ಪ್ರಮುಖ ಸುದ್ದಿ

ಮನ್ ಕೀ ಬಾತ್ಃ ಸ್ವದೇಶಿ ಉತ್ಪನ್ನಗಳಿಗೆ ಒತ್ತು, ಕರ್ನಾಟಕ ದಂಪತಿಗಳ ಕಾರ್ಯಕ್ಕೆ ಮೋದಿ ಶ್ಲಾಘನೆ

ಸ್ವದೇಶಿ ಉತ್ಪನ್ನಗಳಿಗೆ ಒತ್ತು- ಮೋದಿ ಮನ್ ಕೀ ಬಾತ್

ವಿವಿಡೆಸ್ಕ್ಃ ಈ ವರ್ಷದ ಕೊನೆಯ ಮನ್ ಕೀ ಬಾತ್ ಇದಾಗಿದ್ದು, ಇನ್ನೇನು‌ ಹೊಸ‌ವರ್ಷ ಆಗಮಿಸುವ ಕ್ಷಣಗಣನೆಯಲ್ಲಿದೆ ಎಂದು ದೇಶದ ಜನರನ್ನು ಉದ್ದೇಶಿಸಿ ಮನ್ ಕೀ ಬಾತ್ ಮೂಲಕ ಮಾತು ಆರಂಭಿಸಿದ ಪ್ರಧಾನಿ ಮೋದಿಯವರು,

ಹಲವಾರು ಜನ ನನಗೆ ಪತ್ರ ಬರೆದಿದ್ದಾರೆ. ಹಲವು ವಿಚಾರಗಳನ್ನು ಪ್ರಸ್ತುತ ಪಡಿಸಿದ್ದಾರೆ.

ಅವರೆಲ್ಲರಿಗೂ ಅಭಿನಂದನೆ ವ್ಯಕ್ತಪಡಿಸುತ್ತಾ, ಆ ಕುರಿತು ಕೆಲವು ವಿಚಾರಗಳನ್ನು ಮಾತಾಡುತ್ತೇನೆ ಎಂದ ಅವರು, ವಿಶಾಖ ಪಟ್ಟಣದ ವೆಂಕಟಚಲ ಅವರು ಪತ್ರ ಬರೆದಿದ್ದಾರೆ. ವೆಂಕಟಜೀ ಚಾಟ್ ನ್ನು ಮಾಡಿ‌ ಕಳುಹಿಸಿದ್ದಾರೆ.

ಎಬಿಸಿ ಆತ್ಮನಿರ್ಭರ ಚಾಟ್. ವಿದೇಶಿ ಪ್ರೊಡಕ್ಟ್ ಇನ್ಮೇಲೆ ಬಳಸುವದಿಲ್ಲ ಎಂದು ಸಂಕಲ್ಪ ಮಾಡಿದ್ದು, ಆತ್ಮ‌ನಿರ್ಭರ ಭಾರತ ನಿರ್ಮಾಣಕ್ಕೆ ನಮ್ಮ ಸಹಕಾರವಿದ್ದು, ಇನ್ನೆಂದಿಗು ವಿದೇಶದಲ್ಲಿ ತಯಾರಿಸಲ್ಪಟ್ಟ ವಸ್ತುಗಳು ಇತರೆ ಯಾವುದೇ ಆಗಲಿ ಬಳಕೆ ಮಾಡುವದಿಲ್ಲ ಎಂದು ಸಂಕಲ್ಪ‌ದೊಂದಿಗೆ ಸ್ಥಳೀಯವಾಗಿ‌ ತಯಾರಿಸಲ್ಪಡುವಂಥ ವಸ್ತುಗಳನ್ನೆ ಬಳಸುತ್ತೇನೆ ಎಂದು ಪ್ರಾಮಾಣಿಕರೀಸಿದ್ದಾರೆ.

ಅವರ ನಿರ್ಣಯಕ್ಕೆ ನಾನು ಶುಭಕೋರುತ್ತೇನೆ. ಅದರಂತೆ ದೇಶದ‌ ಜನರು‌ ಲೋಕಲ್ ‌ಫಾರ್ ಓಕಲ್‌ ದೊಡ್ಡಮಟ್ಟದಲ್ಲಿ ಸಹಾಕರ ನೀಡಬೇಕಿದೆ.

ನಮ್ಮ ದೇಶದಲ್ಲಿ ತಯಾರಾಗುವ ವಸ್ತುಗಳನ್ನು ಬಳಸಬೇಕಿದೆ. ಸ್ವದೇಶಿ ಉತ್ಪನ್ನಗಳನ್ನೆ ಬಳಸಬೇಕಿದೆ.

ಅಲ್ಲದೆ ಸ್ವದೇಶ ಸಂಸ್ಕೃತಿ ಪರಂಪರೆಯ ಉತ್ಪನ್ನಗಳು ಉತ್ತಮವಾಗಿವೆ ಎಂದು ಸಹ‌ ವೆಂಕಟ್ ಸಹಮತ ವ್ಯಕ್ತಪಡಿಸಿದ್ದಾರೆ.

ಅದರಂತೆ ಎಲ್ಲರು ಸ್ಥಳೀಯ‌‌ ಸ್ವದೇಶಿ ಉತ್ಪನ್ನಗಳನ್ನೆ ಬಳಸಬೇಕು ಎಂದು‌ ಕರೆ‌ ನೀಡಿದರು.
ಸಂಕಷ್ಟದ ಮಧ್ಯೆ ಸ್ವದೇಶಿ ಉತ್ಪನ್ನಗಳ ಬಳಕೆಗೆ ಒತ್ತು‌ ನೀಡಲಾಗುತ್ತಿದೆ.

