ಪ್ರಮುಖ ಸುದ್ದಿ
ಮೋದಿ ಕಾರ್ಯಕ್ರಮ ಯಶಸ್ಸಿಗೆ ಮಂಡ್ಯದಲ್ಲಿ ವಿಶೇಷ ಪೂಜೆ
ಮಂಡ್ಯಃ ಬೆಂಗಳೂರಿನಲ್ಲಿ ಇದೇ ಜ.4 ರಂದು ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭಕ್ಕೆ ಆಗಮಿಸುತ್ತಿರುವ ಪ್ರಧಾನಿ ಮೋದಿಜೀಯವರಿಗೆ ಯಾವುದೆ ಅಡೆತಡೆ ಬಾರದಿರಲಿ ಮತ್ತು ಕಾರ್ಯಕ್ರಮಕ್ಕೆ ಆಗಮಿಸುವ ಕಾರ್ಯಕರ್ತರಿಗೆ ಯಾವುದೇ ಸಮಸ್ಯೆಯಾಗದಿರಲಿ ಎಂದು ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಕಾಳಿಕಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಯಾಗ ಯಜ್ಞ ನಡೆಸಿದರು.
9 ದಿಕ್ಕಿನಡೆಗೆ ಕಾಯಿ ಕರ್ಪೂರ ಧೂಪ ಹೋಮ ಹವನ ಕಾರ್ಯಕ್ರಮ ನಡೆಸುವ ಮೂಲಕ ಕಾಂಗ್ರೆಸ್ ಅಂದು ಕನ್ನಡಪರ ಸಂಘಟನೆಗಳಿಂದ ಬಂದ್ ಗೆ ಕರೆ ನೀಡುವ ಮೂಲಕ ಬಿಜೆಪಿ ಕಾರ್ಯಕ್ರಮ ಯಶಸ್ವಿಯಾಗದಂತೆ ರೂಪಿಸಿರುವ ಷಡ್ಯಂತರಕ್ಕೆ ವಿರುದ್ಧವಾಗಿ ವಿಶೇಷ ಪೂಜೆಯನ್ನು ದುಷ್ಟ ಶಕ್ತಿಯನ್ನು ತಡೆಯವಂತ ಶಕ್ತಿದಾಯಕ ಪೂಜೆ ಮಾಡಿಸಲಾಗಿದೆ ಎಂದು ಭಾಜಪ ಕಾರ್ಯಕರ್ತ ಶಿವಕುಮಾರ ಆರಾಧ್ಯ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.