ಮಾನವನ ಹೋಲಿಕೆಯ ಮಂಗ ಪ್ರತ್ಯಕ್ಷ : ಮನುಜ ಮೊದಲು ಮಾನವನಾಗು ಸಂದೇಶ!?
-ವಿನಯ ಮುದನೂರ್
ಇಂಗ್ಲೆಂಡಿನ ಖ್ಯಾತ ಜೀವವಿಗ್ನಾನಿ ಚಾರ್ಲ್ಸ್ ರಾಬರ್ಟ್ ಡಾರ್ವಿನ್ ಅವರ ಜೀವ ವಿಕಾಸವಾದದ ವಿಶ್ವಕ್ಕೇ ಪರಿಚಯವಿದೆ. 1831ರಿಂದ 1836ರವರೆಗೆ ಡಾರ್ನಿನ್ ಹೆಚ್.ಎಮ್.ಎಸ್.ಬೀಗಲ್ ಹಡಗಿನಲ್ಲಿ ಭೂರಚನೆಶಾಸ್ತ್ರ ವಿಗ್ನಾನಿಯಾಗಿ ಪ್ರವಾಸ ಮಾಡಿದರು. ಅದೇ ವೇಳೆ ಜೀವ ಪಳಿಯುಳಿಕೆಗಳ ಬಗ್ಗೆ ಅಧ್ಯಯನ ನಡೆಸಿ ಅನೇಕ ಜೀವವಿಧಗಳನ್ನು ವೀಕ್ಷಿಸಿದರು. ಪರಿಣಾಮ 1858ರಲ್ಲಿ ನೈಸರ್ಗಿಕ ಆಯ್ಕೆಯಿಂದ ಜೀವವಿಕಾಸವಾದವನ್ನು ಮಂಡಿಸಿದ ಡಾರ್ವಿನ್ 1859 ‘ಆನ್ ದ ಆರಿಜನ್ ಆಫ್ ಸ್ಪೀಶೀಸ್’ ಎಂಬ ಮಹಾಕೃತಿ ಮೂಲಕ ಜೀವವಿಕಾಸ ಸಿದ್ಧಾಂತವನ್ನು ಪ್ರತಿಪಾದಿಸಿದರು.
ಜೀವವಿಕಾಸವಾದದ ಫಲವಾಗಿ ‘ಮಂಗನಿಂದ ಮಾನವ’ ಎಂಬುದು ತಿಳಿದು ಬಂದಿದೆ ಎಂಬುದು ಇತಿಹಾಸ. ಆದರೆ, ಇದೀಗ ಚೀನಾ ದೇಶದಲ್ಲಿ ಥೇಟು ಮಾನವನನ್ನೇ ಹೋಲುವ ಅಪರೂಪದ ಮಂಗ ಪತ್ತೆಯಾಗಿದೆ. ಕಣ್ಣು, ಮೂಗು, ಬಾಯಿ, ಮತ್ತು ತಲೆಗೂದಲು ಎಲ್ಲವರೂ ಮಾನವನಂತೆಯೇ ಇರುವ ಮಂಗದ ವಿಡಿಯೋ ಈ ವಿಶ್ವದೆಲ್ಲೆಡೆ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ 80ಲಕ್ಷ ಬಾರಿ ಜನ ವಿಡಿಯೋ ವೀಕ್ಷಿಸಿದ್ದಾರೆ.
ಟಿಯಾಂಜಿನ್ ಝೂನ ಜಾತಿಗೆ ಸೇರಿದ 18ವರ್ಷದ ಮಂಗ ಇದು ಎಂದು ಗುರುತಿಸಲಾಗಿದೆ. ಮಾನವನಂತಿರುವ ಮಂಗನ ದೃಶ್ಯ ನೋಡಲು ಜನ ಗೂಗಲ್ ಸರ್ಚ್ ಮಾಡುತ್ತಲೇ ಇದ್ದಾರೆ. ಇನ್ನು ಮಂಗನಂತಿದ್ದ ಮಾನವ ವಿಕಾಸವಾಗಿ ಶತಮಾನಗಳೇ ಕಳೆದಿವೆ. ಈ ಸಂದರ್ಭದಲ್ಲಿ ಮಾನವನಂತಿರುವ ಮಂಗ ಪತ್ತೆಯಾಗಿದ್ದು ವಿಶ್ವದೆಲ್ಲೆಡೆ ತೀವ್ರ ಕುತೂಹಲ ಕೆರಳಿಸಿದೆ. ವಿಗ್ನಾನಿಗಳು, ಸಂಶೋಧಕರು ಈ ಬಗ್ಗೆ ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅಪರೂಪದ ಮಂಗದ ಕುರಿತು ಇನ್ನಷ್ಟು ಸಂಶೋಧನೆಗಳು ನಡೆದ ಬಳಿಕವೇ ಮತ್ತಷ್ಟು ಮಾಹಿತಿ ಹೊರಬೀಳಲಿದೆ.
ಮಾನವನಂತಿರುವ ಮಂಗ ಪತ್ತೆ ಆಗಿರುವುದು ಮನುಷ್ಯನಿಗೆ ಪ್ರಕೃತಿ ಮಾಡಿರುವ ಅಣಕ ಎಂದೇ ಕೆಲವರು ವಾದಿಸುತ್ತಿದ್ದಾರೆ. ಮಂಗನಿಂದ ಮಾನವನಾಗಿ ವಿಕಾಸ ಹೊಂದಿರುವ ಮನುಷ್ಯ ನಿಜರ್ಥದಲ್ಲಿ ಇನ್ನೂ ಮಾನವನಾಗಿಲ್ಲ. ತನ್ನ ಮೂಲ ಬುದ್ಧಿಯನ್ನು ಬಿಡದೆ ಪ್ರಕೃತಿಯ ಮೇಲೆ ದೌರ್ಜನ್ಯ ಎಸಗುತ್ತಿದ್ದಾನೆ. ಮನುಷ್ಯ ಜತಿ ತಾನೊಂದೇ ವಲಂ ಎಂಬ ಮಂತ್ರ ಬಿಟ್ಟು ದ್ವೇಷದಲ್ಲಿ ತೊಡಗಿದ್ದಾನೆ. ಪರಿಣಾಮ ಮನುಷ್ಯನ ಮನೋವಿಕಾರದ ಅಣಕವಾಗಿ ಮನುಷ್ಯನಂತಿರುವ ಮಂಗ ಪ್ರತ್ಯಕ್ಷವಾಗಿದೆ. ಇನ್ನಾದರೂ ಮನುಷ್ಯ ಮೊದಲು ಮನುಷ್ಯನಾಗಿ ಪರಿವರ್ತನೆ ಆಗಲಿ ಎಂಬುದು ಆಧ್ಯಾತ್ಮ ಪ್ರತಿಪಾದಕರ ವಾದವಾಗಿದೆ.