ಕೇಂದ್ರ ಸಚಿವರಿಗೆ ಮಂಡ್ಯ ಸಂಸದೆ ಸುಮಲತಾ ಅಭಿನಂದನೆ ಸಲ್ಲಿಸಿದ್ದೇಕೆ ?
ಮಂಡ್ಯ: ಕೆಆರ್ ಎಸ್ ಆಣೆಕಟ್ಟೆಯಿಂದ ರೈತರ ಬೆಳೆಗಳಿಗಾಗಿ ನಾಲೆಗಳಿಗೆ ನೀರು ಹರಿಸಲು ಆದೇಶ ನೀಡಿದ್ದಕ್ಕಾಗಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ಗೆ ಅಭಿನಂದನೆಗಳು ಎಂದು ಮಂಡ್ಯ ಸಂಸದೆ ಸುಮಲತಾ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಜೂನ್ 20 ರಂದು ಕೇಂದ್ರ ಸಚಿವರಿಗೆ ಪತ್ರ ಬರೆದು ನೀರು ಹರಿಸುವಂತೆ ಮನವಿ ಮಾಡಿದ್ದರು. ಜೂನ್ 28 ರಂದು ಕೇಂದ್ರ ಸಚಿವರು ಸುಮಲತಾಗೆ ಪತ್ರದ ಮೂಲಕ ಉತ್ತರಿಸಿದ್ದರು.
ಜುಲೈ 15 ರಂದು ಸಚಿವ ಪುಟ್ಟರಾಜು ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆದಿದ್ದು ಸಭೆಯಲ್ಲಿ ರೈತರ ಬೆಳೆಗಳಿಗೆ 10 ದಿನಗಳ ಕಾಲ ನಾಲೆ ಮೂಲಕ ನೀರು ಹರಿಸಲು ತೀರ್ಮಾನಿಸಲಾಗಿತ್ತು . ಜೂನ್ 16 ರ ಮಧ್ಯರಾತ್ರಿಯಿಂದ ರೈತರ ಬೆಳೆಗಳಿಗೆ ನಾಲೆ ಮೂಲಕ ನೀರು ಹರಿಸಲಾಗಿತ್ತು. ಆದ್ರೆ, ಇದೀಗ ಕೇಂದ್ರ ಜಲಾನಯನ ಸಚಿವರಿಗೆ ಮಂಡ್ಯ ಸಂಸದೆ ಅಭಿನಂದನೆ ಸಲ್ಲಿಸುವ ಮೂಲಕ ದೋಸ್ತಿಗಳಿಗೆ ಟಾಂಗ್ ನೀಡಿದ್ದಾರೆ. ಆ ಮೂಲಕ ಮಂಡ್ಯದ ನಾಲೆಗೆ ನೀರು ಹರಿಸುವಲ್ಲಿ ನನ್ನ ಪಾತ್ರ ಮುಖ್ಯ ಎಂಬ ಸಂದೇಶವನ್ನು ಸುಮಲತಾ ಸಾರಿದ್ದಾರೆ. ಮಂಡ್ಯ ನಾಲೆಗಳಿಗೆ ನೀರು ಹರಿಸಿದ ವಿಚಾರ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.