದೇ ಎಂಬುದು ಕಾದು ನೋಡಬೇಕಿದೆ.