ಮಮದಾಪುರ ಕೋಟೆ ಆಂಜನೇಯ ಪೂಜಾ ಮಂಗಲೋತ್ಸವ
ಶಹಾಪುರಃ ಮಮದಾಪುರ ಕೋಟೆ ಆಂಜನೇಯ ಪೂಜಾ ಮಂಗಲೋತ್ಸವ
ಶ್ರಾವಣ ಶ್ರದ್ಧಾ ಭಕ್ತಿಗೆ ಶಕ್ತಿ ತುಂಬುವ ಮಾಸ
ಯಾದಗಿರಿ, ಶಹಾಪುರಃ ನಗರದ ಮಂದಾಪುರ ಸಮೀಪದ ಬೆಟ್ಟದ ಮೇಲಿರುವ ಕೋಟೆ ಆಂಜನೇಯ ದೇವಸ್ಥಾನದಲ್ಲಿ ಶನಿವಾರ ಶ್ರಾವಣ ಮಾಸ ಧಾರ್ಮಿಕ ಕಾರ್ಯ ಮಂಗಲೋತ್ಸವ ಜರುಗಿತು.
ಇಡಿ ಶ್ರಾವಣ ಮಾಸ ಶ್ರೀ ಆಂಜನೇಯ ದೇವಸ್ಥಾನದಲ್ಲಿ ನಿತ್ಯ ಧಾರ್ಮಿಕ ವಿಶೇಷ ಪೂಜೆ, ರಾತ್ರಿ ಭಜನೆ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ಜರುಗಿವೆ. ಶ್ರಾವಣ ಕಡೆಯ ಶನಿವಾರದ ಅಂಗವಾಗಿ ಇಂದು ಎಲ್ಲಾ ಭಕ್ತಾಧಿಗಳು ಸೇರಿ ಪ್ರತಿವರ್ಷದಂತೆ ಮಂಗಲೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ದರ್ಶನಕ್ಕೆ ಬರುವ ಭಕ್ತಾಧಿಗಳಿಗೆ ವಿಶೇಷ ಭೋಜನೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಬೆಳಗ್ಗೆಯಿಂದಲೇ ಶ್ರೀಕೋಟೆ ಆಂಜನೇಯ ಮೂರ್ತಿಗೆ ಅಭಿಷೇಕ, ಪೂಜೆ ಸಲ್ಲಿಸಲಾಗಿದೆ. ಭಕ್ತಾಧಿಗಳು ನೈವೇದ್ಯ, ಕಾಯಿ ಕರ್ಪೂರ ಅರ್ಪಿಸಿ ದರ್ಶನ ಪಡೆದರು.
ಈ ದೇವಸ್ಥಾನ ದಕ್ಷಿಣಾಭಿಮುಖವಾಗಿರುವದು ವಿಷೇಶ ವಾಗಿದೆ. ಕೋಟೆಯ ಮೆಟ್ಟಿಲು ಮಾರ್ಗ ದಕ್ಷಿಣ ಭಾಗಕ್ಕೆ ಈ ಸಣ್ಣ ದೇವಸ್ಥಾನವಿದೆ. ಕಳೆದ ಐದಾರು ವರ್ಷದಿಂದ ಇಲ್ಲಿ ಪೂಜೆ ಪುನಸ್ಕಾರ ನಡೆದು ಬರುತ್ತಿದೆ. ಮಂಗಲೋತ್ಸವದಲ್ಲಿ ಸಾವಿರಾರು ಭಕ್ತಾಧಿಗಳು ಭಾಗವಹಿಸಿ ದಕ್ಷಿಣಾಭಿಮುಖ ಆಂಜಣೇಯನ ದರ್ಶನ ಪಡೆದು ಪುನೀತರಾದರು.