ಆತ್ಮ ನಿರ್ಭರ ಮನೆ ಮನೆಯಲ್ಲೂ ಕೇಳಿ ಬರುತ್ತಿದೆ. ಈಗ ಜನರು ಹೇಳುವ ದಾಟಿಯೇ ಬದಲಾಗಿದೆ.

ದೇಶದ ಹಲವಾರು ಜನರು ಗುರು ಗೋವದರಿಂದ‌ ಪ್ರಭಾವಿತರಾಗಿದ್ದಾರೆ.

ದೇಶದ ಸಂಸ್ಕೃತಿ,‌ ಪರಂಪರೆ ಉಳಿವಿಗಾಗಿ ತಮ್ಮ ಜೀವನವನ್ನೆ ಸವಿಸಿದ ಬಲಿದಾನ‌ ಹೊಂದಿದ‌ ಗುರು‌ ಗೋವಿಂದರು ಸೇರಿದಂತೆ ಹಲವಾರು‌ ಯೋಗಿಗಳಾಗಿದ್ದಾರೆ ಅವರ ಸ್ಮರಣೆ ಇಂದು ಅಗತ್ಯವಾಗಿದೆ.

2020 ನೇ ವರ್ಷ ಪಾಠ ಕಲಿಸಿದೆ. ಇದೀಗ 2021 ಹೊಸ ವರ್ಷವು ಸ್ವಾಗತಿಸಿಸೋಣ.

ದೇಶಿಯ ವಸ್ತುಗಳ ಬಳಕೆ ಜಾಸ್ತಿಯಾಗಿದೆ. ಜನರ ಬೇಡಿಕೆ ಹೆಚ್ಚಿದೆ. ಸಮಸ್ಯೆಗಳನ್ನು‌ ಮೆಟ್ಟಿ ನಿಂತು ದೇಶ ಮುನ್ನಡೆಯುತ್ತಿದೆ.

ಆ ನಿಟ್ಟಿ‌ನಲ್ಲಿ ಎಲ್ಲರೂ ಸ್ವದೇಶಿ ಉತ್ಪನ್ನಗಳಿಗೆ ಒತ್ತು ನೀಡುತ್ತಿರುವದು ಕಂಡು ಬಂದಿದೆ.

ಇದು ಉತ್ತಮ‌ ಬೆಳವಣಿಗೆಯಾಗಿದ್ದು,
ಅಲ್ಲದೆ ಕರ್ನಾಟಕದ ಶ್ರೀರಂಗಪಟ್ಟಣದಲ್ಲಿ ಶ್ರೀವೀರಭದ್ರಸ್ವಾಮಿ ದೇವಾಲಯದ ಜೀರ್ಣೋದ್ಧಾರ ಮಾಡಿದ ಯುವ ಬ್ರಿಗೇಡ್ ಸಹ ಪತ್ರ ಬಂದಿದೆ.

ದೇವಾಲಯದ ಜೀರ್ಣೋದ್ಧಾರ ಮಾಡಿದ ಬಗ್ಗೆ ಮಾಹಿತಿ ನೀಡಿದೆ. ಫೋಟೊ ಸಹ‌ ಕಳುಹಿಸಿದ್ದಾರೆ. ಇದೆಲ್ಲ ನಮ್ಮ ದೇಶದ ಯುವಕರಿಗೆ ಯಾಬುದೇ ಸವಾಲ್ ನ್ನು ಸಲೀಸಾಗಿ‌ ಮಾಡಲಿದ್ದಾರೆ.

ಯುವಕರ‌ ನಡೆ ದೇಶದ ಏಳ್ಗೆಯತ್ತ‌ ಸಾಗುತ್ತಿದೆ. ಶ್ರಮದಿಂದ ದುಡಿಯಲು ಅವರು‌ ಮನಸ್ಸು ಮಾಡಿದ್ದಾರೆ. ಇದೆಲ್ಲವೂ ಬದಲಾವಣೆಯತ್ತ ಸಾಗುತ್ತಿದೆ ಎಂದು ಹೆಮ್ಮೆ ಪಟ್ಟರು.

ಯುವ ಬ್ರಿಗೇಡ್ ಜನಪರ ಕಾಳಜವಹಿಸಿ ಕೆಲಸ ಮಾಡುತ್ತಿದೆ ಎಂದು‌ ಮನ್ ಕೀ ಬಾತ್ ನಲ್ಲಿ ಮೋದಿ‌ ಶ್ಲಾಘಿಸಿದರು.

ಅಲ್ಲದೆ ಪಾಳುಬಿದ್ದ ದೇಗುಲಗಳ ನವೀಕರಣ ಮಾಹಿತಿ ನೀಡಿದ್ದಾರೆ. ಯುವ ಬ್ರಿಗ್ರೇಡ್ ಕಾರ್ಯಕ್ಕೆ ಮೆಚ್ವುಗೆ ವ್ಯಕ್ತಪಡಿಸಿದರು.

ಸೋಮೇಶ್ವರ ಬೀಚ್ ಸ್ವಚ್ಛಗೊಳಿಸಿದ ಕರ್ನಾಟಕದ ದಂಪತಿಗಳಿಗೆ ಪ್ರಧಾನಿ ಮೋದಿ ಮನ್ ಕೀ ಬಾತ್‌ನಲ್ಲಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕರ್ನಾಟಕದ ಯುವ ಬ್ರಿಗೇಡ್ ಪಾಳು ಬಿದ್ದ ದೇಗುಲ‌ ಜೀರ್ಣೋದ್ಧಾರ ಕಾರ್ಯಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದರು

Related Articles

Leave a Reply

Your email address will not be published. Required fields are marked *

Back to top button